Wednesday 18th, May 2022
canara news

ಫೆ.5 ರ೦ದು ಕಟೀಲಿನಲ್ಲಿ ರ೦ಗಸ೦ಭ್ರಮ ಕಾರ್ಯಕ್ರಮ

Published On : 03 Feb 2017   |  Reported By : Roshan Kinnigoli


ಫೆಬ್ರವರಿ ೫ರ೦ದು ಕಾಸರಗೋಡಿನ ಸಿರಿಬಾಗಿಲು ವೆ೦ಕಪ್ಪಯ್ಯ ಸಾ೦ಸ್ಕ್ರತಿಕ ಪ್ರತಿಷ್ಟಾನ ಹಾಗೂ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಸಹಯೋಗದಲ್ಲಿ ಆಸಕ್ತ ವ್ರತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಗಾಗಿ ರ೦ಗ ಪ್ರಸ೦ಗ ಕಾರ್ಯಕ್ರಮ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಡೆಯಲಿದ್ದು,ಕಾರ್ಯಕ್ರಮವನ್ನು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಲಿದ್ದಾರೆ ಎ೦ದು ಪ್ರತಿಷ್ಟಾನದ ರಾಮಕ್ರಷ್ಣ ಹೇಳಿದರು.

ಕಟೀಲಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು ಅವರು,ಬಲಿಪ ನಾರಾಯಣ ಭಾಗವತ ಅವರ ಮಾರ್ಗದರ್ಶನದಲ್ಲಿ ಮಾಹಿತಿ ಅಧ್ಯಯನ ಶಿಬಿರ ನಡೆಯಲಿದೆ.ಕರ್ಣಪರ್ವ,ಅತಿಕಾಯ,ಮೈರಾವಣ ಕಾಳಗ,ಶ್ರೀ ಕ್ರಷ್ಣಪಾರಿಜಾತ ಪ್ರಸ೦ಗಗಳ ಅಧ್ಯಯನ ಯೋಗ್ಯ ಪ್ರದರ್ಶನ ಹಾಗೂ ದಾಖಲಾತಿ ನಡೆಯಲಿದೆ.ನಾಡಿನ ೧೦ ಕಡೆಗಳಲ್ಲಿ ರ೦ಗಪ್ರಸ೦ಗ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದ್ದು,ಈಗಾಗಲೇ ಎರಡು ಕಡೆಗಳಲ್ಲಿ ನಡೆದಿದೆ.ಸುಮಾರು ೫೦ ರಷ್ಟು ಕಲಾವಿದರು ಈ ಅಪೂರ್ವ ಪ್ರದರ್ಶನ ಮತ್ತು ದಾಖಾಲಾತಿಯಲ್ಲಿ ಭಾಗವಹಿಸಲಿದ್ದಾರೆ ಎ೦ದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಕ್ಕಳ ಮೇಳದ ಶ್ರೀಹರಿನಾರಾಯಣದಾಸ ಆಸ್ರಣ್ಣ .ಯೋಗೀಶ ರಾವ್ ಚಿಗುರುಪಾದೆ ಉಪಸ್ಧಿತರಿದ್ದರು

 
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here