Tuesday 17th, May 2022
canara news

ಮುಂಬಯಿ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ಕಾವ್ಯ ಸಂವಾದ-ಗೋಕಾಕರ ಗೀತೆಗಾಯನ

Published On : 05 Feb 2017   |  Reported By : Rons Bantwal


ಗೋಕಾರು ವಿಶ್ವಮಾನವ ದೃಷ್ಟಿವುಳ್ಳವರಾಗಿದ್ದರು : ಡಾ| ಕೆ.ಎಸ್ ಶರ್ಮಾ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.04: ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಕವಿ ಸಮಯ-ಕಾವ್ಯ ಸಂವಾದ ವಿಶೇಷ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿ ಅಲ್ಲಿನ ಕಲೀನಾ ಕ್ಯಾಂಪಸ್‍ನ ಮುಂಬಯಿ ವಿಶ್ವವಿದ್ಯಾಲ ಯದ ಜೆ.ಪಿ ನಾಯಕ್ ಭವನದಲ್ಲಿ ನಡೆಸಲ್ಪಟ್ಟಿತು.
ಹಿರಿಯ ಕವಯತ್ರಿ, ಲೇಖಕಿ ಎಕ್ಕಾರು ದಯಾಮಣಿ ಶೆಟ್ಟಿ ಯಕ್ಷಗಾನ ಭಾಗವತಿಕೆಯೊಂದಿಗೆ ಕವಿತೆಯನ್ನಾಡಿ ಬಳಿಕ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಕವಿ ಸಾಹಿತಿ ಸಾ.ದಯಾ (ದಯಾನಂದ್ ಸಾಲ್ಯಾನ್), ಕಲಾವಿದೆ, ಸಾಹಿತಿ ರಮಣ್ ಶೆಟ್ಟಿ ರೆಂಜಾಳ, ಕವಯತ್ರಿ ಪ್ರಮೋದಾ ಮಾಡ ಪಾಲ್ಗೊಂಡು ತಮ್ಮ ಕವಿತೆಗಳೊಂದಿಗೆ ಕಾವ್ಯ ಸಂವಾದ ವಿಶೇಷ ಕಾರ್ಯಕ್ರಮ ನಡೆಸಿದರು. ಡಾ| ಜಿ.ಎನ್ ಉಪಾಧ್ಯ ಕಾವ್ಯ ಸಂವಾದ ನಡೆಸಿದರು.

ನಂತರ ಬೆಂಗಳೂರು ದೂರದರ್ಶನದ ಪ್ರಸಿದ್ಧ ಕಲಾವಿದೆ ರಮ್ಯಾ ವಸಿಷ್ಠ ಗೋಕಾಕರ ಗೀತೆಗಾಯನ ಪ್ರಸ್ತುತ ಪಡಿಸಿ ಅವರ ಕಾವ್ಯದ ಮತ್ತು ಕವಿತೆಗಳ ಬಗ್ಗೆ ವಿಶ್ಲೇಷಿಸಿದರು. ಶೇಖರ್ ಸಾಲ್ಯಾನ್ ಸಸಿಹಿತ್ಲು (ಹಾರ್ಮೋನಿಯಂ) ಮತ್ತು ಜನಾರ್ದನ ಸಾಲ್ಯಾನ್ (ತಬಲಾ) ದೊಂದಿಗೆ ಸಂಗೀತ ನೀಡಿದರು. ನಂತರ ರಮ್ಯಾ ವಸಿಷ್ಠ ಅವರಿಗೆ ಮುಂಬಯಿ ಅಲ್ಲಿಅನ ಸಮಗ್ರ ಕನ್ನಡಿಗರ ಹಾಗೂ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಪರವಾಗಿ ಸ್ವರ್ಣಪದಕವನ್ನಿತ್ತು ಶಾಲು ಹೊದಿಸಿ, ಕೃತಿ ಗೌರವ ನೀಡಿ ಡಾ| ಜಿ.ವಿ ಕುಲಕರ್ಣಿ ಸತ್ಕರಿಸಿ ಅಭಿನಂದಿಸಿದರು. ಹಾಗೂ ಕಾವ್ಯ ಸಂವಾದದಲ್ಲಿ ಪಾಲ್ಗೊಂಡ ಸರ್ವ ಕವಿಗಳಿಗೂ ಕೃತಿ ಗೌರವ ನೀಡಿ ಗೌರವಿಸಲಾಯಿತು.

ನಂತರ ಕಾರ್ಮಿಕ ನೇತಾರ, ಹೆಸರಾಂತ ಹಿರಿಯ ಲೇಖಕ ಡಾ| ಕೆ.ಎಸ್ ಶರ್ಮಾ ಅವರು ಡಾ| ವಿ.ಕೃ ಗೋಕಾಕ ಜೀವನ ಸಾಧನೆಯನ್ನು ಬಣ್ಣಿಸುತ್ತಾ `ವಿ.ಕೃ.ಗೋಕಾಕ ಅವರ ಮಹಾಕಾವ್ಯದಲ್ಲಿ ವಿಶ್ವಮಾನವ ಪರಿಕಲ್ಪನೆ' ಬಗ್ಗೆ ಮಾತನಾಡಿ ಕನ್ನಡ ಮರಾಠಿ ಭೇದವಿಲ್ಲದೆ ಸಹಸ್ರ ಸಹಸ್ರ ಜನತೆಯನ್ನು ತಯಾರಿಸಿದ ಕೀರ್ತಿ ಗೋಕಾಕರದ್ದು. ಅವರ ಮಹಾನ್ ಲೇಖಕತ್ವವನ್ನು ಸ್ಮರಿಸುವ ಸಂಸ್ಮರಣಾ ಕಾರ್ಯಕ್ರಮ ಇದಾಗಿದೆ. ವಿ.ಕಾ ಗೋವಿಂದ ಅವರ ಮಹಾಕಾವ್ಯದಲ್ಲಿ ವಿಶ್ವಮಾನವ ದೃಷ್ಟಿಯಿದ್ದ ಆಗಾಧ ಪ್ರತಿಭಾನ್ವಿತ ವಿಶ್ವ ಮಾನವರೇ ವಿ.ಕೃ.ಗೋಕಕರು. ಈ ಮಹಾನ್ ಚೈತನ್ಯ ಮಹಾಕವಿಗಳ ಕಾವ್ಯದಲ್ಲಿ ವಿಶ್ವ ಮಾನವ ಜೀವನದ ಕಲ್ಪನೆಗಳಿದ್ದವು. ದೃಷ್ಟಿ ವಿಶಾಲವಾಗಿಸಿದ್ದ ಕವಿ ಆಗಿದ್ದ ಅವರು ಮಾನವೀಯ ವ್ಯಕ್ತಿತ್ವವನ್ನು ಬೆಳೆಸಿದ್ದ್ದರು. ಚತುರ್‍ಶುದ್ಧಿ ವ್ಯಕ್ತಿಯೂ ಆಗಿದ್ದ ಅವರಲ್ಲಿ ಮಾನವ ವಿಶ್ವ ರಾಷ್ಟ್ರ ಪ್ರಜೆಯಾಗುವ ಉದಾರತೆ ಹೊಂದಿದ್ದರು. ಅವರಲ್ಲಿ ಮಾನವ ಬಾಳಿನ ಶಾಂತಿ ಸಂದೇಶದ ಸೌಮ್ಯತೆಯಿದ್ದು ಇಂತಹ ಮಹಾನುಭವಿಯ ವಿಚಾರ ತುಲನಾತ್ಮಕ ವಿಮರ್ಶೆ ಮಾಡಬೇಕಾಗಿದೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಸಾಗತಿಸಿ ಪ್ರಸ್ತಾವನೆಗೈದು ಮುಂಬಯಿ ವಿಶ್ವ ವಿದ್ಯಾಲಯ 150ರ ಸಂಭ್ರಮದಲ್ಲಿದ್ದರೆ ಕೇಂದ್ರ ಸಾಹಿತ್ಯ ಅಕಾಡೆಮಿ 60ರ ಸಂಭ್ರಮದಲ್ಲಿದೆ. ಸಾವಿರ ಕೋಟಿ ಅನುದಾನವಿರುವ ಜಗತ್ತಿನ ಅತ್ಯಂತ ಶ್ರೇಷ್ಠ ಅಕಾಡೆಮಿ ಇದಾಗಿದೆ. ಆದುದರಿಂದ ಇದು ಶೈಕ್ಷಣಿಕ ಸಾಹಿತ್ಯ ಲೋಕದ ಮಹತ್ವದ ಕಾಲಘಟ್ಟವಾಗಿದೆ. ಇಂತಹ ಕಾಲಮಾನದಲ್ಲಿ ಬಾಲ ಸಾಹಿತ್ಯದ ಪೆÇ್ರೀತ್ಸಾಹ ಸಾಹಿತ್ಯ ಅಕಾಡೆಮಿಯ ಕರ್ತವ್ಯ ಆಗಬೇಕೆನ್ನುವ ಆಶಯ ನಮ್ಮದು. ಮುಂಬಯಿಯಲ್ಲಿನ ಮಾರ್ಗದರ್ಶಕರಿಲ್ಲದ ಸ್ವಯಂಪ್ರೇತಿತ ಕವಿಗಳೇ ಹೆಚ್ಚಾಗಿದ್ದು ಕಾವ್ಯಲೋಕಕ್ಕೆ ಇವರ ಪಾತ್ರ ಮಹತ್ವದ್ದಾಗಿದೆ. ಕಾವ್ಯದ ಮುಖಾಂತರ ನಾಡನ್ನು ಕಟ್ಟ ಬಹುದಾಗಿದೆ. ಕವಿ ಕ್ರಾಂತಿಕಾರಿ ಆಗಿದ್ದು ಕವಿತೆ ಸಾಂಘಿಕ ಶಕ್ತಿಗೆ ಪ್ರೇರಕವಾದಾಗ ಕವಿ ಜಗತ್ತನ್ನೇ ಸೃಷ್ಠಿ ಮಾಡಬಲ್ಲನು. ಅಂತಹ ಕವಿಗೆ ವಿಶೇಷವಾದ ತಾಕತ್ತು ಇದೆ. ಇಂತಹ ಕವಿಗಳ ಕಷ್ಟಸುಖಗಳನ್ನು ಹಂಚಿಕೊಳ್ಳುವ ವೇದಿಕೆ ಇದಾಗಿದೆ. ಇದಕ್ಕೆ ಪೂರಕವಾಗಿ ಕವಿಗಳ ವೈವಿಧ್ಯಮಯ ಪರಿಚಯ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಕೀಲ ನ್ಯಾ| ಎಂ. ವಿ ಕಿಣಿ, ರವಿ ರಾ.ಅಂಚನ್, ಡಾ| ವಾಣಿ ಉಚ್ಚಿಲ್ಕರ್, ಡಾ| ಮಮತಾ ರಾವ್, ಕರುಣಾಕರ ಹೆಜ್ಮಾಡಿ, ಸುರೇಖಾ ದೇವಾಡಿಗ, ಲತಾ ಸಂತೋಷ್ ಶೆಟ್ಟಿ ಅನಿತಾ ಪೂಜಾರಿ ತಾಕೋಡೆ ಮತ್ತಿತರನೇಕರು ಉಪಸ್ಥಿತರಿದ್ದು ಡಾ| ರಮಾ ಉಡುಪ ಮತ್ತು ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಾಹಿಸಿದರು. ಸುಶೀಲ ಎಸ್.ದೇವಾಡಿಗ ಧನ್ಯವದಿಸಿದರು.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here