Friday 19th, April 2024
canara news

ಸಯನ್‍ನಲ್ಲಿ ನಡೆಸಲ್ಪಟ್ಟ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಉತ್ಸವ ಸಭೆ

Published On : 12 Feb 2017   |  Reported By : Rons Bantwal


ಮುಂಬಯಿಗರ ಸೇವೆ ಎಂದಿಗೂ ವಿಶ್ವಾಸರ್ಹನೀಯ-ಸುರೇಶ್ ಭಂಡಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.11: ಉಡುಪಿ ಬಾರ್ಕೂರು ಅಲ್ಲಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ 2017ರ ವಾರ್ಷಿಕ ಉತ್ಸವವನ್ನು ಈ ಬಾರಿ ಮುಂಬಯಿ ಭಂಡಾರಿ ಸಮಾಜ ಬಂಧುಗಳ ನೇತೃತ್ವದಲ್ಲಿ ಬರುವ ಮೇ.08ರಂದು ವಿಜೃಂಭನೆಯಿಂದ ನಡೆಸಲುದ್ದೇಶಿಸಿದ್ದು ಇದರ ಪೂರ್ವ ಸಿದ್ಧತಾ ಸಭೆಯನ್ನು ಇಂದಿಲ್ಲಿ ಶನಿವಾರ ಸಂಜೆ ಸಯಾನ್ ಪೂರ್ವದಲ್ಲಿನ ಮುಖ್ಯೋಧ್ಯಾಪ ಭವನದ ನಿತ್ಯಾನಂದ ಸಭಾಗೃಹದಲ್ಲಿ ಆಯೋಜಿಸಲಾಗಿತ್ತು.

ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಆಡಳಿತ ಮತ್ತು ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಹಾಗೂ ಭಂಡಾರಿ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ನೇತೃತ್ವದಲ್ಲಿ ನಡೆಸಲಾದ ಸಭೆಯ ಅಧ್ಯಕ್ಷತೆಯನ್ನು ವಾರ್ಷಿಕ ಉತ್ಸವ ಮುಂಬಯಿ ಸಮಿತಿ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ವಹಿಸಿದ್ದು ಶ್ರೀ ಕಚ್ಚೂರು ನಾಗೇಶ್ವರ ಕುಲದೇವರÀÀನ್ನು ಸ್ತುತಿಸಿ ಪ್ರಾರ್ಥನೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ಉತ್ಸವ ಸಮಿತಿ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಆರ್.ಎಂ ಭಂಡಾರಿ ಪ್ರಸ್ತಾವಿಕ ನುಡಿಗಳನ್ನಾಡಿದರು.

ಮುಂಬಯಿಗರ ಸೇವೆ ಯಾವೋತ್ತೂ ವೀಶೇಷ ಮತ್ತು ವಿಶ್ವಾಸರ್ಹನೀಯ ಆದದ್ದು. ಊರಿನ ಯಾವುದೇ ಕಾರ್ಯಕ್ರಮಗಳಲ್ಲೂ ಮುಂಬಯಿಗರ ಪಾಲು ಇದೆ ಅಂತಾದರೆ ಅದು ಯಶಸ್ವೀ ಮತ್ತು ಮಾದರಿ ಕಾರ್ಯಕ್ರವೇ ಎಂದರ್ಥ. ಅನೇಕ ವರ್ಷಗಳ ಬಳಿಕ ಮತ್ತು ನಮ್ಮ ಸಮುದಾಯದ ಕುಲದೇವರ ಸೇವೆಗೆ ಮುಂಬಯಿ ಅಲ್ಲಿನ ಸಮಗ್ರ ಭಂಡಾರಿ ಬಂಧುಗಳಿಗೆ ದೇವರ ಸೇವೆಯನ್ನು ಅತೀ ಸಾಮೀಪ್ಯದಿಂದ ಮಾಡುವ ಯೋಗ ಒದಗಿದೆ. ಇದು ಸಮುದಾಯದ ಮಾತ್ರವಲ್ಲ ಸಮಗ್ರ ಸಮಾಜದ ಋಣ ಸಂದಾಯದ ಅವಕಾಶವಾಗಿದೆ ಇದನ್ನು ನಾವೆಲ್ಲರೂ ಏಕಾತೆಯಿಂದ ಸಿದ್ಧಿಗೊಳಿಸಿ ಶ್ರೀದೇವರ ಕೃಪೆಗೆ ಪಾತ್ರರಾಗೋಣ ಎಂದು ಸುರೇಶ್ ಎಸ್.ಭಂಡಾರಿ ಕರೆಯಿತ್ತರು.

ಉತ್ಸವ ಸಮಿತಿ ಮುಂಬಯಿ ಇದರ ಉಪಾಧ್ಯಕ್ಷ ಕೇಶವ ಟಿ.ಭಂಡಾರಿ, ಭಂಡಾರಿ ಸೇವಾ ಸಮಿತಿ ಅಧ್ಯಕ್ಷ ನ್ಯಾ| ಶೇಖರ್ ಎಸ್.ಭಂಡಾರಿ ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ ಥಾಣೆ, ಗೌ| ಪ್ರ| ಕಾರ್ಯದರ್ಶಿ ವಿಜಯ ಆರ್.ಭಂಡಾರಿ, ಗೌ| ಕೋಶಾಧಿಕಾರಿ ಕರುಣಾಕರ ಜಿ.ಭಂಡಾರಿ, ಮಹಿಳಾ ವಿಭಾಗಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕಡಂದಲೆ, ಕಾರ್ಯದರ್ಶಿ ರೇಖಾ ಎ.ಭಂಡಾರಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಶೇಖರ್ ಭಂಡಾರಿ ಮಾತನಾಡಿ ಈ ಉತ್ಸವ ನಾಡಿಗೆನೇ ಮಾದರಿ ಆಗುವ ರೀತಿಯಲ್ಲಿ ನೆರವೇರಿಸಬೇಕು. ಈ ಮೂಲಕ ನಾಡು ಮತ್ತು ಸಮುದಾಯದ ಉನ್ನತಿ ಫಲಿಸುವಂತಾಗಬೇಕು ಎಂದರು.

ಇತರೇ ಸಮುದಾಯಗಳ ಮುಂದೆ ನಮ್ಮದು ಬರೀ ಕಿರಿದಾದ ಸಮುದಾಯ. ಆದರೆ ನಾವು ಒಗ್ಗಟ್ಟನ್ನು ಪ್ರದರ್ಶಿಸುವಲ್ಲಿ ಹಿಂದಿರ ಬಹುದು. ಭವಿಷ್ಯತ್ತಿನ ದಿನಗಳಲ್ಲಿ ನಮ್ಮ ಸಾಂಘಿಕ ಶಕ್ತಿಯನ್ನು ಏಕತಾ ಮನೋಭಾವದಿಂದ ಬಲಪಡಿಸಿ ಈ ಬಾರಿ ಒದಗಿಬಂದ ಉತ್ಸವ ಸೇವಾ ಅವಕಾಶವನ್ನು ಉತ್ಸುಕರಾಗಿ ವಿಜೃಭಿಸಲು ಶ್ರಮಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಶಿವರಾಮ ಭಂಡಾರಿ ತಿಳಿಸಿದರು.

ಸಭೆಯಲ್ಲಿ ವಾರ್ಷಿಕ ಉತ್ಸವ-2017ರ ಪೂರ್ವ ಸಿದ್ಧತೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಜನೆ ಹಾಗೂ ಉತ್ಸವದ ವಿವಿಧ ಜವಾಬ್ದಾರಿಗಳ ನಿರ್ವಾಹಣೆ, ಸ್ವಯಂ ಸೇವಕರ ಜವಾಬ್ದಾರಿ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿ ಉಪಸಮಿತಿಗಳನ್ನು ರಚಿಸಲಾಯಿತು.

ಸಭೆಯಲ್ಲಿ ಉತ್ಸವ ಸಮಿತಿ ಮುಂಬಯಿ ಗೌ| ಪ್ರ| ಕೋಶಾಧಿಕಾರಿ ರಮೇಶ್ ವಿ.ಭಂಡಾರಿ, ಜೊತೆ ಕಾರ್ಯದರ್ಶಿ ರಂಜಿತ್ ಎಸ್.ಭಂಡಾರಿ, ಜೊತೆ ಕೋಶಾಧಿಕಾರಿ ಶಶಿಧರ್ ಡಿ.ಭಂಡಾರಿ, ಭಂಡಾರಿ ಸೇವಾ ಸಮಿತಿ ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ, ಸಲಹಾ ಸಮಿತಿ ಕಾರ್ಯಾಧ್ಯಕ್ಷ ನ್ಯಾ| ಸುಂದರ್ ಜಿ.ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಪಲ್ಲವಿ ರಂಜಿತ್ ಭಂಡಾರಿ, ಕೋಶಾಧಿಕಾರಿ ಕು| ಕ್ಷಮಾ ಆರ್.ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಸಲಹೆಸೂಚನೆಗಳನ್ನಿತ್ತು ಉತ್ಸವದ ಯಶಸ್ಸಿಗೆ ಸರ್ವರೂ ಶ್ರಮಿಸುವಂತೆ ತಿಳಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here