Saturday 5th, July 2025
canara news

ಮಾ.06: ಕಾರ್ಕಳ ಬೋಳದಲ್ಲಿ ಗಣೇಶ್ ಎರ್ಮಾಳ್ ಬಳಗದ ಭಕ್ತಿ ರಸಮಂಜರಿ

Published On : 04 Mar 2017   |  Reported By : Rons Bantwal


ಮುಂಬಯಿ, ಮಾ.04: ಮಹಾನಗರ ಮುಂಬಯಿ ಅಲ್ಲಿನ ಹೆಸರಾಂತ ಗಾಯಕ, ಸಂಗೀತಕಾರ ಗಣೇಶ್ ಎರ್ಮಾಳ್ ತನ್ನ ಬಳಗಗವನ್ನೊಳಗೊಂಡು ಭಕ್ತಿರಸಮಂಜರಿ ಕಾರ್ಯಕ್ರಮವನ್ನು ನಾಳೆ ಮಾ.06ನೇ ಸೋಮವಾರ ಬೆಳಿಗ್ಗೆ 10.00 ಗಂಟೆಯಿಂದ ಉಡುಪಿ ತಾಲೂಕಿನ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿರುವ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದಲ್ಲಿ ಜರಗಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ನೇರವೇರಿಸಲಿದ್ದಾರೆ.

ಮುಂಬಯಿ ಪ್ರಸಿದ್ಧ ಗಾಯಕರಾಗಿದ್ದು, ಭಕ್ತಿಗೀತೆಗಳನ್ನು ವ್ಯಾಖ್ಯಾನ ಸಹಿತ ವಿಭಿನ್ನ ಶೈಲಿಯಲ್ಲಿ ಪ್ರಸ್ತುತ ಪಡಿಸಿ ಜನಮನಗೆದ್ದಿರುವ ಗಣೇಶ್ ಎರ್ಮಾಳ್ ಅವರು ಕಾರ್ಯಕ್ರಮವನ್ನು ನೀಡಲಿದ್ದಾರೆ. ಕಾರ್ಯಕ್ರಮದ ಪ್ರಾಯೋಜಕತ್ವ ನವಿ ಮುಂಬಯಿ ಕಮೋಟೆಯ ತುಳು ಕನ್ನಡ ಸಂಸ್ಥೆಯ ಅಧ್ಯಕ್ಷ, ಸಮಾಜ ಸೇವಕ ಬೋಳ ರವಿ ಪೂಜಾರಿ ವಹಿಸಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ವಿನಂತಿಸಿ ಕೊಂಡಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here