Thursday 8th, June 2023
canara news

ಸೋಂದಾಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠಾಧೀಶ ಮುಂಬಯಿ ಭೇಟಿ

Published On : 05 Mar 2017   |  Reported By : Rons Bantwal


ಧರ್ಮಾಚರಣೆಯಿಂದ ಸ್ವರಕ್ಷಣೆ ಸಾಧ್ಯ : ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.05: ಧರ್ಮಾಚರಣೆ ಆಧುನಿಕ ಯುಗದಲ್ಲಿ ದಿನಬಳಕೆಯಲ್ಲಿರುವ ರೆಫ್ರಿಜರೇಟರ್‍ನಂತೆ ವಸ್ತುಗಳನ್ನು ರೆಫ್ರಿಜರೇಟರ್‍ನಲ್ಲಿಟ್ಟು ನಾವೂ ಕೆಡದಂತೆ ಹೇಗೆ ಕಾಪಾಡುತ್ತೇವೂ ಅದೇ ರೀತಿ ಧರ್ಮಾಚರಣೆಯಿಂದ ನಮ್ಮನ್ನು ನಾವೂ ರಕ್ಷಿಸಿಕೊಳ್ಳಬಹುದು. ರೆಫ್ರಿಜರೇಟರ್‍ಗೆ ಹೇಗೆ ವಿದ್ಯುತ್ ಶಕ್ತಿ ಅವಶ್ಯವೋ ಅದೇ ರೀತಿ ನಮ್ಮ ನಿತ್ಯಾನುಷ್ಠಾನವೂ ನಮ್ಮ ದೇಹಕ್ಕೆ ನಾವೂ ಪೂರೈಸುವ ವಿದ್ಯುತ್ ಆಗಿದೆ. ಆದರೆ ಕೆಲವೊಮ್ಮೆ ವಿದ್ಯುತ್ ಪೂರೈಕೆ ಕಡಿತವಾದಾಗ ಜನರೇಟರ್‍ಗಳನ್ನು ನಾವೂ ಬಳಸುತ್ತೇವೆ. ಅದೇ ರೀತಿ ಧರ್ಮಾಚರಣೆಯಲ್ಲಿ ಏರುಪೇರಾಗದಂತೆ ಕಾಪಾಡಲು ತಾವೂ ಯತಿಗಳು, ಸನ್ಯಾಸಿಗಳು) ಶಿಷ್ಯರ ಜೀವನದಲ್ಲಿ ವಿದ್ಯುತ್ ಪೂರೈಸಲು ಸಂಚಾರ ಕೈಗೊಳ್ಳುತ್ತೇವೆ. ಈ ತಮ್ಮ ಮುಂಬಯಿ ಭೇಟಿ ಉದ್ದೇಶ ಆದಾಗಿದೆ ಎಂದು ಸೋಂದಾಶ್ರೀ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ನುಡಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೋಂದಾಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸ್ವಾಮಿಜಿ ಕಳೆದ ಶನಿವಾರ ಸಂಜೆ ಮಹಾನಗರ ಮುಂಬಯಿಗೆ ಪಾದಾರ್ಪಣೆಗಿದಿದ್ದು ಮಾಟುಂಗಾ ಪೂರ್ವದಲ್ಲಿನ ಶ್ರೀ ಶಂಕರ ಮಠದಲ್ಲಿ ನೆರೆದ ಸದ್ಭಕ್ತರÀು ಹಾಗೂ ಶಿಷ್ಯರನ್ನು ಅನುಗ್ರಹಿಸಿ ಮಾತನಾಡಿದರು.

ಶ್ರೀಗಳÀು ನಗರಪ್ರವೇಶ ಮಾಡುತ್ತಿದ್ದತೆಯೇ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಹಾಗೂ ಶ್ರೀ ಶಂಕರ ಮಠದ ಪದಾಧಿಕಾರಿ ಮತ್ತು ಸದಸ್ಯರು, ಶಿಷ್ಯವೃಂದ, ಮಹಿಳೆಯರು, ಮುಂಬಯಿವಾಸಿ ಭಕ್ತರು ಶಾಸ್ತ್ರೋಕ್ತವಾಗಿ ಪೂರ್ಣಕುಂಭ ಸ್ವಾಗತಗೈದು ಭಕ್ತಿಪೂರ್ವಕವಾಗಿ ಬರಮಾಡಿ ಕೊಂಡರು. ವಿ.ಎನ್ ಹೆಗಡೆ ಮತ್ತು ಗಂಗಾ ಹೆಗಡೆ ದಂಪತಿ ಪಾದಪೂಜೆ ನೆರವೇರಿಸಿದ್ದು, ಈ ಸಂದರ್ಭದಲ್ಲಿ ವಿ.ಎನ್ ಹೆಗಡೆ, ತನುಜಾ ಹೆಗಡೆ, ಡಾ| ಎನ್.ಜಿ ಭಟ್ ಚಾರ್ಕೋಪ್, ಜಿ.ವಿ ಹೆಗಡೆ, ಶಿವಾನಂದ ಭಟ್, ಕೆ.ಸಿ ಹೆಗಡೆ, ಅನಂತ ಭಟ್, ರಾಜರಾಮ ಹೆಗಡೆ, ಚಂದ್ರಶೇಖರ ಭಟ್, ಆರ್.ಜಿ ಹೆಗಡೆ, ಎಸ್.ಎಸ್ ಜೋಶಿ, ವಸಂತ ಭಟ್ಟ, ಸುರೇಶ ಹೆಗಡೆ, ಡಾ| ಎಸ್.ಆರ್ ನಾಯ್ಕ, ಮಧುಕರ ನಾಯ್ಕ, ಅಶೋಕ ನಾಯ್ಕ ಸೇರಿದಂತೆ ಅನೇಕ ರಾಮಕ್ಷತ್ರೀಯ ಹಾಗೂ ಹವ್ಯಾಕ ಬಂಧು ಭಕ್ತರು ಉಪಸ್ಥಿತರಿದ್ದರು.

ಮಾರ್ಚ್.11ರ ಶನಿವಾರ ವರೇಗೆ ಮುಂಬಯಿಯಲ್ಲಿ ನೆಲೆಯಾಗಲಿರುವ ಶ್ರೀಗಳ ವಸತಿ ಸಂದರ್ಭದಲ್ಲಿ ನಗರದಲ್ಲಿ ವಿವಿಧ ಧಾರ್ಮಕ ಕಾರ್ಯಕ್ರಮಗಳು ಜರುಗಲಿದ್ದು ಪ್ರತಿದಿನ ಮುಂಜಾನೆ ಶ್ರೀಗಳಿಂದ ಕುಂಕುಮಾರ್ಚನೆ ಪಾದಪೂಜೆ, ಮಧ್ಯಾಹ್ನ ಮಾ.8, ಏಕಾದಶಿ ಹೊರತುಪಡಿಸಿ ಭಿಕ್ಷಾಸೇವೆ ನಡೆಯಲಿದೆ. ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಹಾನಗರದ ಭಕ್ತಾದಿಗಳು ಸಕುಟುಂಬ ಮಿತ್ರರನ್ನೊಳಗೊಂಡು ಆಗಮಿಸಿ ಶ್ರೀಗಳ ದರ್ಶನ ಪಡೆದು ಆಶೀರ್ವಾದಕ್ಕೆ ಪಾತ್ರರಾಗಬೇಕೆಂದು ಎಂದು ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಪದಾಧಿಕಾರಿಗಳು ತಿಳಿಸಿದ್ದಾರೆ.

 

 
More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here