ಡಾ| ರಾಜಶೇಖರ್ ಕೋಟ್ಯಾನ್ ಮುಂಬಯಿ-ಪತ್ರಕರ್ತ ಕಿಶೋರ್ ಪೆರಾಜೆಗೆ ಪ್ರಶಸ್ತಿ ಪ್ರದಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಪುಂಜಾಲಕಟ್ಟೆ, ಮಾ.05: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಲ್ಲೊಂದಾದ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ (ರಿ.) ಪುಂಜಾಲಕಟ್ಟೆ ಸಂಸ್ಥೆಯು ಇಂದಿಲ್ಲಿ ಆದಿತ್ಯವಾರ ಪುಂಜಾಲಕಟ್ಟೆ ಅಲ್ಲಿನ ಬಂಗ್ಲೆ ಮೈದಾನದಲ್ಲಿ 9ನೇ ಸಾಮೂಹಿಕ ವಿವಾಹ ಸಮಾರಂಭ ಮತ್ತು ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳೊಂದಿಗೆ ತನ್ನ 33ನೇ ವಾರ್ಷಿಕೋತ್ಸವ ಸಂಭ್ರಮಿಸಿತು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಬಂಟ್ವಾಳ ತಾಲೂಕು ಹಾಗೂ ಜೆಸೀಐ ಮಡಂತ್ಯಾರು ಇವರ ಜಂಟಿ ಆಶ್ರಯದಲ್ಲಿ ನಡೆದ ಸಮಾರಂಭಕ್ಕೆ ಮಂಗಳೂರು ಸಂಸದ ನಳೀನ್‍ಕುಮಾರ್ ಕಟೀಲ್ ಅವರನ್ನೊಳಗೊಂಡು ಪ್ರಸಿದ್ಧ ಚಲನಚಿತ್ರ ನಟ, ಪಡುಮಲೆ ಕುತ್ಯಾಲ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ವಿನೋದ್ ಆಳ್ವ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆಯನ್ನೀಡಿದರು.
ಈ ಶುಭಾವರಸದಲ್ಲಿ ಅತಿಥಿü ಅಭ್ಯಾಗತರುಗಳಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ|ಗಣೇಶ್ ಕಾರ್ಣಿಕ್, ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಸ್ವರ್ಣಲತಾ, ವಸಂತ ಹೆಗ್ಡೆ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಕ್ವೇರ, ಬೆಳ್ತಂಗಡಿ ಬಿ.ಜೆ.ಪಿ ಅಧ್ಯಕ್ಷ ರಂಜನ್ ಗೌಡ, ಉದ್ಯಮಿ ಜಿತೇಂದ್ರ ಎಸ್.ಕೊಟ್ಟಾರಿ, ಬಿಲ್ಲವ ಮಹಾಮಂಡಲ ವಕ್ತಾರ ಹರಿಕೃಷ್ಣ ಬಂಟ್ವಾಳ, ಡಾ| ಬಾಲಕೃಷ್ಣ ಶೆಟ್ಟಿ ಸುಂದರ ರಾಜ್ ಹೆಗ್ಡೆ, ಬಂಟ್ವಾಳ ತಾಲೂಕಿ ಪಂಚಾಯತ್ ಸದಸ್ಯ ರಮೇಶ್ ಕುಡುಮೇರು, ರಶ್ಮಿ, ಹುಕುಂ ರಾಂ ಪಠೇಲ್, ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಪುಂಜಾಲಕಟ್ಟೆ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಕುಮಾರ್, ಉದ್ಯಮಿ ಹರೀಶ್ ಪೈ, ಸುಬ್ಬಣ್ಣ, ಚೆನ್ನಕೇಶವ ಉಪಸ್ಥಿತರಿದ್ದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪ್ರತಿವರ್ಷದಂತೆ ಕೊಡಮಾಡುವ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ-2017ನ್ನು ಡಾ| ರಾಜಶೇಖರ್ ಆರ್.ಕೋಟ್ಯಾನ್ ಮುಂಬಯಿ (ಚಲನ ಚಿತ್ರರಂಗ), ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು (ಯಕ್ಷಗಾನ ಕ್ಷೇತ್ರ), ವಿನಾಯಕ ರಾವ್ ಕನ್ಯಾಡಿ (ಸಮಾಜಸೇವೆ), ರಮೇಶ್ ಬಾಯಾರು (ಶಿಕ್ಷಣ ಕ್ಷೇತ್ರ), ರಮೇಶ್ ಕಲ್ಲಡ್ಕ (ಕಲಾ ಕ್ಷೇತ್ರ) ಹಾಗೂ ಸ್ವಸ್ತಿಕ್ ಸಂಭ್ರಮ ಪುರಸ್ಕಾರ-2017ನ್ನು ಕಿಶೋರ್ ಪೆರಾಜೆ (ಪತ್ರಿಕೋದ್ಯಮ), ಸಂಜೀವ ಶೆಟ್ಟಿ ಮುಗೆರೋಡಿ (ಕ್ರೀಡಾ ಕ್ಷೇತ್ರ), ಶೇಖರ ನಾರಾವಿ (ಸಮಾಜ ಸೇವೆ), ಕೆ.ಧರ್ಮಪಾಲ ಪೂಜಾರಿ (ಸರ್ಕಾರಿ ಸೇವೆ), ಕುಮಾರಿ ಶೃತಿ ದಾಸ್ (ಬಹುಮುಖ ಪ್ರತಿಭೆ) ಮತ್ತು ಅತ್ಯುತ್ತಮ ಯುವ ಸಂಘಟನೆ ಪ್ರಶಸ್ತಿಯನ್ನು ಶ್ರೀ ಶಾರದಾಂಭ ಭಜನಾ ಮಂಡಳಿ ಕುಕ್ಕೇಡಿ-ಬುಳೆಕ್ಕರ ಸಂಸ್ಥೆಗೆ ಪ್ರದಾನಿಸಿ ಗೌರವಿಸಿದರು.
ವಿವಾಹದಲ್ಲಿ ಭಾಗಿಯಾದ ನವ ಜೋಡಿಗಳನ್ನು ಬೆಳಿಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದ ವಠಾರದಿಂದ ವಧು-ವರರನ್ನು ಗೊಂಬೆ ಕುಣಿತ,ವಿವಿಧ ವಾದ್ಯ ಗೋಷ್ಠಿ, ವಿದ್ಯಾರ್ಥಿಗಳ ಚೆಂಡೆ ವಾದನಗಳೊಂದಿಗೆ ವೈಭವಪೂರ್ಣ ಮೆರವಣಿಯಲ್ಲಿ ವಿವಾಹ ಮಂಟಪಕ್ಕೆ ಬರಮಾಡಿ ಕೊಳ್ಳಲಾಗಿದ್ದು, ಅತಿಥಿüಗಳು ದಿಬ್ಬಣ ಮೆರವಣಿಗೆ ಚಾಲನೆಯನ್ನಿತ್ತರು.
ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಹ ಪುರೋಹಿತ ವೃಂದದ ಮಂತ್ರ ಘೋಷಗಳೊಂದಿಗೆ ನೆರೆದ ಬಂಧು-ಭಗಿನಿಯರ ಶುರ್ಭಾಶೀರ್ವಾದದೊಂದಿಗೆ 13 ಜೋಡಿ ವಧು-ವರರು ಹಸೆಮಣೆಯನ್ನೇರಿ ಗೃಹಸ್ಥಾಶ್ರಮದ ದೀಕ್ಷೆಯನ್ನು ಪಡೆದಿದ್ದು ಶ್ರೀ ಗೋವಿಂದಕೃಷ್ಣ ದೇವಾಲಯ ಗುರುವಾಯನಕೆರೆ ಇದರ ಮಾಜಿ ಪ್ರಧಾನ ಅರ್ಚಕ ವೇ| ಮೂ| ಶ್ರೀ ಕೃಷ್ಣ ಭಟ್ ತಮ್ಮ ಪೌರೋಹಿತ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿಸಿ ಅನುಗ್ರಹಿಸಿದರು. ಸಪ್ತಪದಿ ತುಳಿದು ಸಾಂಸರಿಕ ಬಾಳಿಗೆ ಕಾಲಿಟ್ಟ ಸುಮಾರು 13 ಜೋಡಿ ವಧುವಿಗೆ ಚಿನ್ನದ ತಾಳಿ, ವಧು ವರರಿಗೆ ಉಡುಪು ಹಾಗೂ ವಧು ವರರಿಗೆ ಧನನಿಧಿ ಉಡುಗೊರೆಯಾಗಿ ನೀಡಲಾಯಿತು. ಹಸೆಮಣೆಯ ನ್ನೇರಿ ಗೃಹಸ್ಥಾಶ್ರಮದ ದೀಕ್ಷೆ ಪಡೆದ ನವ ವಧುವರರಿಗೆ ಅತಿಥಿüಗಳು ತಾಳಿ ಪ್ರದಾನಿಸಿ ಶುಭಾರೈಸಿದರು.
ಸ್ವಸ್ತಿಕ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಗೌರವಾಧ್ಯಕ್ಷ ಪಿ.ಅಬ್ದುಲ್ಲಾ ಪುಂಜಾಲಕಟ್ಟೆ, ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಕೋಶಾಧಿಕಾರಿ, ನಾಟಕೋತ್ಸವ ಸಂಚಾಲಕ ಹೆಚ್.ಕೆ.ನಯನಾಡು ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದು, ಪಿ.ಎಂ ಪ್ರಭಾಕರ್ ಸ್ವಾಗತಿಸಿದರು. ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಪ್ರಸ್ತಾವನೆಗೈದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಜೆಸೀಐ ಮಡಂತ್ಯಾರು ಅಧ್ಯಕ್ಷ ರಾಜೇಶ್ ಪಿ.ಪುಂಜಾಲಕಟ್ಟೆ ಅಭಾರ ಮನ್ನಿಸಿದರು.