Sunday 11th, May 2025
canara news

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದಿಂದ ವಿಶ್ವ ಮಹಿಳಾ ದಿನಾಚರಣೆ ಸಂಭ್ರಮ

Published On : 09 Mar 2017   |  Reported By : Rons Bantwal


ಸಾಧನೆಗೆ ಮಹಿಳೆಯರೇ ಪ್ರಧಾನರು: ಮೇಡಂ ಗ್ರೇಸ್ ಪಿಂಟೋ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.08: ದಿನಾಲೂ ಮಹಿಳೆಯರದ್ದೇ ದಿನ. ನಾವೂ ದಿನಾಲೂ ಆಚರಿಸಬೇಕು. ಬಂಟರಿಗೆ ಬಂಟ ಇದ್ದೇ ಇದೆ ಎನ್ನುವುದು ಈ ಸಾಂಘಿಕತೆ ಸಾಕ್ಷಿ ಪಡಿಸುತ್ತದೆ. ನಾವೂ ಎಂದೆಂದಿಗೂ ವಿಜೇತರೇ ಆಗಿದ್ದೇವೆ. ನಮ್ಮಲ್ಲಿ ಬದಲಾವಣೆ ತಂದಾಗ ನಾವೂ ಜಯಶೀಲರೆಣಿಸಲು ಸಾಧ್ಯ. ಜನ್ಮ ನೀಡಿದ ಮಾತಾಪಿತರನ್ನು ಒಳ್ಳೆಯದಾಗಿ ನೋಡಿದಾಗ ಜನ್ಮಸಾರ್ಥಕವಾಗುವುದು. ಸ್ತ್ರೀಯರು ಗಳಿಕೆಯ ಕನಿಷ್ಠ ಲಾಭಾಂಶ ಮಾತಾಪಿತರಿಗೆ ನೀಡುವ ಹಕ್ಕು ನಿಮಗಿದೆ. ಮಹಿಳೆಯರಲ್ಲಿ ಏಕತೆ ಮೂಡಿದಾಗ ನಾವೂ ಧೀಶಕ್ತಿ ಸಾಧಿಸಬಹುದು. ಇದನ್ನೆ ನಾವೆಲ್ಲರೂ ಆಡಿಸೋಣ ಎಂದು ರಾಯಾನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಕರೆಯಿತ್ತರು.

ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಜಾಗತಿಕ ಮಹಿಳಾ ದಿನಾಚರಣೆಯ ನ್ನು ಇಂದಿಲ್ಲಿ ಬುಧವಾರ ಅಪರಾಹ್ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಸಂಭ್ರಮೋಲ್ಲಾಸದಿಂದ ಆಚರಿಸಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆÉಟ್ಟಿ ಅವರ ಸಾರಥ್ಯ ಹಾಗೂ ಸಂಘದ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭವನ್ನು ಮುಖ್ಯ ಅತಿಥಿsಯಾಗಿ ಉಪಸ್ಥಿತ ರಾಯಾನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ಆಡಳಿತ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಮಾರಂಭದಲ್ಲಿ ಗೌರವ ಅತಿಥಿsಗಳಾಗಿ ಏರ್‍ಪೆÇೀರ್ಟ್ ಟರ್ಮಿನಲ್ಸ್ ನ ಉನ್ನತಾಧಿಕಾರಿ ಸುಚಿತಾ ಪ್ರಭಾಕರ ಎಲ್. ಶೆಟ್ಟಿ, ಆಲ್‍ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್‍ನ ನಿರ್ದೇಶಕಿ ಆರತಿ ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಮಹಿಳಾ ವಿಭಾಗವು ವಾರ್ಷಿಕವಾಗಿ ಕೊಡಮಾಡುವ `ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಪುರಸ್ಕಾರ 2016'ವನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂಬಯಿ ಇದರ ಸಂಶೋಧನಾ ವಿಜ್ಞಾನಿ, ಮಕ್ಕಳ ಮನೋರೋಗದ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್ ಪದೋನ್ನತ ಡಾ| ಲತಾ ಆರ್.ಶೇಣವ ಅವರಿಗೆ ಅತಿಥಿsಗಳು ಹಾಗೂ ಲತಾ ಪಿ.ಭಂಡಾರಿ, ದೀಪಾ ಭಂಡಾರಿ, ಎಂ.ಡಿ ಶೆಟ್ಟಿ ಮತ್ತು ಡಾ| ಸುನೀತಾ ಎಂ.ಶೆಟ್ಟಿ ಅವರನ್ನೊಳಗೊಂದು ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು. ಪ್ರಭಾಕರ ಎಲ್. ಶೆಟ್ಟಿ ಮತ್ತು ಶ್ರೀಮತಿ ಲತಾ ಪ್ರಭಾಕರ ಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಹತ್ತು ವರ್ಷಗಳಿಂದ ನಿರಂತರ ಸೇವೆ ನೀಡುತ್ತಿರುವ ಶ್ರೀಮತಿ ಲತಾ ಜೆ.ಶೆಟ್ಟಿ ಮತ್ತು ಜಯರಾಮ ಎನ್.ಶೆಟ್ಟಿ ಸೇರಿದಂತೆ ಧೀರಾಜ್ ಶೆಟ್ಟಿ, ದಿವ್ಯಾ ಶೆಟ್ಟಿ, ಡಾ| ದೀಪಿಕಾ ಶೆಟ್ಟಿ, ಐಶ್ವರ್ಯ ಶೆಟ್ಟಿ ಪರಿವಾರದೊಂದಿಗೆ ಅವರನ್ನು ಸನ್ಮಾನಿಸಲಾಯಿತು.

ಸುಚಿತಾ ಶೆಟ್ಟಿ ಮಾತನಾಡಿ ನಮ್ಮನ್ನು ನಾವು ಗೌರವಿಸಿದಾಗ ಎಲ್ಲವೂ ಸರಿ ಹೋಗುವುದು. ನಮ್ಮಲ್ಲಿನ ಮನೋಸಂಕಲ್ಪ ಮೊದಲಾಗಿ ನಾವು ಬಲಪಡಿಸಿಕೊಂಡಾಗ ನಾವು ಯಶಸ್ಸು ತನ್ನಿಲು ತಾನೇ ಕಾಣಬಹುದು ಎಂದರು.

ಬಂಟರ ಸಂಘಕ್ಕೆ ಬಂದರೆ ಮನೆಗೆ ಬಂದಾಂತಾಗುವುದು. ಇಲ್ಲಿ ನಿಜವಾದ ಬಂಧುತ್ವವನ್ನು ಕಂಡಿದ್ದೇನೆ. ಮನೆಯ ಜೊತೆಗೆ ಆರೋಗ್ಯವನ್ನು, ರಾಷ್ಟ್ರ ಸೇವೆಯಲ್ಲಿ ತೊಡಗಿಸಿದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಮಹಿಳೆಯರು ಮನಗಳು ಬದಲಾಯಿಸಿದಾಗ ಬದುಕನ್ನೇ ಬಂಗಾರವಹಿಸಬಹುದು ಎಂದು ಆರತಿ ಶೆಟ್ಟಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಭಾರತದ 40-40% ಜನಸಂಖ್ಯೆಯ ಮಕ್ಕಳು ಸುಸ್ಥಿತಿಯಲ್ಲಿಲ್ಲ ಇದು ನಮ್ಮ ದುರಂತವಾಗಿದೆ. ಇಂತಹ ಸಮಸ್ಯೆಗಳು ಈಡೇರಿದಾಗ ಸುಭದ್ರ ರಾಷ್ಟ್ರ ನಿರ್ಮಾಣ ಸಾಧ್ಯವಾಗುವುದು. ಅತ್ಯಾಚಾರ, ಲೈಂಗಿಕ ಕಿರುಕುಳ ಅಧಿಕಾರಗಳಂತಹ ದಾಹಕ್ಕೆ ಮಕ್ಕಳರ ಭವಿಷ್ಯ ಅತಂತ್ರದಲ್ಲಿದೆ. ತುಳುನಾಡಿನ ಗರೋಡಿಗಳಲ್ಲಿ ಸ್ಥಾಪಿತ ಕರಾಟೆಯಲ್ಲಿ ಮೆರೆತ ನಾವೂ ಬರೇ ವೈಭವೀಕರಣದ ಜೀವನಕ್ಕೆ ಜೋತು ಹೋಗಿ ನಮ್ಮಲ್ಲಿನ ದೀಶತ್ವದ ಪರಂಪರೆಗಳನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ಅರಿವು ಮೂಡಿಸಿದ್ದಲ್ಲಿ ನಮ್ಮ ಸ್ತ್ರೀ ವರ್ಗ, ಮಕ್ಕಳು ಸಂಸ್ಕಾರಯುತವಾಗಿ ಬಲಿಷ್ಠ ರಾಷ್ಟ್ರಕ್ಕೆ ಪ್ರೇರಕ ಆಗಬಲ್ಲದು ಎಂದು ಸನ್ಮಾನಕ್ಕೆ ಉತ್ತರಿಸಿ ಡಾ| ಲತಾ ಶೇಣವ ತಿಳಿಸಿದರು.

ಲತಾ ಜೆ.ಶೆÉಟ್ಟಿ ಮಾತನಾಡಿ ಮಹಿಳೆಯರಿಂದ ಜಾಗತಿಕ ಬದಲಾವಣೆ ಸಾಧ್ಯ. ಆದುದರಿಂದ ಇಂತಹ ಆಚರಣೆ ಪ್ರತೀಯೊರ್ವ ನಾರಿಯರದ್ದಾಗಬೇಕು. ನಮ್ಮ ಬಂಟ ಮಹಿಳೆಯರು ಇದಕ್ಕೆ ಪೂರಕವಾದ ಪೆÇ್ರೀತ್ಸಾಹಕರು ಎಂದು ನುಡಿದರು.

ಮಹಿಳೆಯರು ಮನೋಭಾವ ವೃದ್ಧಿಸಿಕೊಂಡಾಗ ಸಮಾಜದಲ್ಲಿ ಸಮಾನತೆಯನ್ನು ಕಾಯ್ದಿರಿಸಲು ಸಾಧ್ಯವಾಗುವುದು. ಬಂಟ ಸಮಾಜದ ಮಹಿಳೆಯರು ಎಂದೂ ಧೀರತ್ವವುಳ್ಳವರಾಗಿದ್ದು, ಸಾಧನೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಪುರುಷ ಪ್ರಧಾನ ಸಮಾರಂಭದಲ್ಲಿ ಮಹಿಳೆಯರು ಸಮಾನರಾದಾಗ ನಮ್ಮ ಸಂಸ್ಕೃತಿ ಪರಂಪರೆಗಳ ಉಳಿವು ಸಾಧ್ಯವಾಗುವುದು. ಇದನ್ನು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಸಾದಿಸಿ ತೋರಿಸಿರುವುದು ಅಭಿನಂದನೀಯ ಎಂದು ಪ್ರಭಾಕರ್ ಶೆಟ್ಟಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರುಗಳಾದ ಲತಾ ಪಿ.ಭಂಡಾರಿ, ಆಶಾ ಎಂ.ಹೆಗ್ಡೆ, ಸಂಘದ ಪದಾಧಿಕಾರಿಗಳಾದ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಎಂ.ಡಿ ಶೆಟ್ಟಿ, ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸೇರಿದಂತೆ ಸಂಘÀದ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು, ನಗರದ ಅನೇಕ ಬಂಟರ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.

ಮಹಿಳಾ ವಿಭಾಗದ ಗೌ| ಕೋಶಾಧಿಕಾರಿ ಆಶಾ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ಆಶಾ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಶಾಂತಿ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು, ಬಂಟಗೀತೆ ಸರೋಜಾ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆÉಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಉಪ ಕಾರ್ಯಾಧ್ಯಕ್ಷೆ ಮಮತಾ ಎಂ.ಶೆಟ್ಟಿ ನೆರೆದ ಸಂಘದ ಎಲ್ಲಾ ಮಾಜಿ ಮ್ಮತು ಹಾಲಿ ಪದಾಧಿಕಾರಿಗಳ ವಿಶ್ವಸ್ಥರ ಪಟ್ಟಿ ವಾಚಿಸಿದರು. ಆಶಾ ಸುಧೀರ್ ಶೆಟ್ಟಿ, ಮಮತಾ ಶೆಟ್ಟಿ ಮತ್ತು ಪ್ರಮೀಳಾ ಎಸ್.ಶೆಟ್ಟಿ ಅತಿಥಿüಗಳನ್ನು ಪರಿಚಯಿಸಿದರು ಗೌ| ಕಾರ್ಯದರ್ಶಿ ಕವಿತಾ ಆರ್.ಶೆಟ್ಟಿ ಪ್ರಶಸ್ತಿ ಬಗ್ಗೆ ಮಾಹಿತಿ ನೀಡಿದರು. ಆಶಾ ಸಂತೋಷ್ ಶೆಟ್ಟಿ ಪುರಸ್ಕೃತರನ್ನು ಪರಿಚಯಿಸಿದರು. ಸುಚಿತ್ರಾ ಎಸ್.ಶೆಟ್ಟಿ ಮತ್ತು ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಣೆಗೈದರು. ಗೌ| ಕಾರ್ಯದರ್ಶಿ ಕವಿತಾ ಆರ್.ಶೆಟ್ಟಿ ವಂದಿಸಿದರು.

ಸಂಘದ ಮಹಿಳಾ ವಿಭಾಗದ, ವಿವಿಧ ಪ್ರಾದೇಶಿಕ ಸಮಿತಿಗಳ ಸದಸ್ಯೆಯರು ಮತ್ತು ಯುವ ವಿಭಾಗದ ಸದಸ್ಯೆಯರು ಹಾಗೂ ಬೋಂಬೇ ಬಂಟ್ಸ್ ಅಸೋಸಿಯೇಶನ್, ಥಾಣೆ ಬಂಟ್ಸ್, ಮುಲುಂಡ್ ಬಂಟ್ಸ್ ಮತ್ತಿತರ ಸಂಸ್ಥೆಗಳ ಸದಸ್ಯೆಯರು ವೈವಿಧ್ಯಮಯ ನೃತ್ಯಾವಳಿಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಶೋಭಾ ಶೃಂಗಾರ್ ಜುವೆಲ್ಲರ್ಸ್ ವಾಲ್ಕೇಶ್ವರ್ ಇವರು ಆಭರಣಗಳ ಪ್ರದರ್ಶನ ಏರ್ಪಾಡಿಸಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here