Thursday 25th, April 2024
canara news

ಶಿಕ್ಷಣದ ಬದಲಾವಣೆಯ ಹಂತದಲ್ಲಿ ಮಾತೃಭಾಷೆ ಅಗತ್ಯ - ಡಾ| ಶ್ರೀ ಶ್ರೀಧರ ಶೆಟ್ಟಿ

Published On : 11 Mar 2017   |  Reported By : Rons Bantwal


ಮುಂಬಯಿ, ಮಾ. 10: ನವೋದಯ ಕನ್ನಡ ಸೇವಾ ಸಂಘ ಥಾಣೆ ಇವರ ಸಂಚಾಲಕತ್ವದಲ್ಲಿರುವ ನವೋದಯ ಇಂಗ್ಲೀಷ್ ಹೈಸ್ಕೂಲಿನ ಪ್ರಾಥಮಿಕ ವಿಭಾಗದ ಕನ್ನಡ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ವಿಜೇತರಿಗೆ ಬಹುಮಾನ ವಿತರಣೆ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಾಲಕರಿಗಾಗಿ ಉಪನ್ಯಾಸ ಕಾರ್ಯಕ್ರಮವು ತಾ. 04.03.2017 ರಂದು ನವೋದಯ ಜೂನಿಯರ್ ಕಾಲೇಜಿನ ಸಭಾಗೃಹದಲ್ಲಿ ಜರಗಿತು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯ ಅಗತ್ಯತೆಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದ ಡಾ| ಶ್ರೀ ಶ್ರೀಧರ ಶೆಟ್ಟಿ (ಪ್ರಾಂಶುಪಾಲರು ಎಸ್. ಎಮ್. ಶೆಟ್ಟಿ ಕಾಲೇಜ್ ಆಫ್ ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್, ಪೆÇವಾಯಿ) ಇವರು ಇಂದಿನ ಕಾಲದಲ್ಲಿ ಶಿಕ್ಷಣದಲ್ಲಾದ ಬದಲಾವಣೆ ಹಾಗೂ ತಂತ್ರಜ್ಞಾನದ ಸದುಪಯೋಗ ಮತ್ತು ದುರುಪಯೋಗದಿಂದ ಮಕ್ಕಳ ಆಚಾರ, ವಿಚಾರ, ನಡೆ, ನುಡಿಗಳಲ್ಲಾಗುವಂತಹ ಬದಲಾವಣೆಯ ಕುರಿತು ಪಾಲಕರಿಗೆ ಮನದಟ್ಟು ಮಾಡಿದರು. ಇದರೊಂದಿಗೆ ತಮ್ಮ ವಿದ್ಯಾರ್ಥಿ ಜೀವನದ ನೆನಪುಗಳನ್ನು ಬಿಚ್ಚಿಡುತ್ತಾ ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ನೈಸರ್ಗಿಕ ರೀತಿಯ ಶಿಕ್ಷಣ ದೊರೆಯುತ್ತಿತ್ತು ಆದರೆ ಇಂದು ಸಂಪೂರ್ಣವಾಗಿ ತಾಂತ್ರಿಕ ಶಿಕ್ಷಣವೇ ಪ್ರಬಲವಾಗಿದೆ ಎಂದರು.

ಪಾಲಕರು ತಮ್ಮ ಮಗುವಿನ ವಿಚಾರ ಶಕ್ತಿಗೆ ಹಾಗೂ ಆಸಕ್ತಿಗೆ ಅನುಸಾರವಾಗಿ ತಮ್ಮ ಭವಿಷ್ಯವನ್ನು ರೂಪಿಸಲು ಅವಕಾಶ ಕಲ್ಪಿಸಿ ಕೊಡಬೇಕು. ಅದೇ ರೀತಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸುವಲ್ಲಿ ಹೆತ್ತವರ ಹಾಗೂ ಶಿಕ್ಷಕರ ಪಾತ್ರ ಮುಖ್ಯ. ಹಾಗೆಯೇ ಮಕ್ಕಳು ಬಾಲ್ಯಾವಸ್ಥೆಯಿಂದ ಯವ್ವನಾವಸ್ಥೆಗೆ ಕಾಲಿಡುವ ಸಂದರ್ಭದಲ್ಲಿ ಆಗುವಂತಹ ಶಾರೀರಿಕ ಹಾಗೂ ಮಾನಸಿಕ ಬದಲಾವಣೆಯನ್ನು ಗುರುತಿಸಿ ಮಕ್ಕಳನ್ನು ತಾಳ್ಮೆಯಿಂದ ಹತೋಟಿಯಲ್ಲಿ ಇಡಬೇಕು ಎಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ಸ್ವಾಗತ ಗೀತೆಯೊಂದಿಗೆ ಪ್ರಾರಂಭ ಗೊಂಡಿತು. ಸಂಘದ ಗೌ. ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ದಯಾನಂದ ಎಸ್. ಶೆಟ್ಟಿಯವರು ಅತಿಥಿಗಳ ಪರಿಚಯ ಮಾಡಿದರು. ಸಂಘದ ಅಧ್ಯಕ್ಷರು ಶ್ರೀ ಜಯ ಕೆ. ಶೆಟ್ಟಿ ಅತಿಥಿಯವರಿಗೆ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಉಚ್ಚಿಲ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಾಗೂ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಈ ಸಂದರ್ಭದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕನ್ನಡ ಕಲಿತು ಅತ್ಯುತ್ತಮ ವಿದ್ಯಾರ್ಥಿಗಳೆಂದು ಗುರುತಿಸಲ್ಪಟ್ಟ ಕುಮಾರಿ ಕವನ ಟಿ. ಪೂಜಾರಿ ಹಾಗೂ ಕುಮಾರ ಗೌರವ. ಎಸ್. ಶೆಟ್ಟಿ ಇವರನ್ನು ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಪ್ರಸ್ತುತ ವರ್ಷದಲ್ಲಿ ನಿವೃತ್ತಿಯಾಗಲಿರುವ ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಉಚ್ಚಿಲ್ ಹಾಗೂ ಶಿಕ್ಷಕ ಶ್ರೀ ಅರವಿಂದ ರಾಯರ್ ಇವರನ್ನು ಸಂಘದ ವತಿಯಿಂದ ಪದಾಧಿಕಾರಿಗಳು ಪುಷ್ಪ ಗೌರವ ನೀಡಿ ಸನ್ಮಾನಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರು ಶ್ರೀ ಜಯ. ಕೆ. ಶೆಟ್ಟಿ ಮಾತನಾಡಿ ಭಾಷೆ ಎಂದರೆ ಎರಡಕ್ಷರದ ಶಬ್ದ, ಆದರೆ ಆ ಶಬ್ಧದ ಹಿಂದೆ ಒಂದು ಜನಾಂಗದ ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ಹಬ್ಬ?ಹರಿದಿನ, ತಿಂಡಿ-ತಿನಿಸು, ನಡೆ-ನುಡಿ ಅಡಕವಾಗಿರುವುದು ಎಂದರೆ ತಪ್ಪಾಗಲಾರದು. ನಾವು ದೇಶದ ಯಾವ ಮೂಲೆಯಲ್ಲಿದ್ದರೂ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಮರೆಯದೆ, ಅದನ್ನು ಉಳಿಸಿ ಬೆಳೆಸಬೇಕೆಂದು ತಮ್ಮ ಅನಿಕೆಯನ್ನು ಹೇಳುತ್ತಾ ಹಾಗೆಯೇ ಪಾಲಕ ಪೆÇೀಷಕರಲ್ಲಿ ನಾವು ನಮ್ಮ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಮಾಡದೆ ನಮ್ಮ ಮಕ್ಕಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಹಬ್ಬ ಹರಿದಿನಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಕೇಳಿ ಕೊಂಡರು.ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾದರ ಪಡಿಸಲಾದ ಭಾವಗೀತೆ, ಮೂಕಾಭಿನಯ ಹಾಗೂ 'ಪುಣ್ಯಕೋಟಿ' ಎಂಬ ಕಿರು ನಾಟಕವು ಎಲ್ಲಾ ಸಭಿಕರ ಕಣ್ಣಂಚನ್ನು ತೇವಗೊಳಿಸಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here