Sunday 11th, May 2025
canara news

ಇನ್ನಬೈಲು ಮನೆ ಕುಟುಂಬಿಕರ ದೈವ ಪ್ರತಿಷ್ಠಾಪನೆ-ನೇಮೋತ್ಸವ

Published On : 12 Mar 2017   |  Reported By : Rons Bantwal


ದಿವಂಗತ ರಂಜನಿ ರಾಮ ಸುವರ್ಣ ಸ್ಮರಣಾರ್ಥ ನೂತನ ಗೃಹಪ್ರವೇಶ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಪಡುಬಿದ್ರಿ, ಮಾ.12: ಪಡುಬಿದ್ರಿ ಸನಿಹದಲ್ಲಿ ಸುಮಾರು ನಾಲ್ನೂರು ವರ್ಷಗಳ ಇತಿಹಾಸವುಳ್ಳ ಇನ್ನಬೈಲು ಮನೆ ಕುಟುಂಬಿಕರ ದೈವ ಪ್ರತಿಷ್ಠಾಪನೆ, ನೇಮೋತ್ಸವ, ದೈವ ದರ್ಶನ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಇಂದಿಲ್ಲಿ ಭಾನುವಾರ ಸಂಪನ್ನ ಗೊಂಡಿತು.

ಆ ಪ್ರಯುಕ್ತ ಬೆಳಿಗ್ಗೆ ವಾಸ್ತು ಪೂಜೆ, ಸತ್ಯನಾರಾಯಣ ಮಹಾಪೂಜೆ ನಡೆಸಲ್ಪಟ್ಟಿದ್ದು ಪುರೋಹಿತ ರಮೇಶ್ ಭಟ್ ಪಡುಇನ್ನಾ ಅವರು ನೆರವೇರಿಸಿ ತೀರ್ಥಪ್ರಸಾದವನ್ನಿತ್ತು ಹರಸಿದರು. ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್.ಕೋಟ್ಯಾನ್ ಅವರ ದಕ್ಷ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಸುಂದರಿ ರಾಜು ಬಂಗೇರ (ತಾಯಿ), ರಾಮ ಜಿ.ಸುವರ್ಣ, ಮನೀಷಾ ಅಭಿಷೇಕ್ ಪೂಜಾರಿ, ರಾಮ ಸುವರ್ಣ, ಸೋಹನ್, ಮೋಹಿನಿ ವಾಸುದೇವ ಕೋಟ್ಯಾನ್, ನಿಶಾ ಸಚಿನ್ ಸುವರ್ಣ, ದೀಪಿಕಾ ಲಕ್ಷ್ಮೀಶ್ ಸುವರ್ಣ, ಇನ್ನಬೈಲು ದಿ| ರಂಜನಿ ರಾಮ ಸುವರ್ಣ ಮತ್ತಿತರರಿಂದ ಭಾರತ್ ನಿರ್ಮಿಸಲ್ಪಟ್ಟ ಇನ್ನಬೈಲು ಮನೆ ದಿವಂಗತ ರಂಜನಿ ರಾಮ ಸುವರ್ಣ ಸ್ಮರಣಾರ್ಥ ನೂತನ ನಿವಾಸವನ್ನು ನಾಮಫಲಕ ಅನಾವರಣಗೊಳಿಸಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ, ಭಾರತ್ ಬ್ಯಾಂಕ್ ಕಾರ್ಯಧ್ಯಕ್ಷ ಜಯ ಸಿ.ಸುವರ್ಣರು ಉದ್ಘಾಟಿಸಿದರು.


ಬಳಿಕ ನಡೆಸಲ್ಪಟ್ಟ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿ ಜಯ ಸಿ.ಸುವರ್ಣ, ಹಾಗೂ ಗೌರವ ಅತಿಥಿüಗಳಾಗಿ ಉದ್ಯಮಿ ವಡಲಾ ಚಂದ್ರಶೇಖರ ಸಿ.ಪೂಜಾರಿ, ಭಾರತ್ ಬ್ಯಾಂಕ್ ನಿರ್ದೇಶಕಿ ಪುಷ್ಪಲತಾ ನರ್ಸಪ್ಪ ಸಾಲ್ಯಾನ್, ಡಾ| ಕೆ.ಎಂ ಕೋಟ್ಯಾನ್, ರಾಮ ಜಿ.ಸುವರ್ಣ, ಮಧ್ಯಸ್ಥ ಸತೀಶ್ ಪೂಜಾರಿ ಮತ್ತಿತರರು ವೇದಿಕೆಯಲ್ಲಿ ಅಸೀನರಾಗಿದ್ದು ವಾಸುದೇವ ಆರ್.ಕೋಟ್ಯಾನ್ ಮತ್ತು ಮೋಹಿನಿ ವಿ.ಕೋಟ್ಯಾನ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ನೆರೆದ ಇನ್ನಬೈಲು ಮನೆ ಕುಟುಂಬಸ್ಥರಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಗೌರವಿಸಿದರು.

ಮನೆ ಅಂದರೆ ಅನ್ಯೋನತೆಯ ಸ್ಥಾನವಾಗಿದ್ದು ದೈವದೇವರುಗಳ ಆರಾಧನೆ ಮೂಲಕ ಇನ್ನಬೈಲು ಮನೆ ಕುಟುಂಬಿಕರು ಕುಟುಂಬದ ಮನೆ ನಿರ್ಮಿಸಿ ಧಣ್ಯರೆಣಿಸಿದೆ. ಪ್ರಸಕ್ತ ಕಾಲಮಾನದಲ್ಲಿ ಕುಟುಂಬ ಕಟ್ಟುವುದೇ ಸಹಾಸದ ಮತ್ತು ಮಹಾನ್ ಕೆಲಸವಾಗಿದೆ. ಮೂಲಸ್ಥಾನದ ಬೆಳವಣಿಗೆಯಿಂದ ಜೀವನ ಫಲಪ್ರದವಾಗುವುದು. ಮನೆ ಒಳ್ಳೆಯದಿದ್ದರೆ ಮನುಜ ಮನಗಳೂ ನಿರ್ಮಲವಾಗಿರುತ್ತವೆ. ಮನಮನೆಗಳ ಸ್ವಚ್ಛತೆಯಿಂದ ಕೌಟುಂಬಿಕ ಸಂಬಂಧಗಳೂ ಮತ್ತು ಸಮಾಜವೂ ಸ್ವಚ್ಛವಾಗಿದ್ದು ಸ್ವಚ್ಛಂದದ ಸಮಾಜ ನಿರ್ಮಾಣಕ್ಕೆ ಪೂರಕವಾಗುತ್ತದೆ. ಇಂತಹ ಕುಟುಂಬಿಕ ಬದುಕಿಗೆ ಇನ್ನಬೈಲು ಮನೆತನ ಮಾದರಿಯಾದ್ಗಿದೆ ಎಂದು ಜಯ ಸುವರ್ಣರು ತಿಳಿಸಿದರು.

ಇದು ಪುರಾತನ ಇತಿಹಾಸವುಳ್ಳ ಜಾಗವಾಗಿದ್ದು ಏಕತೆ ಸಾರುವುದೇ ಇಲ್ಲಿನ ಕಾರಣಿಕೆಯಾಗಿದೆ. ಅಂತಹ ಮನೋಭಾವಿಗಳ ಇನ್ನಬೈಲು ಮನೆ ಕುಟುಂಬಿಕರು ದೈವದೇವ ಭಕ್ತಿವುಳ್ಳವರಾಗಿ ತಮ್ಮ ಪರಂಪರೆಯನ್ನು ಮುನ್ನಡಿಸಿ ಬಂದಿದ್ದಾರೆ. ಪ್ರಸಕ್ತ ಪೀಳಿಗೆಯು ಭವಿಷ್ಯತ್ತಿನ ಜನಾಂಗಕ್ಕೆ ಇಂತಹ ಅವಕಾಶ ಒದಗಿಸಿದ್ದು ಸಮಸ್ತ ಕುಟುಂಬಸ್ಥರ ಸೇವೆ, ಸಹಯೋಗದೊಂದಿಗೆ ಇದು ಸಾಧ್ಯವಾಗಿದೆ ಎಂದು ವಾಸುದೇವ ಕೋಟ್ಯಾನ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಸಿ.ಟಿ ಸಾಲ್ಯಾನ್, ಗೌ. ಪ್ರ.ಕೋಶಾಧಿಕಾರಿ ಮಹೇಶ್ ಕಾರ್ಕಳ, ವ್ಯವಸ್ಥಾಪಕ ಭಾಸ್ಕರ ಟಿ.ಪೂಜಾರಿ, ಸಿಎ| ಅಶ್ವಜಿತ್ ಹೆಜ್ಮಾಡಿ, ಕಲ್ಪನಾ ವಸಂತ್ ಕೋಟ್ಯಾನ್, ಕರ್ನಿರೆ ಪಟ್ರೆಗುತ್ತು ಜೈದೀಪ್ ಅಮೀನ್, ಜಿನದಾಸ್ ಬಂಗೇರ, ಸತೀಶ್ ಎನ್.ಬಂಗೇರ, ಎಸ್.ಕೆ ಸಾಲ್ಯಾನ್, ಬಾಲಕೃಷ್ಣ ಎಸ್.ಕರ್ಕೇರ, ಪ್ರವೀಣ್ ಕೆ.ಇನ್ನಾ, ಮಲ್ಲಿಕಾ ನವೀನ್ ಇನ್ನ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು, ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್‍ದಾಸ್ ಹೆಜ್ಮಾಡಿ ಸ್ವಾಗತಿಸಿ ಪ್ರಸ್ತಾವನೆಗೈದು ವಂದಿಸಿದರು.

ಸಂಜೆ ಕಾರಣಿಕ ಕ್ಷೇತ್ರವೆಂದೇ ಪ್ರಸಿದ್ಧ ಇಲ್ಲಿನ ಹಿರಿಯಣ್ಣ, ಕುಪ್ಪೆಟ್ಟು ಪಂಜುರ್ಲಿ, ಮಂತ್ರದೇವತೆ, ವರ್ತೆ ಪಂಜುರ್ಲಿ, ಜಾಗದ ಪಂಜುರ್ಲಿ, ಗುಳಿಗಚಾಮುಂಡಿ ಇತ್ಯಾದಿ ದೈವಗಳ ನೆಮೋತ್ಸವ ಮಧ್ಯಸ್ಥ ಸತೀಶ್ ಪೂಜಾರಿ ಶಿರ್ವ ಇವರ ಮುಂದಾಳುತ್ವದಲ್ಲಿ ನಡೆಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here