Friday 26th, April 2024
canara news

ಚಂದ್ರಶೇಖರ ಪಾಲೆತ್ತಾಡಿ ಅಭಿನಂದನಾ ಕಾರ್ಯಕ್ರಮ ಹಾಗೂ `ಆಪ್ತಮಿತ್ರ' ಗ್ರಂಥ ಬಿಡುಗಡೆ

Published On : 14 Mar 2017   |  Reported By : Rons Bantwal


ಪಕ್ಷಾಂತರವಿಲ್ಲದ ಪತ್ರಿಕೋದ್ಯಮ ರಾಜಕಾರಣಿಗಳಿಗೆ ಮಾದರಿ : ಸಂಸದ ಕಟೀಲ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.14: ಪತ್ರಕರ್ತ ಯಾವೊತ್ತೂ ವ್ಯಕ್ತಿ ನಿರ್ಮಾಣದ ಶಕ್ತಿಯಾಗಿದ್ದು ಬಲಿಷ್ಠ ಸಮಾಜ ನಿರ್ಮಿಸುತ್ತದೆ. ಆದರೆ ವಾಟ್ಸ್‍ಆ್ಯಪ್, ಫೇಸ್‍ಬುಕ್, ಇಂಟರ್‍ನೆಟ್‍ಗಳಂತಹ ಪ್ರಸಕ್ತ ಯುಗದಲ್ಲಿ ಮಾಧ್ಯಮರಂಗ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿರುವ ಕಾರಣ ಮಾಧ್ಯಮಗಳು ಕಷ್ಟದಾಯಕವಾಗಿದೆ. ಆದುದರಿಂದ ಆಧುನಿಕ ಯುಗದಲ್ಲಿ ಮಾಧ್ಯಮರಂಗ ಉಳಿಸಿ ಬೆಳೆಸುವುದು ಕಷ್ಟದ ಕೆಲಸ ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ನುಡಿದರು.

ಇಂದಿಲ್ಲಿ ಸೋಮವಾರ ಅಪರಾಹ್ನ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ.ಭಂಡಾರಿ ಸಭಾಗೃಹದಲ್ಲಿ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿ ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಹಾಗೂ ಪಾಲೆತ್ತಾಡಿ ಅಭಿನಂದನಾ ಸಮಿತಿ ಮುಂಬಯಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮುಂಬಯಿ ಮಹಾನಗರದಲ್ಲಿನ ಹಿರಿಯ ಪತ್ರಕರ್ತ, ಕರ್ನಾಟಕ ಮಲ್ಲ ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರ ಅಭಿನಂದನ ಕಾರ್ಯಕ್ರ ಮದಲ್ಲಿ ಪಾಲೆತ್ತಾಡಿ ಅವರ ಆತ್ಮಕಥನ `ನಾನು... ನನ್ನ ಸ್ವಗತ' ಪುಸ್ತಿಕೆ ಅನಾವರಣ ಗೊಳಿಸಿ ಸಂಸದ ಕಟೀಲ್ ಮಾತನಾಡಿದರು.

 

 

ಎಡ ಪಂಥೀಯ ಚಿಂತನೆಯ ಆದರೆ ಬಲ ಪಂಥೀಯ ವೈಚಾರಿಕತೆ ಮೈಗೂಡಿಸಿ ಶಿಸ್ತು ಸಿದ್ಧಾಂತಗಳಿಗೆ ಬದ್ಧನಾಗಿ ಮುಂಬಯಿಯ ಪತ್ರಿಕಾರಂಗದಲ್ಲಿ ಅವಿರತ 25 ವರ್ಷ ದುಡಿದಿರುವುದು ಚಂದ್ರಶೇಖರ್ ಪಾಲೆತ್ತಾಡಿ ಅವರ ನಿಷ್ಠೆಯ ಪ್ರತೀಕವಾಗಿದೆ. ಅವರಿಗೆ ತಾವೆಲ್ಲರೂ ನೀಡುತ್ತಿರ್ವ ಇಷ್ಟೊಂದು ದೊಡ್ಡ ಸಂಖ್ಯೆಯ ಅಭಿನಂದನಾ ಗೌರವ ಸ್ತುತ್ಯರ್ಹ. ನನ್ನ ಲೋಕಸಭಾ ಕ್ಷೇತ್ರದ ಕೃಷಿಕ ಮತ್ತು ಬಡತನದ ಮನೆತನದಿಂದ ಮುಂಬಯಿ ಮಹಾನಗರಕ್ಕೆ ಬಂದು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅನುಪಮ ಸೇವೆಗೆ ಸಾಗರೋಪವಾಗಿ ಸೇರಿ ಅಭೂತಪೂರ್ವವಾಗಿ ಕೊಡಮಾಡುವ ಸನ್ಮಾನ ಪ್ರಶಂಸನೀಯ. ಪಾಲೆತ್ತಾಡಿ ಅವರ ದೀರ್ಘಾವಧಿಯ ಪಕ್ಷಾಂತರವಿಲ್ಲದ ಪತ್ರಿಕೋದ್ಯಮ ರಾಜಕಾರಣಿಗಳಿಗೆ ಮಾದರಿ. ಇಂತಹ ನಿಷ್ಠುರವಾದಿ ಪತ್ರಕರ್ತರೇ ರಾಜಕಾರಣಿಗೆಳಿಗೆ ಗುರುಗಳಾಗಿದ್ದಾರೆ. ಅವರಲ್ಲಿನ ಸಾಧನೆಗೆ ಅಸೂಯೆ ಸಲ್ಲದು. ಕರ್ನಾಟಕದಲ್ಲಿ ಮುಂದಿನ ಬಾರಿ ಬಿಜೆಪಿ ಗದ್ದುಗೆಗೇರಲಿದ್ದು ಆವಾಗ ನಾನೇ ಪಾಲೆತ್ತಾಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿಸಿ ಅವರ ಗುರುತರ ಸೇವೆಯನ್ನು ಪರಿಗಣಿಸುವೆ. ಇದು ಯುವ ಪತ್ರಕರ್ತರನ್ನು ಪ್ರೇರೆಪಿಸುವ ಅಭಿನಂದನೆ ಗೌರವವಾಗಿದೆ ಎಂದೂ ಸಂಸದ ಕಟೀಲ್ ತಿಳಿಸಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಉತ್ತರ ಮುಂಬಯಿ ಕ್ಷೇತ್ರದ ಸಂಸದ ಗೋಪಾಲ ಸಿ.ಶೆಟ್ಟಿ ಮತ್ತು ಕೆ.ಆರ್ ಪೇಟೆ ಶಾಸಕ ಡಾ| ನಾರಾಯಣ ಆರ್.ಗೌಡ ಅವರು ದೀಪ ಪ್ರಜ್ವಲಿಸಿ ಭವ್ಯ ಸಮಾರಂಭಕ್ಕೆ ಚಾಲನೆ ನೀಡಿದರು. ಪತ್ನಿ ಕುಸುಮಾ ಪಾಲೆತ್ತಾಡಿ, ಪುತ್ರಿ ದೀಪಾ ಪಾಲೆತ್ತಾಡಿ ಮತ್ತು ಪುತ್ರ ರೋಶನ್ ಪಾಲೆತ್ತಾಡಿ ಅವರನ್ನು ಒಳಗೊಂಡು ಚಂದ್ರಶೇಖರ ಪಾಲೆತ್ತಾಡಿ ಅವರಿಗೆ ಮಹಾರಾಷ್ಟ್ರದಲ್ಲಿ ನೆಲೆಯಾದ ಸಮಸ್ತ ಕನ್ನಡಿಗರ ಪರವಾಗಿ ಅತಿಥಿüವರ್ಯರು ಸನ್ಮಾನಿಸಿ ಗೌರವಾರ್ಪಣೆಗೈದ್ದು ಹಮ್ಮಿಣಿ ನೀಡಿ ಶುಭಾರೈಸಿದರು.ಅಲ್ಲದೆ ಮರಾಠಿ ಮತ್ತು ಕನ್ನಡ ಪತ್ರಿಕೋದ್ಯಮದ ದಿಗ್ಗಜ, ಸುಮಾರು ಎರಡುವರೆ ದಶಕಗಳಿಂದ `ಕರ್ನಾಟಕ ಮಲ್ಲ' ದೈನಿಕ ಪ್ರಕಟಿಸಿ ಕನ್ನಡ ಓದುಗರ ಮಾಧ್ಯಮ ಮಿತ್ರರೆಣಿಸಿ, ಪೆÇ್ರೀತ್ಸಹಿಸಿದ ಶ್ರೀ ಅಂಬಿಕಾ ಪ್ರಿಂಟರ್ಸ್ ಎಂಡ್ ಪಬ್ಲಿಕೇಶನ್ಸ್ ಇದರ ಮಾಲಿಕ, ಮುರಳೀಧರ ಶಿಂಗೋಟೆ ಅವರಿಗೂ ಅತಿಥಿüಗಳು ಗೌರವಾರ್ಪಣೆ ನಡೆಸಿದ್ದು ಅವರ ಪರವಾಗಿ ಪುತ್ರ ಪ್ರವೀಣ್ ಶಿಂಗೋಟೆ ಅವರು ಸನ್ಮಾನ ಸ್ವೀಕರಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಬಂಟ್ಸ್ ನ್ಯಾಯ ಮಂಡಳಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌರವಾನ್ವಿತ ಅತಿಥಿಯಾಗಿ ಎಂ.ಡಿ ಶೆಟ್ಟಿ, ಅತಿಥಿsಗಳಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಉದ್ಯಮಿಗಳಾದ ಕೃಷ್ಣ ವೈ.ಶೆಟ್ಟಿ, ರಘುರಾಮ ಕೆ.ಶೆಟ್ಟಿ, ಸತೀಶ್ ರಾಮ ನಾಯಕ್, ಡಾ| ಸುರೇಂದ್ರ ವಿ.ಶೆಟ್ಟಿ, ರಾಘು ಪಿ.ಶೆಟ್ಟಿ, ಸುಧಾಕರ ಎಸ್.ಹೆಗ್ಡೆ, ಸುರೇಶ್ ಆರ್.ಕಾಂಚನ್, ಎನ್.ಟಿ ಪೂಜಾರಿ, ಗೋಪಾಲ್ ಎಸ್.ಪುತ್ರನ್, ಜಯರಾಮ ಎನ್.ಶೆಟ್ಟಿ, ಸಿಎ| ಶಂಕರ ಬಿ.ಶೆಟ್ಟಿ, ಆದರ್ಶ್ ಬಿ.ಶೆಟ್ಟಿ, ಡಾ| ಶಿವ ಮೂಡುಗೆರೆ, ಸಮಾಜ ಸೇವಕರುಗಳಾದ ಪ್ರಕಾಶ್ ಬಿ.ಭಂಡಾರಿ, ರವಿ ಎಸ್. ದೇವಾಡಿಗ, ಉದಯ ಶೆಟ್ಟಿ ಕಾಂತಾವರ ಉಪಸ್ಥಿತರಿದ್ದರು. ಭವಾನಿ ಫೌಂಡೇಶನ್‍ನ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ಡಿ.ಶೆಟ್ಟಿ ಅವರು ಪಾಲೆತ್ತಾಡಿ ಅವರ ಅಭಿನಂದನ ಗ್ರಂಥ `ಆಪ್ತಮಿತ್ರ' ಬಿಡುಗಡೆ ಗೊಳಿಸಿದ್ದು, ಕಾರ್ಯಕ್ರಮದ ರೂವಾರಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಡಾ| ಜಿ.ಎನ್ ಉಪಾಧ್ಯ ಅಭಿನಂದನಾ ನುಡಿಗಳನ್ನಾಡಿದರು. ಪದ್ಮನಾಭ ಸಸಿಹಿತ್ಲು ಶೀರ್ಷಿಕೆ ಗೀತೆಯನ್ನಾಡಿದರು. ಚಂದ್ರಿಕಾ ಹರೀಶ್ ಶೆಟ್ಟಿ ಮತ್ತು ಡಾ| ಪೂರ್ಣಿಮಾ ಶೆಟ್ಟಿ ಅವರು ಪಾಲೆತ್ತಾಡಿ ದಂಪತಿಗೆ ಕುಂಕುಮ ಅರಸಿನವನ್ನಿಟ್ಟು ಆರತಿಗೈದರು.

ಕರ್ನಾಟಕದ 20 ಲಕ್ಷ ಜನತೆ ಮಹಾರಾಷ್ಟರದಲ್ಲಿದ್ದಾರೆ. ಇವರಲ್ಲಿ ಬಹುತೇಕರು ಸಾಧಕರೇ ಸರಿ. ತುಳುನಾಡ ಮಣ್ಣಿನ ಶಕ್ತಿ ಮತ್ತು ಹಿರಿಯರ ಮಾರ್ಗದರ್ಶನ ನಮ್ಮವರ ಸಾಧನೆಗೆ ಚೈತನ್ಯವಾಗಿದೆ. ಮಹಾರಾಷ್ಟ್ರದಲ್ಲಿನ ಎಲ್ಲಾ ಸಂಘ ಸಂಸ್ಥೆಗಳ ಬೆಳವಣಿಗೆಗೆ ಕರ್ನಾಟಕ ಮಲ್ಲ ಶಕ್ತಿ ತುಂಬಿದ್ದು ನಮ್ಮೆಲ್ಲರ ವ್ಯಕ್ತಿತ್ವದ ಸಂಬಂಧವೇ ಇದಕ್ಕೆ ಕಾರಣವಾಗಿದೆ. ಸುಖಕಷ್ಟಕ್ಕೆ ಒಟ್ಟಾಗುವ ತುಳುಕನ್ನಡಿಗ ಜನತೆ ಮುಂಬಯಿಗರು. ಇವರೆಲ್ಲರಿಂದಲೂ ಇಲ್ಲಿನ ಹಿರಿಯ ಪತ್ರಕರ್ತ, ಸದ್ಗುಣ ಮತ್ತು ಸಾಧಕ ಪಾಲೆತ್ತಾಡಿ ಅವರಿಗೆ ಒಳ್ಳೆಯ ಗೌರವಾರ್ಪಣೆ ನಮ್ಮ ಆಶಯವಾಗಿತ್ತು. ಇದು ಇಂದು ಜನಸ್ತೋಮವಾಗಿ ಈಡೇರಿದೆ. ಇದೇ ಲೋಕನಾಯಕನಾದ ಸಂಪಾದಕ ಪಾಲೆತ್ತಾಡಿ ಅವರ ಸಂಪಾದನೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು.

ಶಿಸ್ತು, ನೀತಿ, ಶ್ರದ್ಧೆಯೊಂದಿಗೆ ಪತ್ರಿಕಾರಂಗದಲ್ಲಿ 25ರ ಸುಧೀರ್ಘ ಅವದಿ ಪೂರೈಸಿದ ಚಂದ್ರಶೇಖರರನ್ನು ಇಷ್ಟೊಂದು ಜನ ಸೇರಿ ಸನ್ಮಾನಿಸುತ್ತಿರುವುದು ತುಂಬಾ ಸಂತೋಷವೆಣಿಸುತ್ತದೆ. ಇಂದು ಮಾಧ್ಯಮ ಜೀವನ ಸುಲಭವಲ್ಲ. ಆದರೆ ಶಿಸ್ತುಬದ್ಧ ಬದುಕಿನಿಂದ ಇದು ಪಾಲೆತ್ತಾಡಿ ಅವರಿಗೆ ಒದಗಿದೆ. ಮರಾಠಿ ನೆಲೆಯಲ್ಲಿ ಕನ್ನಡಿಗರ 25ರ ಪತ್ರಿಕೋದ್ಯಮದ ಇಡೀ ಕರ್ನಾಟಕದ ಜನತೆಗೆ ಅಭಿಮಾನ ಪಡುವ ವಿಷಯ. ಪಾಲೆತ್ತಾಡಿ ಅವರು ಮಾತೃಭಾಷೆಯನ್ನು ನಮ್ಮವರಿಗಾಗಿ ಹಿಡಿದಿಟ್ಟಿರುವ ಜೊತೆಗೆ ಶಿಂಗೋಟೆ ಪರಿವಾರದ ಕನ್ನಡಪ್ರೇಮ ಕರ್ನಾಟಕ ಮಲ್ಲದ ಬೆಳವಣಿಗೆಗೆ ಶಕ್ತಿದಾಯಕವಾಗಿದೆ. ತುಳು ಕನ್ನಡಿಗರು ಶಿಸ್ತುವುಳ್ಳವರಾಗಿದ್ದು ಇದರ ಫಲವೇ ಮರಾಠಿ ಭೂಮಿಯಲ್ಲಿ ಕನ್ನಡದ ಬೆಳವಣಿಗೆ ಮತ್ತು ಈ ಸಮಾರಂಭ ಎಂದು ಸಂಸದ ಗೋಪಾಲ ಶೆಟ್ಟಿ ನುಡಿದರು.

ಕೆ.ಡಿ ಶೆಟ್ಟಿ ಶುಭಾರೈಸಿ ನಾನು ಬಿಡುಗಡೆಗೊಳಿಸಿದ ಪಾಲೆತ್ತಾಡಿ ಅವರ ಅಭಿನಂದನಾ ಗ್ರಂಥ `ಆಪ್ತಮಿತ್ರ' ನಿಜವಾದ ಆಪ್ತಮಿತ್ರವಾಗಿದೆ. ಇದ್ದುದ್ದನ್ನು ಇದ್ದ ಹಾಗೇ ಹೇಳುವ, ಇಲ್ಲದ್ದನ್ನು ವೈಭವೀಕರಿಸದ ಶ್ರೇಷ್ಠ ಪತ್ರಕರ್ತ ಪಾಲೆತ್ತಾಡಿ ಎಲ್ಲರಿಗೂ ಮಾದರಿ ಎಂದರು.

ಪಾಲೆತ್ತಾಡಿ ಅವರ ಮುಂಬಯಿ ಪತ್ರಿಕಾಕ್ಷೇತ್ರದ ಬೆಳ್ಳಿಬೆಳಕಿನ ಆರಾಧನೆಗೆ ಅಭಿವಂದನೆಗಳು. ಅವರ ಪತ್ರಿಕೋದ್ಯಮ ದ ಭಗೀರಥ ಪ್ರಯತ್ನ ಸ್ತುತ್ಯರ್ಹ.ಇದು ಅವರಿಗೆ ಸ್ವರ್ಣ ಮಹೋತ್ಸವದ ಭಾಗ್ಯ ಪ್ರಾಪ್ತಿಯಾಗಲಿ ಪ್ರಭಾಕರ ಶೆಟ್ಟಿ ನುಡಿದರು.

ಮುಂಬಯಿ ಕನ್ನಡಿಗರ ಮುಂಜಾನೆಯ ಮಿತ್ರನೇ ಕರ್ನಾಟಕ ಮಲ್ಲ. ಇದು ವರದಿ ಲೇಖನಗಳಿಂದ ಮನೆಮನಗಳ ಲ್ಲೂ ಪ್ರಚಲಿತ. ಕೃಷಿಕ ಕಷ್ಟದ ಜೀವನದ ಸರಳ, ಸಾಮಾನ್ಯ ವ್ಯಕ್ತಿತ್ವವುಳ್ಳ ಅನುಭವಿ ಪತ್ರಕರ್ತರೇ ಪಾಲೆತ್ತಾಡಿ. ಅನುಭವವುಳ್ಳವರಲ್ಲೇ ಒಳ್ಳೆಯ ದೃಷ್ಠಿಕೋನ ಇರುತ್ತದೆ. ಇದೇ ಪಾಲೆತ್ತಾಡಿ ಅವರ ಸಾಧನೆ ಹಿಂದಿನ ಶಕ್ತಿ. ಈ ಸಂಪತ್ತೇ ಪಾಲೆತ್ತಾಡಿ ಅವರು ದಿಟ್ಟ ಸಂಪಾದಕರೆಣಿಸಿ ಸರ್ವರ ಮನಸ್ಸನ್ನು ಗೆಲ್ಲಲು ಕಾರಣವಾಗಿದೆ ಎಂದು ಪದ್ಮನಾಭ ಪಯ್ಯಡೆ ತಿಳಿಸಿದರು.

ನಾರಾಯಣ ಗೌಡ ಮಾತನಾಡಿ ಈಗಲಾದದರೂ ಪಾಲೆತ್ತಾಡಿ ಅವರನ್ನು ಗೌರವಿಸಿದ್ದು ಅಭಿಮಾನವೆಣಿಸುತ್ತಿದೆ. ನನ್ನ ಶಾಸಕತ್ವದ ಹಿರಿಮೆ ಕರ್ನಾಟಕ ಮಲ್ಲ ಪತ್ರಿಕೆಗೆ ಸಲ್ಲುತ್ತದೆ. ಶಿಂಗೋಟೆ ಪರಿವಾರದ ಸಹಯೋಗ ಇಲ್ಲಿನ ಕನ್ನಡ ಮಾಧ್ಯಮಕ್ಕೆ ಬಲತುಂಬಿದೆ. ಅವರಿಗೂ ಹೆಗ್ಗಳಿಕೆ ಸಲ್ಲಬೇಕು. ಶ್ರೀ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದ ಶ್ರೀಗಳೂ ತಮ್ಮ ಅನುಗ್ರಹಗಳನ್ನು ಪಾಲೆತ್ತಾಡಿ ಅವರಿಗೆ ತಿಳಿಸಿ ಪ್ರಸಾದವನ್ನೀಡಿ ಶುಭಾರೈಸಿದ್ದಾರೆ ಎಂದರು.

ಬದುಕಿನಲ್ಲಿ ಗಾಂಭೀರ್ಯತೆ ಮತ್ತು ಇತಿಮಿತಿಗಳು ಅತ್ಯವಶ್ಯ,. ಇವುಗಳನ್ನು ಉಳಿಸಿಕೊಂಡು ಬಾಳಿದಾಗ ಜೀವನ ಹಸನಾಗುವುದು. ನಮ್ಮನಮ್ಮ ಸ್ವಯತ್ತೆ ನಮ್ಮಲ್ಲಿರಿಸಿ ಇತಿಮಿತಿಗಳನ್ನು ಮೀರದೆ ಸಿದ್ಧಾಂತಕ್ಕೆ ಬದ್ಧವಾಗಿ ಬಾಳಿದರೆ ಎಲ್ಲವೂ ಸಿದ್ಧಿಗೊಳ್ಳುವುದು. ಮಹಾರಾಷ್ಟ್ರದ ಇತಿಹಾಸದಲ್ಲಿ ಕನ್ನಡಿಗರ ಪಾಲಿನ ಪಾತ್ರ ಎಷ್ಟಿದೆಯೋ ಅಷ್ಟೇ ಕರ್ನಾಟಕ ಮಲ್ಲ ದೈನಿಕದ ಪಾತ್ರವೂ ಇದೆ. ಮರಾಠಿ ನೆಲದಲ್ಲಿ ಕನ್ನಡದ ಸಾಮರಸ್ಯತ್ವ ಬೆಳೆಸಲು ಇಂತಹ ಪತ್ರಿಕೆಯ ಸಾಕ್ಷಿ ಸಾಕು.
ಎಂದು ಸುನೀತಾ ಶೆಟ್ಟಿ ಅಭಿಪ್ರಾಯ ಪಟ್ಟರು.

ಕನ್ನಡದ ಪರಿಚಾರಿಕಾ ಕೈಕರ್ಯಗೈದ ಧೀರ ಪತ್ರಕರ್ತರೇ ಪಾಲೆತ್ತಾಡಿ. ಮುಂಬಯಿಯಲ್ಲಿ ಕನ್ನಡದ ಕಹಳೆ ಮೊಗಗಿಸಿದ ಶ್ರೇಷ್ಠ ಪತ್ರಕರ್ತ. ಮುಂಬಯಿಯಲ್ಲಿನ ಗಣ್ಯರಲ್ಲಿ ಶಕ್ತಿ ಕೇಂದ್ರವಾಗಿ ಸಾಮರಸ್ಯ ಬಾಳಿಗೆ ಬುನಾದಿಯಾದ ಕನ್ನಡದ ಸಾಹಸಿ ಕಲ್ಪವೃಕ್ಷದಂತಹ ಪತ್ರಕರ್ತರು. ಶ್ರಮ ಸಂಸ್ಕೃತಿಯ ಸದ್ಗುಣವುಳ್ಳವರು. ಅಂಧತೆಮುಕ್ತ ಪತ್ರಕರ್ತರಾಗಿ ಬರವಣಿಗೆಯ ಕೃಷಿಕನಾದ ಮುಂಬಯಿ ಕನ್ನಡಿಗರ ದಂತ ಕಥೆಯಾಗಿದ್ದಾರೆ ಎಂದು ಅಭಿನಂದನಾ ನುಡಿಗಳಲ್ಲಿ ಡಾ| ಉಪಾಧ್ಯಯ ಬಣ್ಣಿಸಿದರು.

ಇದು ನನ್ನ ಪಾಲಿನ ಕನಸಿನಲ್ಲೂ ಎನಿಸದ ಶುಭದಿನ ನನ್ನದಾಗಿದೆ. ನಾನು ಸಂಪಾದಕನಾಗಿದ್ದರೂ ಈ ರೀತಿಯ ಸನ್ಮಾನ ಆಶಿಸಿದವನಲ್ಲ. ನಾನು ನನ್ನ ಕರ್ತವ್ಯವನ್ನು ಮಾತ್ರ ಪೂರೈಸಿರುವೆ. ಕರ್ನಾಟಕ ಮಲ್ಲದ ಮಾಲೀಕರು, ಸಿಬ್ಬಂದಿಗಳು ಮತ್ತು ಓದುಗರೇ ನನ್ನ ಸಂಬಂಧಿಕರು. ಪತ್ರಿತೆಯ ಹುಚ್ಚು ನನ್ನನ್ನು ಇಲ್ಲಿಗೆ ಕರೆತಂದದ್ದು. ನಿಷ್ಠುರತೆಯೇ ನನ್ನತನವಾಗಿದ್ದು ಇದೇ ನನ್ನ ಈ ಸಂಭ್ರಮಕ್ಕೆ ಕಾರಣವಾಗಿದೆ. ಕರ್ನಾಟಕ ಮಲ್ಲದ 25 ವರ್ಷಗಳಲ್ಲಿನ ನೋವು-ನಲಿವುಗಳನ್ನು ನಾನು ದಿಟ್ಟತನದಿಂದಲೇ ಎದುರಿಸಿದ್ದೇನೆ. ಆ ಮೂಲಕ ಸಂತೋಷ ಪಟ್ಟಿದ್ದೇನೆ. ಮುಂಬಯಿ ಓದುಗ ಬಂಧುಗಳು ಕರ್ನಾಟಕ ಮಲ್ಲವನ್ನು ಮುದ್ದಾಡಿ ಬೆಳೆಸಿದ್ದಾರೆ. ಇದು ಮುಂಬಯಿ ಕನ್ನಡಿಗರ ಧ್ವನಿಯಾಗಿದೆ. ಆದುದರಿಂದ ಈ ಗೌರವ ಮುಂಬಯಿ ಕನ್ನಡಿಗರಿಗೆ ಸಲ್ಲಿಸುತ್ತೇನೆ ಎಂದು ಗೌರವಕ್ಕೆ ಉತ್ತರಿಸಿ ಪಾಲೆತ್ತಾಡಿ ನುಡಿದರು.

ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ, ಆಪ್ತಮಿತ್ರ ಸಂಪಾದಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕೃತಿಯ ಕುರಿತು ಮಾಹಿತಿಯಿತ್ತÀರು. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಪತ್ರಿಕೋದ್ಯಮಕ್ಕೆ ಪಾಲೆತ್ತಾಡಿ ಅವರ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು. ಬಾಬು ಕೆ.ಬೆಳ್ಚಡ ಮತ್ತು ತಂಡ ರಚಿಸಿದ ಪಾಲೆತ್ತಾಡಿ ಅವರ ಸಾಕ್ಷ ್ಯ ಚಿತ್ರ ಪ್ರದರ್ಶಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಸಮಿತಿ ಸಂಚಾಲಕ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಕಾರ್ಯದರ್ಶಿ ಪೇತ್ರಿ ವಿಶ್ವನಾಥ ಶೆಟ್ಟಿ, ಕೋಶಾಧಿಕಾರಿ ಸುರೇಶ್ ಶೆಟ್ಟಿ ಯೆಯ್ಯಾಡಿ, ಜೊತೆ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ರೀಧರ ಉಚ್ಚಿಲ್, ಸಾಂಸ್ಕೃತಿಕ ಸಮಿತಿ ಸಂಚಾಲಕರುಗಳಾದ ಸುರೇಂದ್ರಕುಮಾ ರ್ ಹೆಗ್ಡೆ, ರವೀಂದ್ರನಾಥ ಎಂ.ಭಂಡಾರಿ, ಧನಂಜಯ ಪಾಲೆತ್ತಾಡಿ, ಲೊಕೇಶ್ ಪಾಲೆತ್ತಾಡಿ, ಗಿರೀಶ್ ಬೆಟ್ಟಂಪಾಡಿ, ಸುಧಾಕರ ಎರ್ಮಾಳ್, ಶೇಖರ್ ಅಜೆಕಾರ್ ಸೇರಿದಂತೆ ಮಹಾನಗರದಲ್ಲಿನ ವಿವಿಧ ಸಂಘಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ತುಳು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು ಪಾಲೆತ್ತಡಿ ಅವರನ್ನು ಅಭಿನಂದಿಸಿದರು.

ಅಭಿನಂದನ ಸಮಿತಿ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಶಿಬರೂರು ಪ್ರಾರ್ಥನೆ ಹಾಡಿದರು. ಐಕಳ ಹರೀಶ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಹೆಸರಾಂತ ಚಿತ್ರಕಲಾ ಕಲಾವಿದ ಜಯ್ ಸಿ.ಸಾಲ್ಯಾನ್ ರೇಖಾಚಿತ್ರವಾಗಿ ರಚಿಸಿದ ಗಣ್ಯರ ಭಾವಚಿತ್ರವನ್ನು ಹಸ್ತಾಂತರಿಸಿ ಗೌರವಿಸಿದರು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳ ಕಲಾವಿದರು ನೃತ್ಯಾವಳಿಗಳನ್ನು ಪ್ರದರ್ಶಿಸಿದವು. ಬಳಿಕ ನೃತ್ಯ ಸ್ಪರ್ಧೆ ಜರುಗಿಸಲ್ಪಟ್ಟಿದ್ದು ಆಶಾ ನಂಬಿಯಾರ್, ವಿದ್ಯಾ ಐಯ್ಯಾರ್ ಮತ್ತು ಪವಿತ್ರ ಭಟ್ ತೀರ್ಪುಗಾರರಾಗಿ ಸಹಕರಿಸಿದರು. ಗಣೇಶ್ ಎರ್ಮಾಳ್, ಪದ್ಮನಾಭ ಸಸಿಹಿತ್ಲು ತಂಡವು ಗಾನವೈಭವ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here