Sunday 11th, May 2025
canara news

ಮುಂಬಯಿಯಲ್ಲಿ `ದಬಕ್ ದಬಾ ಐಸಾ' ಬಿಡುಗಡೆ

Published On : 16 Mar 2017   |  Reported By : Rons Bantwal


ಮುಂಬಯಿ, ಮಾ.16: ಜಯಕಿರಣ ಫಿಲಂಸ್ ಲಾಂಛನದಲ್ಲಿ ಸಿದ್ಧಗೊಂಡ ಪ್ರಕಾಶ್ ಪಾಂಡೇಶ್ವರ್ ನಿರ್ಮಾಣ ನಿರ್ದೇಶನದ `ದಬಕ್ ದಬಾ ಐಸಾ' ಸಿನಿಮಾವು ಮಾರ್ಚ್ 17-23ರ ವರೆಗೆ ಮುಂಬಯಿ ಮತ್ತು ಪೂನಾ ನಗರದಲ್ಲಿ ಪ್ರದರ್ಶನಗೊಳ್ಳಲಿದೆ.

ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸುಂದರ ರೈ ಮಂದಾರ, ಲಕ್ಷ್ಮಣ ಕುಮಾರ್ ಮಲ್ಲೂರು, ಸರೋಜಿನಿ ಶೆಟ್ಟಿ, ಶೀತಲ್ ನಾಯಕ್ ರವಿ ಸುರತ್ಕಲ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉತ್ಪಲ್ ನಯನಾರ್ ಛಾಯಗ್ರಾಹಣ ನೀಡಿದ್ದು, ರಾಜೇಶ್ ಮಂಗಳೂರು ಸಂಗೀತ ನೀಡಿದ್ದಾರೆ. ಶಶಿ ರಾಜ್ ಕಾವೂರು ಈ ಸಿನಿಮಾಕ್ಕೆ ಸಂಭಾಷಣೆ ರಚಿಸಿದ್ದಾರೆ. ಕದ್ರಿ ನವನೀತ ಶೆಟ್ಟಿ, ವೀರೇಂದ್ರ ಶೆಟ್ಟಿ, ದೇವದಾಸ್ ಕಾಪಿಕಾಡ್, ಶಶಿರಾಜ್ ಕಾವೂರು ಅವರ ಸಾಹಿತ್ಯ ಇದೆ. ನವೀನ್ ಡಿ. ಪಡೀಲ್ ಸಿನಿಮಾದಲ್ಲಿ ಪ್ರಬುದ್ಧ ನಟನೆಯ ಮೂಲಕ ಜನರನ್ನು ರಂಜಿಸುವುದರ ಜೊತೆಗೆ ಅಳಿಸಿದ್ದಾರೆ. ಅವರ ಪಾತ್ರದ ಬಗ್ಗೆ ವ್ಯಾಪಕ ಪ್ರ್ರಶಂಸೆಯ ಮಾತುಗಳು ಬಂದಿವೆ ಎಂದು ಪ್ರಕಾಶ್ ಪಾಂಡೇಶ್ವರ್ ತಿಳಿಸಿದ್ದಾರೆ. ದಬಕ್ ದಬಾ ಐಸಾ ಸಿನಿಮಾ ಮುಂಬೈಯ ಮುಲುಂಡ್, ಪನ್ವೆಲ್ ಮತ್ತು ಪುಣೆಯ ನಿತೀಶ್ ಹಬ್‍ನಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ.

ಪಡೀಲ್ ಪಾತ್ರ ಪರಕಾಯ ಪ್ರವೇಶ
ಚಿತ್ರದ ಕ್ಲೈಮಾಕ್ಸ್ ಸನ್ನಿವೇಶದಲ್ಲಿ ಜೈಲಿನಲ್ಲಿ ನಡೆಯುವ ಸಂಭಾಷಣೆಯಲ್ಲಿ ಪಡೀಲ್ ಅವರದು ಅದ್ಬುತ ನಟನೆ. ಒಂದೊಂದು ಡೈಲಾಗ್ ಹೇಳುವಲ್ಲೂ, ಪೆಟ್ಟು ತಿಂದು ನಡೆಯಲಾಗದ ಸ್ಥಿತಿಯಲ್ಲಿ ಇರುವಂತೆ ಅವರು ಅಭಿನಯಿಸಿದ ರೀತಿಯಲ್ಲೂ ಪಡೀಲ್‍ಗೆ ಪಡೀಲೇ ಸಾಟಿ. ಮಾತ ಆಯಿನಿ ಈ ಕಾಕಜಿರ್ದ್... ನಿನ್ನ ಕೈ ಪತ್ತ್‍ದ್ ನಿನ್ನೊಟ್ಟಿಗೆ ಬದ್‍ಕೊಡ್ ಪಂದ್ ಎನಿದಿತ್ತೆ... ಈ ಡೈಲಾಗ್ ಹೇಳುವಲ್ಲೂ, ಬೊಕ ನಿಕ್ಕ್ ಎಂಚ ಗೊತ್ತಾಪಿನಿ ಪಾಪ... ಎಂಬ ಡೈಲಾಗ್ ಹೇಳುವಲ್ಲೂ ಅವರೆಷ್ಟು ತನ್ಮಯತೆಯಿಂದ ನಟಿಸಿದ್ದಾರೆ ಎಂಬುದು ತಿಳಿಯಬಹುದು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here