Sunday 11th, May 2025
canara news

ಮುಂಬಯಿ ವಿವಿ ಕನ್ನಡ ವಿಭಾಗ ಆಯೋಜಿಸಿದ್ದ ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಂವಾದ

Published On : 21 Mar 2017   |  Reported By : Rons Bantwal


ಕ್ರಿಯಾತ್ಮಕ ಪತ್ರಕರ್ತನಿಂದ ಸಕರಾತ್ಮಕ ಸುದ್ದಿ ಸಾಧ್ಯ: ಶ್ರೀಧರ್ ಉಚ್ಚಿಲ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.20: ಪತ್ರಕರ್ತನಲ್ಲಿ ಸಾಹಿತ್ಯದ ಅರಿವುವಿದ್ದರೆ ವರದಿಗಳು ಓದುಗರನ್ನು ಆಕರ್ಷಿಸುವುದು. ಆಕರ್ಷಿಕ ಮತ್ತು ಪಾರದರ್ಶಿಕತ್ವದ ವರದಿಗಳೇ ಪತ್ರಕರ್ತನಿಗೆ ಪ್ರÀತಿಷ್ಠೆ ತರುವುದು. ಪತ್ರಕರ್ತರು ವಿಷಯವನ್ನು ಅಪ್ಪಿ ಒಪ್ಪಿಕೊಂಡು ಮುನ್ನಡೆದಾಗ ವರದಿ ಫಲಿಸುವುದು. ಕ್ರಿಯಾತ್ಮಕ ಪತ್ರಕರ್ತನಿಂದ ಸಕರಾತ್ಮಕ ಸುದ್ದಿ ಸಾಧ್ಯವಾಗಿದ್ದು, ಸಾಹಿತ್ಯ ಮತ್ತು ಪತ್ರಿಕೋದ್ಯಮ ಸಂಬಂಧ ಅನ್ಯೋನತೆಯಿಂದ ಕೂಡಿದೆ ಎಂದು ಹಿರಿಯ ಪತ್ರಕರ್ತ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ವಿಶೇಷ ಆಮಂತ್ರಿತ ಸದಸ್ಯ ಶ್ರೀಧರ್ ಉಚ್ಚಿಲ್ ನುಡಿದರು.

ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಇಂದಿಲ್ಲಿ ಸೋಮವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಕಲೀನಾ ಕ್ಯಾಂಪಸ್‍ನ ರಾನಡೆ ಭವನದಲ್ಲಿ ಆಯೋಜಿಸಿದ್ದ `ಪತ್ರಿಕೋದ್ಯಮ ಮತ್ತು ಸಾಹಿತ್ಯ' ವಿಚಾರಿತ ಸಾಹಿತ್ಯ ಸಂವಾದವನ್ನು ಉದ್ದೇಶಿಸಿ ಶ್ರೀಧರ್ ಉಚ್ಚಿಲ್ ಅಭಿಪ್ರಾಯ ಪಟ್ಟರು.

ನಾವು ಸಂದರ್ಶನಗಳನ್ನು ಮಾಡುವಾಗ ಸಾಧಕರ ಸಾಧನೆಯ ಅರಿವು ಕಲೆಯಾಕುವುದು ಅತ್ಯವಶ್ಯವಾಗಿರುತ್ತದೆ. ಅಂತಹ ಸಂದರ್ಶನ ಸಫಲತೆಯಾಗಿ ಇತಿಹಾಸದ ಪುಟಗಳಲ್ಲಿ ಉಳಿಯ ಬಲ್ಲದು. ಇಲ್ಲವೇ ಸಂದರ್ಶನ ಅನಾವಶ್ಯ ಆಗವ್ಬಲ್ಲದು. ಇದನ್ನು ನಾನು ನನ್ನ ಸಂದರ್ಶಕರ ಅಂಕಣ ಪುಸ್ತಕ ಕಲಾಕ್ಷೇತ್ರದಲ್ಲಿ ಭಿತ್ತರಿಸಿದ್ದೇನೆ. ಇನ್ನಷ್ಟು ಕಲಾಚಾವಡಿ ಅಂಕಣದಲ್ಲಿ ಪ್ರಕಟಿಸಿದ್ದೇನೆ. ಸಂದರ್ಶಗಳ ಸರಮಾಲೆ ನನ್ನ ಜೀವನಕ್ಕೆ ಕಳೆ ತಂದಿದೆ ಎಂದೂ ಉಚ್ಚಿಲ್ ತಿಳಿಸಿದರು.

ಮೊಗವೀರ ಮಾಸಿಕದ ಮಾಜಿ ಸಂಪಾದಕ ಪತ್ರಕರ್ತರ ಸಂಘದ ಜತೆ ಕೋಶಾಧಿಕಾರಿ ಅಶೋಕ್ ಎಸ್.ಸುವರ್ಣ ಮಾತನಾಡಿ ನಕರಾತ್ಮಕ ಅಲೋಚನೆಯಿಂದ ಪತ್ರಕರ್ತರು ದೂರವಿದ್ದಾಗ ಸಮಾಜವನ್ನು ತಿದ್ದಬಹುದು. ಘಟನೆಯ ನಂತರ ಪ್ರಕಟಣೆ ಆಗುವುದರಿಂದ ತನಿಖಾತ್ಮಕ ವರದಿಗೆ ಪತ್ರಕರ್ತರು ಬದ್ಧರಾಗಬೇಕು. ಸೂಕ್ತ ದಾಖಲೆಗಳನ್ನು ಸಂಗ್ರಹಿಸುವ ವರದಿಗಳು ಯಾವೊತ್ತೂ ಫಲಿಸುವುದು. ಪತ್ರಕರ್ತರು ನಿಷ್ಠೆವುಳ್ಳವರಾದರೆ ಪರಿಪಕ್ವ ಪತ್ರಕರ್ತರೆಣಿಸ ಬಹುದು. ವರದಿಗಾರರಲಿ ಬಹುವಿಧ ವೈವಿಧ್ಯತೆಗಳಿದ್ದು, ರಾಜಕೀಯ, ಅಪರಾಧ, ಕಾನೂನು, ವೈದ್ಯಕೀಯ, ಸಾರಿಗೆ, ಕಲೆ, ಕ್ರೀಡೆ, ಸಂಸ್ಕೃತಿ, ವಾಣಿಜ್ಯ, ವಿಜ್ಞಾನ, ಶಿಕ್ಷಣ, ಆಧ್ಯಾತ್ಮಿಕ (ಧಾರ್ಮಿಕ) ಮನೋರಂಜನೆ (ಸಿನೇಮಾ, ಯಕ್ಷಗಾನ, ರಂಗಭೂಮಿ) ಇತ್ಯಾದಿಗಳು ಪ್ರಮುಖವು. ಇವುಗಳ ವ್ಯಾಪ್ತಿಗನುಗುಣವಾಗಿ ಪತ್ರಕರ್ತರು ಫಳಗಿದರೆ ಫಲವತ್ತಾದ ವರದಿ ಸಾಧ್ಯವಾಗುತ್ತದೆ. ಸದ್ಯ ಸಂಕ್ಷೀಪ್ತ ವರದಿಗಳೇ ಸೂಕ್ತ ವರದಿಗಳಾಗಿದ್ದು, ಇದಕ್ಕೆ ಭಾಷೆ ಮತ್ತು ಭಾಷಾ ಗೂಢಾರರ್ಥದ ತಿಳುವಳಿಕೆ ಅವಶ್ಯವಿದೆ. ವರದಿಗಾರರಲ್ಲಿನ ಅರ್ಥದ ಕೊರತೆ ಅನಾರ್ಥವಾದರೆ ಸುದ್ದಿಗಳು ಬುದ್ಧಿಹೀನವಾಗಬಲ್ಲದು ಎಂದರು.

ಪತ್ರಕರ್ತರ ಸಂಘದ ಸಕ್ರೀಯ ಸದಸ್ಯ, ಅಂಕಣಕಾರ ಹಾಗೂ ದಿ| ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ವಿಜೇತ ಪತ್ರಕರ್ತ ನವೀನ್ ಕೆ.ಇನ್ನ ಮಾತನಾಡಿ ನನ್ನ ಬರವಣಿಗೆಯ ಮೊದಲ ಲೇಖನವೇ ನನ್ನನ್ನು ಪತ್ರರ್ತನಾಗುವ ಉತ್ಸುಕತೆ ತುಂಬಿತು. ಪತ್ರಿಕೋದ್ಯಮದಲ್ಲಿ ಅಂಕಣಕಾರರು ಸ್ವತಂತ್ರವಾಗಿರುತ್ತಾರೆ. ಈ ವಿಭಾಗವನ್ನು ಎಂದೂ ಟೀಕೆಟಿಪ್ಪಣಿ, ನಿಂದಿಸಲು ಬಳಸುವುದು ಸಲ್ಲದು. ಬದಲಾಗಿ ಅಂಕಣಗಳು ಜನಜಾಗೃತಿ ಮೂಡಿಸಿ ಸಮಾಜ ತಿದ್ದುವಂತಾಗಬೇಕು. ಕ್ರೀಡಾಕ್ಷೇತ್ರದ ಅಂಕಣ ತುಂಬಾ ಕಷ್ಟದ ಅಂಕಣವಾಗಿದೆ. ಇಲ್ಲಿ ರನ್ನ್‍ಪಟ್ಟಿಯ ಭಿನ್ನಾಂಕದ ಸಂಖ್ಯೆಗಳಿಂದ ವರದಿಯೇ ಶೂನ್ಯವಾಗಬಲ್ಲದು. ಇಲ್ಲಿನ ಅಜಾಗರುತೆ ಎಲ್ಲವೂ ಕೆಡಿಸುವುದು. ಆದುದರಿಂದ ಅಂಕಣಕಾರರಲ್ಲಿ ಪೂರ್ವಸಿದ್ಧತೆಯ ಅವಶ್ಯವಾಗಿದೆ. ಅಂಕಣಕಾರರು ಮಾನಸಿಕವಾಗಿ ಬದ್ಧರಾಗಿರಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಶ್ರಮಸಾಧಿಸಿ ಗಳಿಸಿದ ಹೆಸರು ಎಂದಿಗೂ ಶಾಶ್ವತವಾಗಿರುತ್ತದೆ. ಇವತ್ತಿನ ಮೂರೂ ಸಂಪನ್ಮೂಲವ್ಯಕ್ತಿಗಳು ಲೋಕಮುಖಕ್ಕೆ ವರದಿಗಳನ್ನು ಭಿತ್ತರಿಸಿದ ನಿಷ್ಠಾವುಳ್ಳವರು. ಇವರು ಸಕಲ ಓದುಗರಿಗೆ ಲೇಸು ಭರಿಸುವ ಕಾಯಕಗೈದು ಮುಂಬಯಿಯಲ್ಲಿ ಕನ್ನಡ ಬೆಳೆಸಿ ಉಳಿಸಿದ ಹಿರಿಯ ವರದಿಗಾರರು. ಇಂದು ಮುಂಬಯಿಯಲ್ಲಿ ಕನ್ನಡ ಪತ್ರಿಕಾರಂಗ ದೊಡ್ಡ ಓದುಗ ವರ್ಗ ಬೆಳೆಸಿದ್ದು ಇದರ ಕೀರ್ತಿ ಇವರಿಗೂ ಸಲ್ಲುತ್ತದೆ. ಇವರು ಕನ್ನಡ ಪರಂಪರೆಯ ವಾರಿಸುದಾರರೂ ಹೌದು. ಮುಂದಿನ ದಿನಗಳಲ್ಲಿ ಇವರು ಕ್ರೀಯಾಶೀಲರಾದರೆ ಸಮಾಜವೂ ಕ್ರಿಯಾತ್ಮಕವಾಗ ಬಲ್ಲದು. ಸಂವಾದ ಸಾಧ್ಯವಾಗದಿದ್ದರೆ ಗುಮಾನಿ ಹುಟ್ಟಿ ಕೊಳ್ಳುತ್ತದೆ. ಆದುದರಿಂದ ಇಂತಹ ಸಾಹಿತ್ಯ ಸಂವಾದಗಳ ಅಗತ್ಯವಿದೆ. ಅದನ್ನು ಪ್ರಾಮಾಣಿಕವಾಗಿ ಈ ವಿಭಾಗ ಮಾಡುತ್ತಿದೆ ಎಂದರು. ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಸ್ವರ್ಣಪದಕವನ್ನಿತ್ತು ಕೃತಿಗೌರವದೊಂದಿಗೆ ಗೌರವಿಸಿದರು.


ಕಾರ್ಯಕ್ರಮದಲ್ಲಿ ಜ್ಯೋತಿ ಎನ್.ಶೆಟ್ಟಿ, ಶಿವರಾಜ್ ಎಂ.ಜೆ, ಸುರೇಖಾ ಎಸ್.ದೇವಾಡಿಗ, ಕೆ.ಎ ಮದಾಳೆ, ಹೆಚ್.ಹÀರಸಪ್ಪ, ಗಣಪತಿ ಕೆ.ಮೊಗವೀರ, ಕುಮುದಾ ಆಳ್ವ, ಅನಿತಾ ಎಸ್.ಶೆಟ್ಟಿ, ಗೀತಾ ಆರ್.ಎಸ್, ಶೀಲಾ ಎಲ್.ಆರ್, ಸುರೇಖಾ ಹರಿಪ್ರಸಾದ್ ಶೆಟ್ಟಿ, ನಳಿನಾ ಪ್ರಸಾದ್ ಎಸ್, ಸುಕನ್ಯಾ ಪಾಟೀಲ, ಎಚ್.ಎಸ್ ಅಪರ್ಣಾ, ಹೇಮಾ ಎಸ್.ಅಮೀನ್, ಮಧುಸೂಧನ್ ರಾವ್, ಜಯ್ ಸಾಲಿಯಾನ್, ಅನಿತಾ ಪೂಜಾರಿ ತಾಕೋಡೆ, ಅಮಿೃತಾ ಎ.ಶೆಟ್ಟಿ, ದಿನಕರ ಎನ್.ಚಂದನ್ ಮತ್ತಿತರನೇಕರು ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಾಹಿಸಿದರು. ಜ್ಯೋತಿ ಕೆ.ಶೆಟ್ಟಿ ಪ್ರಾರ್ಥನೆಗೈದರು. ಡಾ| ರಮಾ ಉಡುಪ, ಅಭಾರ ಮನ್ನಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here