Sunday 11th, May 2025
canara news

ಕುಂಜೂರು ಮೋಹನ್ ಶೆಟ್ಟಿ ಲೋಕಧರ್ಮಿಯಾಗಿದ್ದರು: ಕೆ.ಎಲ್ ಕುಂಡಂತಾಯ

Published On : 24 Mar 2017   |  Reported By : Rons Bantwal


ಮುಂಬಯಿ, ಮಾ.24: ಕೃಷಿ ಬದುಕಿನೊಂದಿಗೆ ಮಣ್ಣಿನ ಜೊತೆ ಮಾತನಾಡುತ್ತಿದ್ದ ಪ್ರಗತಿಪರ ಕೃಷಿಕ ಕುಂಜೂರು ಮೋಹನ್ ಶೆಟ್ಟಿ ಅವರು ಸಾಮಾಜಿಕ ಸೇವೆಗಳ ಮೂಲಕ ಲೋಕಧರ್ಮಿಯಾಗಿ ಸರ್ವರಿಗೂ ಆದರ್ಶಪ್ರಾಯರಾಗಿದ್ದರು ಎಂದು ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ಹೇಳಿದರು.

ಕುಂಡಂತಾಯ ಅವರು ಶುಕ್ರವಾರ ಸಂಜೆ ಅದಮಾರು ಹಿಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದು, ನಿಧನ ಹೊಂದಿರುವ ಪ್ರಗತಿಪರ ಕೃಷಿಕ ಕೆ.ಮೋಹನ್ ಶೆಟ್ಟಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.

ಅದಮಾರು ಪೂರ್ಣಪ್ರಜ್ಞ ಕಾಲೇಜ್‍ನ ನಿವೃತ್ತ ಪ್ರಾಂಶುಪಾಲ ಬಿ.ಆರ್. ನಾಗರತ್ನ ಸಂತಾಪ ಸೂಚಿಸಿದರು. ಮುತ್ತೂಟ್ ಫೈನಾನ್ಸ್‍ನ ನಿವೃತ್ತ ಪ್ರಬಂಧಕ ವಾಸುದೇವ ಮಂಜಿತ್ತಾಯ, ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಶೆಟ್ಟಿ, ಶಾಲಾಡಳಿತ ಮಂಡಳಿಯ ಅಧ್ಯಕ್ಷ ಎ.ನಾರಾಯಣ ಶೆಟ್ಟಿ, ಹಿರಿಯ ಕೃಷಿಕ ದೊಡ್ಡಣ್ಣ ಶೆಟ್ಟಿ, ಯುವಕ ಸಂಘದ ಗೌರವಾಧ್ಯಕ್ಷ ಸತ್ಯವಾನ್ ಶೆಟ್ಟಿ ಶ್ರದ್ಧಾಂಜಲಿ ಸಲ್ಲಿಸಿದರು.

ಸತೀಶ್ ಕುಂಡಂತಾಯ, ಕುಂಜೂರು ಸಂತೋಷ್ ಶೆಟ್ಟಿ, ರಾಘವೇಂದ್ರ ತೋಣಿತ್ತಾಯ, ಉದಯ ಕುಮಾರ್, ಜಗದೀಶ ಶೆಟ್ಟಿ, ತೆಂಕರಗುತ್ತು ಸಂತೋಷ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ದೇವಿಕಾ, ಪಶುವೈದ್ಯ ವಸಂತ್, ನಾಗರಾಜ್ ಶೆಟ್ಟಿ ಕುಂಜೂರು, ಗೋವರ್ಧನ ವೈ., ಯುವಕ ಮಂಡಳ, ಮಹಿಳಾ ಮಂಡಳಿ, ಶಾಲಾ ಶಿಕ್ಷಕ ವೃಂದ, ವಿದ್ಯಾಥಿರ್ü ವೃಂದ, ಪಿಪಿಸಿ ಕಾಲೇಜು ಸಿಬ್ಬಂದಿವರ್ಗ, ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಎ.ಜಯಶೆಟ್ಟಿ ಸ್ವಾಗತಿಸಿದರು. ಹಳೆವಿದ್ಯಾಥಿರ್ü ಸಂಘದ ಕಾರ್ಯದರ್ಶಿ, ಪ್ರಾಂಶುಪಾಲ ಸುದರ್ಶನ್ ವೈ.ಎಸ್ ನಿರೂಪಿಸಿದರು. ಗಣೇಶ್ ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here