Monday 24th, June 2024
canara news

ಮಾ.29-ಎ.04: ಅದಮಾರು ಮಠದಲ್ಲಿ ರಾಮನವಮಿಯ ಪ್ರಯುಕ್ತ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ರಾಮಾಯಣ ಪ್ರವಚನ

Published On : 25 Mar 2017   |  Reported By : Rons Bantwal


ಮುಂಬಯಿ, ಮಾ.25: ಅಂಧೇರಿ ಪಶ್ಚಿಮದ ಎಸ್.ವಿ.ರೋಡ್‍ನ ಇರ್ಲಾ ಅಲ್ಲಿನ ಶ್ರೀ ಆದಮಾರು ಮಠದಲ್ಲಿ ವಾರ್ಷಿಕ ರಾಮ ನವಮಿ-2017ನ್ನು ವಿಜೃಂಭನೆಯಿಂದ ಆಚರಿಸಲಾಗುತ್ತಿದ್ದು, ಶ್ರೀ ರಾಮನವಮಿ ಉತ್ಸವದ 21ನೇ ವಾರ್ಷಿಕ ಸಮಾರಂಭ ನಿಮಿತ್ತ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿ ಅವರು ರಾಮಾಯಣ ಪ್ರವಚನ ನೀಡಲಿದ್ದಾರೆ.

ವಾರ್ಷಿಕ ರಾಮನವಮಿ ಪೂರ್ವ ಸಿದ್ಧತೆಯಾಗಿ ಇದೇ ಮಾ.29ನೇ ಬುಧವಾರದಿಂದ ಎ.04ರ ಮಂಗಳವಾರ ತನಕ ರಾಮನವಮಿ ತನಕ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 7.00 ಗಂಟೆಯ ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾ.29ನೇ ಬುಧವಾರ ಸಂಜೆ ಗೋಕುಲ ಕಲಾ ವೃಂದದವರಿಂದ ನೃತ್ಯ ಭಜನೆ, ಮಾ.30ನೇ ಗುರುವಾರ ಸಂಜೆ ವಿನಿತಾ ಆಚಾರ್ಯ ಆವರಿಂದ ಭಕ್ತಿ ಗೀತೆ ಮತ್ತು ನಂದಿತಾ ಆಚಾರ್ಯ ಅವರಿಂದ ಸಿತಾರ ವಾದನ, ಮಾ.31ನೇ ಶುಕ್ರವಾರ ಸಂಜೆ ಮೃದುಲಾ ಹಬ್ಬು ಅವರಿಂದ ಸಿತಾರ ವಾದನ, ಎ.01ನೇ ಶನಿವಾರ ಸಂಜೆ ವೀನಾ ಶಾಸ್ತ್ರೀ ಅವರಿಂದ ಕರ್ನಾಟಕ ಸಾಹಿತ್ಯ ಸಂಗೀತ, ಎ.02ನೇ ರವಿವಾರ ಸಂಜೆ ಪ್ರಿಯಾಂಜಲಿ ಅವರಿಂದ ಭರತನಾಟ್ಯ, ಎ.03ನೇ ಸೋಮವಾರ ಸಂಜೆ ಗುರು ರಾಜ ಭಜನಾ ಮಂಡಳಿ ಅವರಿಂದ ರೂಪಕ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.

ಎ.4ನೇ ಮಂಗಳವಾರ ರಾಮ ನವಮಿ ದಿನದಂದು ಬೆಳಿಗ್ಗೆ 7.00 ಗಂಟೆಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ 11.30 ಗಂಟೆಯಿಂದ ವಾಗ್‍ದೇವಿ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ಅಪರಾಹ್ನ12.30 ಗಂಟೆಯಿಂದ ವಾರಿಜಾಕ್ಷಿ ಭಟ್ ಅವರಿಂದ ಶಾಸ್ತ್ರೀಯ ಸಂಗೀತ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ನಿರಂಜನ ಭಟ್ ಅವರಿಂದ ಭರತನಾಟ್ಯ, 2.30 ಗಂಟೆಯಿಂದ ಶ್ರೀನಿವಾಸ ಭಟ್ ಅವರಿಂದ ಹರಿಕಥೆ, 3.30 ಗಂಟೆಯಿಂದ ಕು| ಕೃತಿ ದಿನೇಶ್ ಚಡಗ ಅವರಿಂದ ಭರತನಾಟ್ಯ, ಸಂಜೆ 4.00 ಗಂಟೆಯಿಂದ ವಿಠಲ ಭಜನಾ ಮಂಡಳಿಯಿಂದ ಹರಿ ಭಜನೆ, ಸಂಜೆ 5.00 ಗಂಟೆಯಿಂದ ಡಾ| ವಿನೋದ್ ಕುಲಕರ್ಣಿ ಅವರಿಂದ ದಾಸವಾಣಿ, ಸಂಜೆ 6.00 ಗಂಟೆಯಿಂದ ಪಲ್ಲಕ್ಕಿ ಉತ್ಸವ, 7.00 ಗಂಟೆಯಿಂದ ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ಅವರಿಂದ ಉಪನ್ಯಾಸÀ, ರಾತ್ರಿ 8.00 ಗಂಟೆಗೆ ಪೂಜೆ ಮತ್ತು ಅನ್ನ ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿದೆ.

ಆ ಪ್ರಯುಕ್ತ ಮಹಾನಗರದಲ್ಲಿನ ಸರ್ವ ಭಕ್ತರೂ ಎಲ್ಲಾ ಪ್ರವಚನ, ಪೂಜಾಧಿಗಳಲ್ಲಿ ಉಪಸ್ಥಿತರಿದ್ದು ಮಹಾ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಅದಮಾರು ಮಠ ಮುಂಬಯಿ ಶಾಖೆಯ ದಿವಾಣ ಲಕ್ಷಿ ್ಮೀನಾರಾಯಣ ಮುಚ್ಚಿಂತ್ತಾಯ ಹಾಗೂ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ತಿಳಿಸಿದ್ದಾರೆ.
More News

ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Comment Here