Sunday 11th, May 2025
canara news

ಕಥೊಲಿಕ್ ಸಭಾ ಪದಾಧಿಕಾರಿಗಳ ಸಮ್ಮೇಳನ

Published On : 25 Mar 2017   |  Reported By : Ronida Mumbai


ಮಂಗಳೂರು: 2017-18ನೇ ಸಾಲಿನ ಪದಾಧಿಕಾರಿಗಳ ಸಮ್ಮೇಳನ ದಿನಾಂಕ 25/03/2017 ರಂದು ಸಂಜೆ 5.00 ಗಂಟೆಗೆ ಬಜ್ಜೋಡಿ ಶಾಂತಿ ಕಿರಣ್ ಸಭಾ ಭವನದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಸ್ಥಾಪಕಾಧ್ಯಕ್ಷರಾದ ಸನ್ಮಾನ್ಯ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಿದರು. 1980 ರ ದಶಕದಲ್ಲಿ ನಮ್ಮ ಸಮುದಾಯದ ಮೇಲೆ ಬಂದ ಕಾರ್ಮೋಡಗಳನ್ನು, ಕಷ್ಟ ಸಂಕಷ್ಟಗಳನ್ನು ಸಂಘಟಿತರಾಗಿ ಎದುರಿಸಲು ಹೋರಾಡಲು ಸ್ಥಾಪಿಸಿದ ಹುಟ್ಟು ಹಾಕಿದ ಸಂಘಟನೆಯೇ ಕಥೊಲಿಕ್ ಸಭಾ. "ನನ್ನ ಅತೀ ಕಿರಿಯ ಸಹೋದರ/ಸಹೋದರಿಗೆ ಮಾಡಿದ ಸಹಾಯ ಅದು ನನಗೇ ಮಾಡಿದ ಹಾಗೆ" ಎಂಬ ಪ್ರಭು ಯೇಸು ಕ್ರಿಸ್ತರ ಮಾತಿನಂತೆ, ನಾವೆಲ್ಲ ಕಷ್ಟದಲ್ಲಿರುವ ನಮ್ಮ ಸಹೋದರ/ಸಹೋದರಿಯರಿಗೆ ಸ್ಪಂದಿಸಿ ಕಣ್ಣೀರು ಒರೆಸುವ ಕೆಲಸ ಪ್ರಸ್ತುತ ಈ ಸಂಘಟನೆ ಮುಖಾಂತರ ಕಾರ್ಯಗತವಾಗುವಂತಾಗಲಿ, ಉತ್ತಮ ನಾಯಕರು ಹಾಗೂ ನಾಯಕತ್ವ ಬೆಳೆಯಲಿ, ಎಲ್ಲರಿಗೂ ನೆಮ್ಮದಿಯಿಂದ ಕೂಡಿ ಬಾಳುವ ಹಾಗೂ ದೇಶದ ಸಂವಿಧಾನವನ್ನು ಸಂರಕ್ಷಿಸುವ ಮುಂದಾಳತ್ವ ನಮ್ಮಲ್ಲಿ ಬೆಳೆದು ಬರಲಿ ಎಂದು ತಮ್ಮ ಸಂದೇಶದಲ್ಲಿ ಕರೆಕೊಟ್ಟರು.

ಮುಖ್ಯ ಅತಿಥಿಗಳಾದ ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಮಾಜಿ ಅಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ವಿನ್ಸೆಂಟ್ ಮೊಂತೆರೊರವರು ಪ್ರಸ್ತುತ ನಮ್ಮ ಸಮುದಾಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸ್ಪಂದಿಸುವ, ಹೋರಾಡುವ ಯುವ ಮಂದಾಳುಗಳನ್ನು ಯುವ ಶಕ್ತಿಯನ್ನು ರೂಪಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು ಹಾಗೂ ಈ ಸಂಘಟನೆಗೆ ಎಲ್ಲಾ ಒಳಿತನ್ನು ಬಯಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕಥೊಲಿಕ್ ಸಭಾ ಪ್ರದೇಶದ ಅಧ್ಯಕ್ಷ ಅನಿಲ್ ಲೋಬೊ, ಶ್ರೀಮತಿ ಬ್ಲೊಸಮ್ ಫೆರ್ನಾಂಡಿಸ್, ಪ್ರಧಾನ ಕಾರ್ಯದರ್ಶಿ ಶ್ರೀ ವಾಲ್ಟರ್ ಮೊನಿಸ್, ಕಾರ್ಯಕ್ರಮದ ಸಂಚಾಲಕರಾದ ಶ್ರೀ ಜೆರಾಲ್ಡ್ ಡಿಕೋಸ್ತಾ , ಸಹ ಸಂಚಾಲಕರಾದ್ ಶ್ರೀ ಗೊಡ್ವಿನ್ ಪಿಂಟೊ ಬಿಜೈ, ನಿಯೋಜಿತ ಅಧ್ಯಕ್ಷರಾದ ಮೆಲ್ವಿನ್ ಡಿಕೋಸ್ತಾ, ಉಪಾಧ್ಯಕ್ಷರಾದ ಶ್ರೀ ಡೇವಿಡ್ ಡಿಸೋಜಾ ಉಪಸ್ಥಿತರಿದ್ದರು. ಶ್ರೀ ಜೆರಾಲ್ಡ್ ಡಿಕೋಸ್ತಾ ಎಲ್ಲರನ್ನು ಅತ್ಮೀಯವಾಗಿ ಸ್ವಾಗತಿಸಿ, ಕಾರ್ಯದರ್ಶಿ ವಾಲ್ಟರ್ ಮೊನಿಸ್ ವಂದನಾರ್ಪಣೆಗೈದರು ಹಾಗೂ ಶ್ರೀ ಅನಿಲ್ ಪತ್ರಾವೊ ಕಾರ್ಯಕ್ರಮ ನಿರ್ವಹಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here