Monday 5th, December 2022
canara news

ಕರ್ನಾಟಕ ಕಲ್ಚರಲ್ ಫೌಂಡೇಶನ್ ಮದೀನಾ ಮುನವ್ವರ ಸೆಕ್ಟರ್ ಮಹಾಸಭೆ

Published On : 26 Mar 2017   |  Reported By : Ronida Mumbai


ಮುಂಬಯಿ, ಮಾ.26: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಮದೀನಾ ಮುನವ್ವರ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇಬ್ರಾಹಿಂ ಮದನಿ ಉಸ್ತಾದ್,ಕಡಬ ಇವರ ದುವಾದೊಂದಿಗೆ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಸಭಾಧ್ಯಕ್ಷತೆಯಲ್ಲಿ ಮದೀನಾದ ಹವಾಲಿಯ ಹೊಟೆಲ್ ಝಹ್ರತ್ತೈಬದಲ್ಲಿ ಶುಕ್ರವಾರ ನಡೆಯಿತು. ಫಾರೂಖ್ ಮುಸ್ಲಿಯಾರ್ ಕೊಡಗು ಖಿರಾ'ಅತ್ ಆಲಾಪಣೆಗೈದ ಸಭೆಯನ್ನು ಉಸ್ಮಾನ್ ಮಾಸ್ಟರ್ ಉದ್ದಬೆಟ್ಟು ಅವರು ಉದ್ಘಾಟಿಸಿದರು.

ಚುನಾವಣಾ ಅಧಿಕಾರಿಯಾಗಿದ್ದ ಕೆ.ಸಿ.ಎಫ್ ಮದೀನಾ ಮುನವ್ವರ ಪ್ರಾದೇಶಿಕ ಅಧ್ಯಕ್ಷ ಫಾರೂಖ್ ನಯೀಮಿ ಸರಳಿಕಟ್ಟೆ ಅವರ ನೇತ್ರತ್ವದಲ್ಲಿ, ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನಲ್ವತ್ತು ಮಂದಿ ಕಾರ್ಯಾಕಾರಿ ಸಮಿತಿ ಸದಸ್ಯರನ್ನೊಳಗೊಂಡ ನೂತನ ಸಮಿತಿಗೆ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ನೂಜಿ, ಪ್ರಧಾನ ಕಾರ್ಯದರ್ಶಿ ಆಗಿ ಅಶ್ರಫ್ ನ್ಯಾಶನಲ್ , ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಹಾಜಿ ಕಿನ್ಯ, ಜೊತೆ ಕಾರ್ಯದರ್ಶಿಹುಸೈನಾರ್ ಮಾಪಲ್ ಆಯ್ಕೆಯಾದರು.
ಇತರ ವಿಭಾಗ

ಶಿಕ್ಷಣ ವಿಭಾಗ: ಅಧ್ಯಕ್ಷ: ಫಾರೂಖ್ ಮುಸ್ಲಿಯಾರ್ ಕೊಡಗು, ಕಾರ್ಯದರ್ಶಿ: ಉಸ್ಮಾನ್ ಮಾಸ್ಟರ್ ಉದ್ದಬೆಟ್ಟು, ವಿಭಾಗದ ಸದಸ್ಯರು: ಫಾರೂಖ್ ನಯೀಮಿ ಸರಳಿಕಟ್ಟೆ, ಅಬೂಬಕರ್ ಮುಸ್ಲಿಯಾರ್ ಉದ್ದಬೆಟ್ಟು, ಸಾರ್ವಜನಿಕ ಸಂಪರ್ಕ ವಿಭಾಗ: ಅಧ್ಯಕ್ಷರು: ಅಬ್ದುಸ್ಸಮದ್ ಕೊಡಗು, ಕಾರ್ಯದರ್ಶಿ: ಇಕ್ಬಾಲ್ ಕುಪ್ಪೆಪದವು, ವಿಭಾಗದ ಸದಸ್ಯರು: ತಾಜುದ್ದೀನ್ ಸುಳ್ಯ, ರಝಾಕ್ ಉಳ್ಳಾಲ್, ಅಯ್ಯೂಬ್ ಅಳದಂಗಡಿ, ಸಂಘಟನಾ ವಿಭಾಗ: ಅಧ್ಯಕ್ಷರು: ಆಸಿಫ್ ಬದ್ಯಾರ್, ಕಾರ್ಯದರ್ಶಿ: ಝಕರಿಯ ಕೊಡಗು, ವಿಭಾಗದ ಸದಸ್ಯರು: ನಿಯಾಝ್ ಕಾಟಿಪಳ್ಳ, ಇಕ್ಬಾಲ್ (ಎಲ್), ಸಿದ್ದೀಕ್ ಕನ್ಯಾನ, ಸಾಂತ್ವನ ವಿಭಾಗ ಅಧ್ಯಕ್ಷರು:ಹಂಝ ಮುಸ್ಲಿಯಾರ್ ಕಣ್ಣೂರು, ಕಾರ್ಯದರ್ಶಿ: ಜಬ್ಬಾರ್ ಕಾವಳಕಟ್ಟೆ, ವಿಭಾಗದ ಸದಸ್ಯರು: ಇಸ್ಮಾಯಿಲ್ ಅಲ್ ಮರೈ, ಇಸ್ಮಾಯಿಲ್ ಉಳ್ಳಾಲ, ಸುಲೈಮಾನ್ ತರ್ಕಳಿಕೆ, ಇಶಾರ ವಿಭಾಗ: ಅದ್ಯಕ್ಷರು: ಉಮರ್ ಗೇರುಕಟ್ಟೆ, ಕಾರ್ಯದರ್ಶಿ: ರಝಾಕ್ ಉಳ್ಳಾಲ್, ವಿಭಾಗದ ಸದಸ್ಯರು: ಅಶ್ರಫ್ ಸಂಗಮ್, ಉಮರ್ ಕೊಡಗು, ಕಛೇರಿ ವಿಭಾಗ ಅದ್ಯಕ್ಷರು ಇಬ್ರಾಹಿಂ ಮದನಿ ಕಡಬ, ಕಾರ್ಯದರ್ಶಿ ನಝೀರ್ ನೆಕ್ಕಿಲ್ ವಿಭಾಗದ ಸದಸ್ಯರಾಗಿ ಅಶ್ರಫ್ ಮಠ, ಶರೀಫ್ ಕಬಕ, ಹುಸೈನ್ ಎಮ್.ಎ, ಇತರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಮೀದ್ ಬೊಳ್ವಾಯಿ, ಶಾಕಿರ್ ಅಳಕೆಮಜಲು, ಫಿರ್ದೌಸ್ ಕೊಡಗು, ಅರಾಫತ್ ಉಳ್ಳಾಲ, ಫಕ್ರುದ್ದೀನ್ ರಾಝಿ, ನೌಶಾದ್ ಪಡಿಕ್ಕಲ್, ಮುಸ್ತಫಾ ತುಂಬಿದಡ್ಕ ಹಾಗೂ ಕೆ.ಸಿ.ಫ್ ಮದೀನಾ ಸೆಕ್ಟರ್ ನ ರಾಷ್ಟ್ರೀಯ ನಾಯಕರಾದ ಅಶ್ರಫ್ ಕಿನ್ಯ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಇಶಾರ ವಿಭಾಗದ ಅದ್ಯಕ್ಷರಾದ ಉಮರ್ ಗೇರುಕಟ್ಟೆ ಸ್ವಾಗತಿಸಿ, ನಿರೂಪಿಸಿದರು.

 
More News

ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ

Comment Here