Sunday 11th, May 2025
canara news

ದಾದರ್‍ನಲ್ಲಿ ಮಲ್‍ಹರ್ 3ನೇ ಸ್ವಲಾತ್ ವಾರ್ಷಿಕ ಬುರ್ದಾ ಮಜ್ಲಿಸ್ ಸಂಪನ್ನ

Published On : 26 Mar 2017   |  Reported By : Ronida Mumbai


ಪ್ರವಾದಿ ಸಂದೇಶ ಉಳಿವು ಪ್ರತಿ ಮುಸಲ್ಮಾನ ಕರ್ತವ್ಯ-ಜಲಾಲುದ್ದೀನ್ ಬುಖಾರಿ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಮಾ.26: ಕಾಸರಗೋಡುವಿನ ಮಂಜೇಶ್ಚರದಲ್ಲಿ ಕಾರ್ಯಚರಿಸುತ್ತಿರುವ ಮಲ್‍ಹರ್ ಇಸ್ಲಾಮಿ ತಹಿಲಿಲ್ಲಿಮಿ ವಿದ್ಯಾ ಸಂಸ್ಥೆ ಯ ಮುಂಬಯಿ ಘಟಕವು ಮಾಸಿಕ ನಡೆಸಿ ಬರುವ ಸ್ವಲಾತ್ ಮಜ್ಲಿಸಿನ 3ನೇ ವಾರ್ಷಿಕ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಮುಂಬಯಿ ದಾದರ್ ಪೂರ್ವ ಇಲ್ಲಿನ ಸುನ್ನಿ ಹನಫೀ ಮಸ್ಜಿದ್‍ನಲ್ಲಿ ಶನಿವಾರ ರಾತ್ರಿ ನಡೆಯಿತು.ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್-ಬುಖಾರಿ ಮತ್ತು ಸಯ್ಯಿದ್ ಅಬ್ದುರಹ್ಮಾನ್ ಶಹೀರ್ ಅಲ್ ಬುಖಾರಿ ಮಳ್ ಹರ್ ಸ್ವಲಾತ್ ಮಜ್ಲಿಸ್‍ನ ನೇತೃತ್ವ ವಹಿಸಿದ್ದರು.

ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಮಾತನಾಡಿ, ಯುವ ಜನಾಂಗ ಆಧುನಿಕ ಯುಗದಲ್ಲಿ ಪ್ರವಾದಿ ಸಂದೇಶವನ್ನು ಮರೆತು ಬದುಕಿದರೆ ಇಸ್ಲಾಂ ಧರ್ಮ ನಾಶವಂದುದರಲ್ಲಿ ಸಂಶಯವಿಲ್ಲ. ಮುಂದಿನ ಜನಾಂಗಕ್ಕೆ ಪ್ರವಾದಿ ಸಂದೇಶ ಉಳಿಯುವಂತೆ ನೋಡಿ ಕೊಳ್ಳುವುದು ಪ್ರತಿ ಮುಸಲ್ಮಾನ ಕರ್ತವ್ಯ ಹೇಳಿದರು.

ದಾದರ್ ಲತ್ತೀಫಿಯ ಮಸ್ಜಿದ್ ಖತೀಬ್ ಅಬ್ದುಲ್ ಕರೀಂ ಅಶ್ರಫಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಫ್ತಿ ಶರೀಫ್ ನಿಝಾಮಿ ರಾಜಾಪುರ ಮುಖ್ಯ ಪ್ರಭಾಷಣ ಮಾಡಿದರು.

ಹಾಫಿಝ್ ಸ್ವಾದಿಕ್ ಅಲಿ ಫಾಳಿಲಿ ಗೂಡಲ್ಲೂರು ನೇತೃತ್ವದಲ್ಲಿ ಮುಹಮ್ಮದ್ ಸಿಯಾನ್ ಉಳ್ಳಾಲ. ನಾಸೀಫ್, ಸಯಿನ್ ಬಾಬು, ಇಬ್ರಾಹಿಂ ಫಾಳಿಲಿ. ಯೂಸುಫ್ ಸಖಾಫಿ ಕೊಟೆ, ಜಾಫರ್ ಮಾತುಲಿ ಮುಂತಾದವರು ಬುರ್ದಾ ಮಜ್ಲಿಸ್ ನಡೆಯಿತು.

ಹಕೀಂ ಅಂಜದಿ ಚೀತಾ ಕ್ಯಾಂಪ್, ಮಲ್‍ಹರ್ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ಹಸನ್ ಕುಂಞ, ಸಿ.ಪಿ ಹಂಝ ಮುಸ್ಲಿಯಾರ್ ಕಡಲುಂಡಿ, ಮಲ್‍ಹರ್ ಮುಂಬಯಿ ಘಟಕಾಧ್ಯಕ್ಷ ಅಬ್ದುಲ್ ಸತ್ತಾರ್, ಕಾರ್ಯದರ್ಶಿ ಮುಹಮ್ಮದ್ ಮುಸ್ತಾಫ, ಕೋಶಾಧಿಕಾರಿ ಮುಹಮ್ಮದ್ ಅಶ್ರಫ್ ದಾದರ್, ಸದಸ್ಯ ರಾದ ಇಲ್ಯಾಸ್ ತೌಡುಗೋಳಿ. ಅಝೀಝ್ ಕಿನ್ಯಾ, ಮುಹಮ್ಮದ್ ಖಾಲಿದ್ ಬಂಬ್ರಾಣ, ಮುಹಮ್ಮದ್ ಅಶ್ರಫ್ ಫೆಂಟನ್, ಸ ಅದಿಯ್ಯಾ ಕಾಲೇಜಿನ ಮುಂಬಯಿ ಘಟಕ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ, ಕೋಡಾವ ಕಾಲೇಜಿನ ಮುಂಬಯಿ ಕಾರ್ಯದರ್ಶಿ ಟಿ.ವಿ.ಕೆ ಅಬ್ದುಲ್ಲಾ, ಮಂಜನಾಡಿ ಅಲ್ ಮದೀನಾ ಸಂಸ್ಥೆ ಯ ಮುಂಬಯಿ ಮ್ಯಾನೇಜರ್ ಮುಹಮ್ಮದ್ ಸಖಾಫಿ ತೋಕೆ, ಕೇರಳ ಮರ್ಕಝ್ ಕಾಲೇಜಿನ ಮುಂಬಯಿ ಘಟಕ ಮ್ಯಾನೇಜರ್ ಅಬ್ದುಲ್ಲಾ ಸಖಾಫಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಟೆಂಗರ್ ಮುಲ್ಲ ಖತೀಬ್ ಇಸ್ಮಾಯಿಲ್ ಅಂಜದಿ ಸ್ವಾಗತಿಸಿದರು. ಮಲ್‍ಹರ್ ಮುಂಬಯಿ ಘಟಕ ಪ್ರಬಂಧಕ ಸಿದ್ದೀಕ್ ಮುಸ್ಲಿಯಾರ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here