Saturday 24th, February 2024
canara news

ಮಾ.31: ಬೆಂಗಳೂರುನ ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಕಾಲೇಜುನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ರವಿ ರಾ.ಅಂಚನ್ ಮುಂಬಯಿ ಆಯ್ಕೆ

Published On : 29 Mar 2017   |  Reported By : Rons Bantwal


ಮುಂಬಯಿ, ಮಾ.29: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರುನ ರೇಸ್‍ಕೋರ್ಸ್ ರಸ್ತೆಯಲ್ಲಿನ ನ್ಯಾಕ್‍ನ `ಬಿ' ಗ್ರೇಡ್ ಮಾನ್ಯತೆ ಪಡೆದ ಸರ್ಕಾರಿ ರಾಂನಾರಾಯಣ್ ಚೆಲ್ಲಾರಾಂ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮಾ.31ನೇ ಶುಕ್ರವಾರ ಬೆಳಿಗ್ಗೆ ಕುವೆಂಪು ಸಭಾಂಗಣದಲ್ಲಿ ಮೌಢ್ಯಾಚರಣೆ ಮತ್ತು ನಿಷೇಧದ ಪ್ರಸ್ತುತತೆ (Superstition: Relevantce of Fighting Them) ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ.

ಕಾಲೇಜ್‍ನ ಹೊನ್ನುಡಿ-ಕನ್ನಡ ಸಂಘ ಹಾಗೂ ಸಾರಸ್ವತ ಸಂದೀಪನ-ಸರ್ವ ಭಾಷಾ ವೇದಿಕೆ ಆಯೋಜಿಸಿರುವ ವಿಚಾರ ಸಂಕಿರಣವನ್ನು ನಿಡುಮಾಮಿಡಿ ಮಹಾಸಂಸ್ಥಾನ ಮಠ, ಮಾನವಧರ್ಮ ಪೀಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸಲಿದ್ದು ಮುಂಬಯಿನ ಹೆಸರಾಂತ ಅಂಕಣಕಾರ, ಸಾಹಿತಿ, ವಾಗ್ಮಿ ರವಿ ರಾ.ಅಂಚನ್ ಮುಖ್ಯ ಅತಿಥಿüಯಾಗಿ ಮತ್ತು ಪ್ರಧಾನ ಅಭ್ಯಾಗತರುಗ ಳಾಗಿ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ| ವಸುಂಧರಾ ಭೂಪತಿ ಮತ್ತು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ ಅಧ್ಯಕ್ಷ ಪೆÇ್ರ| ಎಸ್.ವಿ ನಂದವಾಡಗಿ ಉಪಸ್ಥಿತರಿರುವರು ಎಂದು ಹೊನ್ನುಡಿ ಕನ್ನಡ ಸಂಘದ ಸಂಚಾಲಕ ಡಾ| ಡಿ.ಕೆ ನಟರಾಜ ಹಾಗೂ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾಥಿರ್ü ವೃಂದ ತಿಳಿಸಿದೆ.

ನಂತರ ನಾಲ್ಕು ಗೋಷ್ಠಿಗಳು, ಸಂಜೆ ಸಮಾರೋಪ ಸಮಾರಂಭ ನಡೆಸಲಾಗುತ್ತಿದ್ದು ಮಂಗಳೂರುನ ನಿವೃತ್ತ ಪ್ರಾಧ್ಯಾಪಕರು ಹಾಗೂ ಬರಹಗಾರ ಡಾ| ನಾ. ದಾಮೋದರ ಶೆಟ್ಟಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿರುವರು ಎಂದು ಸ್ವಾರಸ್ವತ ಸಂದೀಪನ-ಸರ್ವ ಭಾಷಾ ವೇದಿಕೆಯ ಸಂಚಾಲಕ ಪೆÇ್ರ| ವಿ.ಆರ್ ತ್ರಿಪುರಾ ತಿಳಿಸಿದ್ದಾರೆ.
More News

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ

Comment Here