Wednesday 29th, March 2023
canara news

ಅದಮಾರು ಮಠದಲ್ಲಿ ವಾರ್ಷಿಕ ರಾಮನವಮಿ ಉತ್ಸವಕ್ಕೆ ಪೂರ್ವ ಸಿದ್ಧತೆ

Published On : 30 Mar 2017   |  Reported By : Rons Bantwal


ಮಾನವ ಬದುಕು ಪ್ರಾಮಾಣಿಕವಾಗಿರಲಿ : ವಿಶ್ವಪ್ರಿಯತೀರ್ಥಶ್ರೀ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.29: ನೆಮ್ಮದಿಯ ಬದುಕಿಗೆ ಸುಲಂಭಿಯ ನಂಬುವ ಕಾಲ ಇದಾಗಿದೆ. ರಾಮನ ಉಪನಿಷತ್ತುಗಳು ಸನ್ಮಾರ್ಗದ ಸಂದೇಶ ಸಾರುತ್ತದೆ. ಆದುದರಿಂದ ಹೇಮಾಲಂಬಿ ಜೀವನ ಮೈಗೂಡಿಸದಿರಿ. ಲೌಕಿಕ ಬದುಕನ್ನು ಬದಿಗೊತ್ತಿ ಹೇಮವನ್ನು ಅವಲಂಬಿಸದೆ ಬದುಕಿ ಜೀವನ ಪಾವನವಾಗುವುದು ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮಿಜಿ ನುಡಿದರು.

ಇಂದಿಲ್ಲಿ ಬುಧವಾರ ಸಂಜೆ ಅಂಧೇರಿ ಪಶ್ಚಿಮದ ಇರ್ಲಾ ಅಲ್ಲಿನ ಶ್ರೀ ಅದಮಾರು ಮಠದಲ್ಲಿ 2017ನೇ ವಾರ್ಷಿಕ ಶ್ರೀ ರಾಮನವಮಿ ಉತ್ಸವದ ಪೂರ್ವ ಸಿದ್ಧತೆ ಹಾಗೂ ವಾರ್ಷಿಕ ರಾಮಾಯಣ ಪ್ರವಚನಕ್ಕೆ ಚಾಲನೆಯನ್ನೀಡಿ ಅದಮಾರುಶ್ರೀಗಳು ಅನುಗ್ರಹಿಸಿದರು.

ಪ್ರಕೃತಿ ಅಂದರೆ ಸರ್ವನಾಮವಾಗಿದೆ. ಇದರ ಅಧ್ಯಾಯನದಿಂದ ಬದುಕು ಸಮೃದ್ಧಿಯಾಗುವುದು. ಅಪರಕ್ರಿಯೆ ಮತ್ತು ಪರಕ್ರಿಯೆಗಳ ಅರಿವು ಮೂಡಿಸುವ ಅಗತ್ಯ ನಮಗಿದ್ದು ಇದರಿಂದ ಪ್ರಕೃತಿ ಬದ್ಧವಾಗಿ ಬಾಳಬಹುದು. ಬಲತ್ಕಾರಕ್ಕೆ ಬಗ್ಗದೆ ಬಾಳುವ ಅಗತ್ಯ ಪ್ರಸಕ್ತ ಜನತೆಗಿದ್ದು ಜೀವನವನ್ನು ಪ್ರಾಮಾಣಿಕವಾಗಿ ಬದುಕಬೇಕು. ತುಂಬಿಸಿ ಉಳಿಸಿಕೊಳ್ಳುವ ಬದುಕನ್ನು ನಾವು ರೂಡಿಸಿಕೊಳ್ಳಬೇಕು. ಆ ಜೀವನವೇ ಸಸ್ಮಾರ್ಗದತ್ತ ಒಯ್ಯುತ್ತದೆ ಎಂದೂ ವಿಶ್ವಪ್ರಿಯತೀರ್ಥ ಸ್ವಾಮಿಜಿ ಭಕ್ತರಿಗೆ ಕರೆಯಿತ್ತರು.

ಪ್ರವಚನ ಕಾರ್ಯಕ್ರಮದ ಮುನ್ನ ಸಯಾನ್‍ನ ಗೋಕುಲ ಭಜನಾ ಮಂಡಳಿ ನೇತೃತ್ವದಲ್ಲಿ ಭಜನೆ ನಡೆಸಿದರು. ಸ್ವಾಮಿಜಿಯವರು ಮಠದಲ್ಲಿನ ಶ್ರೀದೇವರಿಗೆ ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರು ಹಾಗೂ ಭಜನಾ ಮಂಡಳಿ ಸದಸ್ಯರಿಗೆ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.

ಪ್ರವಚನ ಕಾರ್ಯಕ್ರಮದಲ್ಲಿ ವಾಸುದೇವ ಉಡುಪ, ಸಾಬಕ್ಕ ಖೇಡ್ಕರ್, ಎಸ್.ಎನ್ ಉಡುಪ, ಪರೇಲ್ ಶ್ರೀನಿವಾಸ ಭಟ್, ವಾಣಿ ರಾಜೇಶ್ ಭಟ್, ಮಾ| ಶ್ರೀಶ ಆರ್.ಭಟ್, ಪ್ರಹ್ಮಾದ ರಾವ್, ಸುಧೀರ್ ಎಲ್.ಶೆಟ್ಟಿ, ಎ.ಎಸ್ ರಾವ್, ಕೆ. ಹಲಗೇರಿ, ಟಿ.ಜಿ ಹುನ್ನೂರು, ಶಿವರಾಮ ಬಿ.ನಾೈಕ್, ಎ.ಭುಜಂಗರಾವ್, ಶರದ್ ನರಗುಂದಕರ್ ಸೇರಿದಂತೆ ಪುರೋಹಿತರನೇಕರು, ಗಣ್ಯರು ಉಪಸ್ಥಿತರಿದ್ದರು.

ಅದಮಾರು ಮಠ ಮುಂಬಯಿ ಶಾಖಾ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ಸುಖಾಗಮನ ಬಯಸಿ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಾಲ ಕಲಾ ವೃಂದ ಸಯನ್ ತಂಡವು ಕೃತಿ ಚಡಗ ಮತ್ತು ತಾನ್ವಿ ರಾವ್ ನಿರ್ದೇಶನದಲ್ಲಿ ನೃತ್ಯಾವಳಿಗಳನ್ನು ಪ್ರಸ್ತುತ ಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರೇಮಾ ಬಿ.ರಾವ್ ನಿರೂಪಿಸಿದರು. ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ಶ್ರೀಗಳಿಗೆ ಪುಷ್ಪಗೌರವದೊಂದಿಗೆ ಬರಮಾಡಿ ಕೊಂಡು ವಂದಿಸಿದರು.

ರಾಮನವಮಿ ಸಿದ್ಧತೆಯಾಗಿಸಿ ಇಂದಿನಿಂದ ಎ.04ರ ಮಂಗಳವಾರ ರಾಮನವಮಿ ತನಕ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 7.00 ಗಂಟೆ ತನಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಎ.4ನೇ ಮಂಗಳವಾರ ರಾಮನವಮಿ ದಿನ ಬೆಳಿಗ್ಗೆ 7.00 ಗಂಟೆಗೆ ಪಂಚಾಮೃತ ಅಭಿಷೇಕ, ಪೂರ್ವಾಹ್ನ 11.30 ಗಂಟೆಯಿಂದ ವಾಗ್‍ದೇವಿ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6.00 ಗಂಟೆಗೆ ಪಲ್ಲಕ್ಕಿ ಉತ್ಸವ, ನಂತರ ಅದಮಾರುಶ್ರೀ ಅವರಿಂದ ಉಪನ್ಯಾಸÀ, ರಾತ್ರಿ 8.00 ಗಂಟೆಗೆ ಪೂಜೆ ಮತ್ತು ಅನ್ನ ಸಂತರ್ಪಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಆ ಪ್ರಯುಕ್ತ ಮಹಾನಗರದಲ್ಲಿನ ಸಮಸ್ತ ಭಕ್ತರು ಕುಟುಂಬ ಸಹಿತರಾಗಿ ಆಗಮಿಸಿ ಶ್ರೀರಾಮ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ರಾಜೇಶ್ ರಾವ್ ಈ ಮೂಲಕ ತಿಳಿಸಿದ್ದಾರೆ.
More News

ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

Comment Here