Friday 9th, May 2025
canara news

ಕುಂದಾಪುರದಲ್ಲಿ ಜನಔಷಧಿ ಮಳಿಗೆ ಆರಂಭ – ಎಲ್ಲಾ ಔಷಧಿಗಳು ಕಡಿಮೆ ದರದಲ್ಲಿ ಲಭ್ಯ

Published On : 30 Mar 2017


ಕುಂದಾಪುರ, ಮಾ.30: ಕುಂದಾಪುರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ, ಆಸ್ಪತ್ರೆಯ ಗೇಟಿನ ಬಲ ಭಾಗದಲ್ಲಿನಿರ್ಮಿಸಿರುವ ಔಷಧಿ ಅಂಗಡಿಯನ್ನು ಅಸಿಸ್ಟೆಂಟ್ ಕಮಿಶನರ್ ಪುಸ್ಪ ನಾಗ ಇವರು ಜನರ ಅಗತ್ಯವನ್ನು ಮನಗಂಡು ವಿಳಂಬಕ್ಕೆ ದಾರಿ ಕೊಡದೆ ಸರಳವಾಗಿ ಉದ್ಘಾಟನೆ ಮಾಡಿದ್ದಾರೆ. ಮುಂದಿನ ದೀನ ಈ ಪ್ರಧಾನ ಮಂತ್ರಿ ಭಾರತೀಯ ಔಷಧಿ ಕೇಂದ್ರವನ್ನು ವಿದ್ಯುಕ್ತವಾಗಿ ಆರಂಭಿಸಲಾಗುವುದೆಂದು ಅವರು ತಿಳಿಸಿದರು.

ಈ ಸರಳ ಉದ್ಘಾಟನೆಯ ಕಾರ್ಯಕ್ರಮದಲ್ಲಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಉದಯ್ ಶಂಕರ್, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಚೇಯರ್ ಮೇನ್ ಚಿನ್ಮಯಿ ಆಸ್ಪತ್ರೆಯ ಮುಖ್ಯಸ್ತ ಡಾ|ಉಮೇಶ್ ಪುತ್ರನ್, ಕುಂದಾಪುರ ರೇಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ್ ಶೆಟ್ಟಿ, ಖಚಾಂಚಿ ಶಿವರಾಮ್ ಶೆಟ್ಟಿ, ಮೆಡಿಕಲ್ ಎಡ್ವಾಯ್ಸರ್ ಡಾ|ಎಸ್. ಮಲ್ಲಿ ಮತ್ತು ಸದಸ್ಯರಾದ ಡಾ|ಸೋನಿ ಡಿಕೋಸ್ತಾ, ಗಣೇಶ್ ಆಚಾರ್, ಸದಾನಂದ ಶೆಟ್ಟಿ, ಬಶೀರ್ ಸಾಹೇಬ್ ಇನ್ನಿತರರು ಪಾಲುಗೊಂಡಿದ್ದರು.

ಈ ಜನಔಷಧಿ ಕೇಂದ್ರದಲ್ಲಿ, ನಾಗರಿಕರಿಗೆ ಅಗತ್ಯ ಇರುವ ಔಷಧಿಗಳು ಇಲ್ಲದಿದ್ದರೆ, ನಾಗರಿಕರಿಗೆ ಅಗತ್ಯ ಇರುವ ಎಲ್ಲಾ ಔಷಧಿಗಳನ್ನು ತರಿಸಿಕೊಡಲಾಗುವುದೆಂದು ತಿಳಿಸಿದ್ದಾರೆ. ಇದರ ಲಾಭವನ್ನು ನಾಗರಿಕರು ಪಡೆದುಕೊಳ್ಳ ಬೇಕಾಗಿದೆಯೆಂದು ತಿಳಿಸಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here