Sunday 11th, May 2025
canara news

ಪ್ರಥಮ ಪಿ.ಯು.ಸಿ. ಫಲಿತಾಂಶದಲ್ಲಿ ಕುಂದಾಪುರ ಸಂತ ಮೇರಿಸ್ ಪಿ.ಯು. ಕಾಲೇಜಿಗೆ ನೂರು ಶೇಕಡ ಫಲಿತಾಂಶ

Published On : 31 Mar 2017   |  Reported By : Bernard J Costa


ತಾಲೂಕಿನಲ್ಲಿಯೆ ಒಂದೇ ಕಾಲೇಜೆಂಬ ಹೆಗ್ಗಳಿಕೆ

ಕುಂದಾಪುರ, ಮಾ.31: ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ನೆಡದ ಈ ಸಾಲಿನ (2016-17) ಪ್ರಥಮ ವರ್ಷದ ಪರೀಕ್ಷೆಯಲ್ಲಿ ಕುಂದಾಪುರದ ಸಂತಮೇರಿಸ್ ಪದವಿ ಪೂರ್ವ ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ತೆರ್ಗಡೆ ಹೊಂದಿ ಕಾಲೇಜಿಗೆ ನೂರು ಶೇಕಡಾ ಫಲಿತಾಂಶ ದೊರಕಿದೆಯೆಂದು ಕಾಲೇಜು ಸಭಾಭವನದಲ್ಲಿ ನೆಡೆದ ವಿಧ್ಯಾರ್ಥಿ ಮತ್ತು ಪೆÇೀಷಕರ ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲಾರಾದ ವಂ|ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಫಲಿತಾಂಶವನ್ನು ಬಿಡುಗಡೆ ಮಾಡಿ ಪ್ರಕಟಿಸಿದರು.

 

 

 

 

 

 

 

ವಾಣಿಜ್ಯ ವಿಭಾಗದಲ್ಲಿ ಶೈನಿ ಗ್ಲೋರಿಯಾ ಡಿಸೋಜಾ 585 ಅಂಕಗಳನ್ನು ಪಡೆದು 98% ಕಾಲೇಜಿಗೆ ಪ್ರಥಮಳಾಗಿ ಉತಿರ್ಣ ಹೊಂದಿ ಮುಂದಿನ ಅವಧಿಯಲ್ಲಿ ಹೆಚ್ಚು ಅಂಕ ಗಳಿಸುವ ಸೂಚನೆಯನ್ನು ನಿಡಿದ್ದಾಳೆ.

ಈ ಸಭೆಯ ಕಾರ್ಯಕ್ರಮಕ್ಕೆ ಕಾಲೇಜು ಸಂಚಾಲಕರಾದ ವಂ|ಫಾ|ಅನಿಲ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ ‘ನಮ್ಮ ಕಾಲೇಜು ದಿನದಿಂದ ದಿನಕ್ಕೆ ಉತ್ತಮ್ಮ ಮಟ್ಟಕ್ಕೆ ಎರುತಿದ್ದು, ಇವತ್ತು ವಿಶೇಸ ಶ್ರೇಣಿಯಲ್ಲಿ ಉತಿರ್ಣಾಗುವ ಸಂಖ್ಯೆ ಎರುತ್ತಲೆ ಇದೆ, ಇದು ಶಾಲಾ ಭೋದಕ ಸಿಂಬದಿಯ ಸರ್ವಾಂಗಿಣ ಪ್ರಯತ್ನವಾಗಿದೆ’ ವಿಧ್ಯಾರ್ಥಿಗಳನ್ನು ಹಾಗೂ ಭೋದಕ ಸಿಂಬದಿಯನ್ನು ಅವರು ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿ ಮಾನಿಷ್ ಆಸ್ಪತ್ರೆಯ ಮುಖ್ಯಸ್ಥೆ ಪ್ರಮೀಳಾ ನಾಯಕ್ ಅವರು ‘ಕಡಿಮೆ ಅಂಕ ತೆಗೆದುಕೊಂಡವರು ಅಳುಕುವುದು ಬೇಡ, ಇನ್ನೂ ಮುಂದೆಯು ಸಾಧನೆ ಮಾಡಬಹುದು ಎನ್ನುತಾ, ಉತ್ತಮ ಅಂಕ ಗಳಿಸಿದವರಿಗೆ ಪುಸ್ಪ ನೀಡಿ ಶುಭ ಕೊರೀದರು. ಕುಂದಾಪುರ ಇಗರ್ಜಿಯ ಪಾಲನ ಮಂಡಳಿ ಅಧ್ಯಕ್ಷ ಜಾಕೋಬ್ ಡಿಸೋಜಾ, ದಾನಿಗಳಾದ ವಿಕ್ಟರ್ ಡಿಸೋಜಾ, ರೈನಿಶ್ ಡಿಆಲ್ಮೇಡಾ, ಪತ್ರಕರ್ತ ಸಾಹಿತಿ ಬರ್ನಾಡ್ ಡಿಕೋಸ್ತಾ, ಉತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಪುಸ್ಪ ನೀಡಿ ಶುಭ ಕೋರಿ ಗೌರವಿಸಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಉಪಸ್ಥಿತರಿದ್ದರು.

ಪ್ರಾಧ್ಯಪಕಿ ಶರ್ಮಿಳಾ ಮಿನೇಜೆಸ್ ಪ್ರಾರ್ಥನ ಗೀತೆ ಹಾಡಿದರು. ಪ್ರಾಧ್ಯಪಕರಾದ ನಾಗರಾಜ್ ಶೆಟ್ಟಿ ಅತ್ಯುತ್ತಮ ಅಂಕ ಗಳಿಸಿದವರ, ಮತ್ತು ವಿಶೇಸ ಸಾಧನೆ ಮಾಡಿದವರ ವಿವರವನ್ನು ಪ್ರಾಧ್ಯಪಕಿ ಜೊಯ್ಲಿನ್ ಸಾಲಿನ್ಸ್ ನೀಡಿದರು. ಪ್ರಾಧ್ಯಪಕಿ ಪ್ರೀತಿ ಕ್ರಾಸ್ತಾ ಸ್ವಾಗತಿಸಿದರು. ಪ್ರಾಧ್ಯಪಕಿ ರೇಶ್ಮಾ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅತ್ಯುತ್ತಮ ಸಾಧನೆ ಮಾಡಿದ ವಿಧ್ಯಾರ್ಥಿಗಳ ವಿವರ
ವಾಣಿಜ್ಯ ವಿಭಾಗ - ನವೀನ್ 579 ಅಂಕ, 96.5%,
ಪರ್ಲ್ 574 ಅಂಕ, 95.66%
ವಿಜ್ಞಾನ ವಿಭಾಗ ಪ್ರತೀಕ್ 574 ಅಂಕ. 95.66%

ಉತ್ತಮ ಸಾಧನೆ ಮಾಡಿದವರು
ವಿಜ್ಞಾನ ವಿಭಾಗ – ಜೋಶಿತಾ, ಅಶ್ವಿನ್ ಪಿಂಟೊ,
ವಾಣಿಜ್ಯ ವಿಭಾಗ – ರಕ್ಷಿತ್, ಪಾವನಾ, ಸಂದೀಪ್
ಕಲಾ ವಿಭಾಗ - ಸುಪ್ರೀತಾ, ಪ್ರಿಯೆಲ್, ರಚನಾ.
ವಿಶೇಷ ಶ್ರೇಣಿಯಲ್ಲಿ ಉತಿರ್ಣರಾದವರು - ವೆನ್ಸಿಟಾ, ಶರಲ್, ಪ್ರಿಯ ಚೈತಶ್ರಿ, ಬೆನಿಶಾ, ಅಶೈಚಿತ್ರ, ಮಿಲನಾ, ಸ್ಟೆಫಿ, ಸೌಮ್ಯ, ಕೆರೊಲ್ ಮತ್ತು ಫರ್ಡಿನಾಂಡ್




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here