Saturday 23rd, September 2023
canara news

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನ ಪರಿಷತ್ತು ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಭೇಟಿಗೈದ ಭಂಡಾರಿ ಮಹಾ ಮಂಡಲದ ನಿಯೋಗ

Published On : 31 Mar 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಬೆಂಗಳೂರು, ಮಾ.31: ಭಂಡಾರಿ ಮಹಾ ಮಂಡಲದ ನಿಯೋಗವು ಇಂದಿಲ್ಲಿ ಗುರುವಾರ ಬೆಂಗಳೂರುನ ಮುಂಖ್ಯಮಂತ್ರಿಗಳ ಸರಕಾರಿ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಗೈದು ಬರುವ ಮೇ.08ರಂದು ಉಡುಪಿ ಜಿಲ್ಲೆಯ ಬ್ರಹ್ಮಾವರ ಬಾರ್ಕೂರುನಲ್ಲಿ ನಡೆಸಲು ಉದ್ದೇಶಿಸಿರುವ ಭಂಡಾರಿ ಮಹಾ ಸಮಾವೇಶನದ ಭವ್ಯ ಸಮಾರಂಭ ಉದ್ಘಾಟಿಸುವಂತೆ ಕೋರಿತು.

ಅಂತೆಯೇ ಬೆಂಗಳೂರು ಗಾಂಧಿ ಭವನದ ಸನಿಹದಲ್ಲಿನ ಸರಕಾರಿ ಅಧಿಕೃತ ನಿವಾಸದಲ್ಲಿ ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಸಭಾಪತಿ, ಕರ್ನಾಟಕ ರಾಜ್ಯ ಸರಕಾರದ ಸಾಮ್ಯತ್ವದ (ವಿಧಾನ ಪರಿಷತ್ ಆಡಳಿತ್ವದ) ಗಡಿನಾಡ ಕನ್ನಡಿಗರ ಸೇವಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಿ.ಹೆಚ್ ಶಂಕರಮೂರ್ತಿ ಅವರನ್ನು ಭೇಟಿ ನೀಡಿ ಉದ್ದೇಶಿತ ಭಂಡಾರಿ ಮಹಾ ಸಮಾವೇಶನದ ಭವ್ಯ ಸಮಾರಂಭಕ್ಕೆ ಮುಖ್ಯ ಅತಿಥಿüಯಾಗಿ ಆಹ್ವಾನಿಸಿತು.

ಅಂತೆಯೇ ಸೊರಬ ಕ್ಷೇತ್ರದ ಶಾಸಕ, ಜಾತ್ಯಾತೀತ ಜನತಾ ದಳ (ಜೆಡಿಎಸ್ ಪಕ್ಷ) ನೇತಾರ ಎಸ್.ಮಧು ಬಂಗರಪ್ಪ, ಬೆಂಗಳೂರುನ ಉದ್ಯಮಿ ವಿ.ಕೆ ಮೋಹನ್ (ಕಪಾಲಿ ಮೋಹನ್) ಅವರನ್ನೂ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಮಹಾ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಮತ್ತು ಸವಿತಾ ಮಾರ್ಗದರ್ಶಿ ಮಾಸಿಕದ ಸಂಪಾದಕ ಸೋಮಶೇಖರ ಎಂ.ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಪತ್ರಕರ್ತ ಸೋಮಶೇಖರ್ ಪಿ ಮತ್ತಿತರರು ಉಪಸ್ಥಿತರಿದ್ದರು.

ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಶ್ರೀ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಅವರು ಸಭಾಪತಿ ಡಿ.ಹೆಚ್ ಶಂಕರಮೂರ್ತಿ ಅವರಿಗೆ ಆಹ್ವಾನಿಸಿ ಜಗದ್ವ್ಯಾಪಿ ಪಸರಿರುವ ಪ್ರತಿಷ್ಠಿತ ಭಂಡಾರಿ ಸಮುದಾಯವು ತನ್ನ ಕಲದೇವರನ್ನು ಆರಾಧಿಸಿರುವ ಅಂದಾಜು ಒಂಭತ್ತು ಶತಮಾನಗಳ ಇತಿಹಾಸವುಳ್ಳ ಕಚ್ಚೂರು ಶ್ರೀ ನಾಗೇಶ್ವರ ದೇವರ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಸಿದ್ಧತೆ ಬಗ್ಗೆ ಸಂಕ್ಷೀಪ್ತ ಮಾಹಿತಿ ನೀಡಿದರು.

ಮುಖ್ಯಮಂತ್ರಿ ಭೇಟಿಯಲ್ಲಿ ಸಚಿವ ಯು.ಟಿ ಖಾದರ್, ರಿಪೆÇೀರ್ಟರ್ಸ್ ಗೀಲ್ಡ್ ಅಧ್ಯಕ್ಷ, ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹಾಗಾರ ದಿನೇಶ್ ಅಮೀನ್ ಮಟು, ಭಂಡಾರಿ ಮಹಾ ಮಂಡಲ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಮಹಾ ಮಂಡಲದ ಗೌರವ ಪ್ರಧಾನ ಕಾರ್ಯದರ್ಶಿ ಮತ್ತು ಸವಿತಾ ಮಾರ್ಗದರ್ಶಿ ಮಾಸಿಕದ ಸಂಪಾದಕ ಸೋಮಶೇಖರ ಎಂ.ಭಂಡಾರಿ, ಉತ್ಸವ ಸಮಿತಿ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಪತ್ರಕರ್ತ ಸೋಮಶೇಖರ್ ಪಿ ಉಪಸ್ಥಿತರಿದ್ದರು.

 




More News

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Comment Here