Friday 2nd, June 2023
canara news

ರೋಜರಿ ಕ್ರೆಡಿಟ್ ಕೋ-ಆಪ್ ಸೊಸೈಟಿಯ ಐದನೇ ಶಾಖಾ ಉದ್ಘಾಟನೆ

Published On : 02 Apr 2017   |  Reported By : Bernard J Costa


ಕುಂದಾಪುರ,ಎ.2: 25 ವರ್ಷಗಳ ಹಿಂದೆ ಕುಂದಾಪುರ ವಲಯ ಕೆಥೂಲಿಕ್ ಸಂಘಟನೇಯ ಕಾರ್ಯ ಸಂಘಟನೆಯಿಂದ ಕುಂದಾಪುರದಲ್ಲಿ ಸ್ಥಾಪಿಸಲ್ಪಟ್ಟ ರೋಜರಿ ಕ್ರೆಡಿಟ್ ಕೋ-ಆಪ್ ಸೊಸೈಟಿ ಲಿಮಿಟೆಡ್ ಯಶಸ್ಸಿನ ಯಶಸ್ಸು ಪಡೆದು ತಮ್ಮ ಶಾಖೆಗಳನ್ನು ವಿಸ್ತರಿಸುತ್ತಾ, ಈಗ ಐದನೇ ಶಾಖೆಯಾದ ಪಿಯುಸ್ ನಗರ್/ಕೊಟೇಶ್ವರ ಶಾಖೆಯನ್ನು ಆರ್.ಐ.ಡಿಮೆಲ್ಲೊ ಮೆನ್ಶನ್‍ನಲ್ಲಿ ವಿಸ್ತರಿಸಿದ್ದಾರೆ. ಈ ಶಾಖೆಯನ್ನು ಸಹಕಾರ ಸಂಘಗಳ ಉಪನಿಬಂಧಕರಾದಾ ಪ್ರವೀಣ್ ನಾಯಕ್ ಉದ್ಘಾಟಿಸಿದರು ‘ಇಂತಹ ಸಹಾಕಾರಿ ಸಂಘಗಳು ಹೆಚೆಚ್ಚು ಆರಂಭಗೊಳ್ಳುವುದರಿಂದ ಬಡವರು ಖಾಸಗಿ ಸಾಲ ತೆಗೆದುಕೊಂಡು ಪರಿತಪಿಸುವುದು ತಪ್ಪುತ್ತದೆ, ಇಂತವರ ಏಳಿಗಾಗಿ ಇಂತಹ ಸೊಸೈಟಿಗಳು ಬದ್ದತೆಯನ್ನು ಹೊಂದಿರುತ್ತವೆ’ ಎಂದು ಅವರು ತಿಳಿಸಿದರು.

ಹೊಸ ಶಾಖೆಯನ್ನು ಉಜ್ವಾಡ್ ಪತ್ರದ ಸಂಪಾದಕ ಅಂಕಣಕಾರರಾದ ವಂ| ಫಾ| ಚೇತನ್ ಆಶಿರ್ವಧಿಸಿ ‘ಎಲ್ಲಿ ಶ್ರಮ ಇದೆಯೊ, ಅಲ್ಲಿ ನಮಗೆ ಯಶಸ್ಸು ಲಭಿಸುತ್ತದೆ’ ಎಂದು ನುಡಿದರು. ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ, ಅಧ್ಯಕ್ಷತೆ ವಹಿಸಿ ಸೊಸೈಟಿಯ ಪ್ರಗತಿಯನ್ನು ತಿಳಿಸಿ, ಸ್ವಾಗತಿಸಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ|ಅನಿಲ್ ಡಿಸೋಜಾರವರು ಗಣಕ ಯಂತ್ರವನ್ನು ಉದ್ಘಾಟಿಸಿ ಶುಭ ಕೋರಿದರು. ಪಿಯುಸ್ ನಗರ್ ಚರ್ಚಿನ ಧರ್ಮಗುರು ವಂ| ಜೋನ್ ಆಲ್ಫ್ರೆಡ್ ಬರ್ಬೊಜಾ ಭದತಾ ಕೋಶವನ್ನು ಉದ್ಘಾಟಿಸಿದರು.

ಅತಿಥಿಗಳಾಗಿ ಚಂದ್ರ ಪ್ರತಿಮಾ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹಾಜಿ ಮಾಸ್ಟರ್ ಮಹಮ್ಮದ್, ಬ್ಯಾರಿಸ್ ಗ್ರೂಪ್, ಜಲಜ ಎಚ್ ಚಂದನ್, ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಫಾಸ್ಕಲ್ ಡಿಸೋಜಾ, ನಿರ್ದೇಶಾಕರಾದ ಫಿಲಿಪ್ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಮಾರ್ಟಿನ್ ಡಾಯಾಸ್, ಕಿರಣ್ ಲೋಬೊ ಮತ್ತು ಶಾಂತಿ ಕರ್ವಾಲ್ ಉಪಸ್ಥಿತರಿದ್ದರು. ನಿರ್ದೇಶಕ ಜೆರಾಲ್ಡ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷ ಜಾನ್ ಮಿನೇಜೆಸ್ ವಂದಿಸಿದರು.




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here