Monday 5th, December 2022
canara news

ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಕಾರ್ಯಕ್ರಮ ಸಮಾಪನ-ಸ್ಮರಣ ಸಂಚಿಕೆ ಬಿಡುಗಡೆ

Published On : 03 Apr 2017   |  Reported By : Rons Bantwal


ಪಾಲೆತ್ತಾಡಿ ಮುಂಬಯಿ ಕನ್ನಡಿಗರ ಅನರ್ಘ್ಯ ರತ್ನ : ನಿತ್ಯಾನಂದ ಕೋಟ್ಯಾನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.03: ಚಂದ್ರಶೇಖರ ಪಾಲೆತ್ತಾಡಿ ಅಭಿನಂದನಾ ಸಮಿತಿಯ ಸರ್ವ ಸದಸ್ಯರ ಪೂರ್ಣ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ನಿಷ್ಠುರವಾದಿ ಕಂಡು ಬಂದರೂ ಪಾಲೆತ್ತಾಡಿ ಅವರು ಮೃದು ಮನಸ್ಸಿನ ವ್ಯಕ್ತಿ. ಇಂತಹ ಪಾಲೆತ್ತಾಡಿ ಮುಂಬಯಿ ಕನ್ನಡಿಗರ ಅನರ್ಘ್ಯರತ್ನ ಆಗಿದ್ದಾರೆ. ಮರಾಠಿ ಪತ್ರಿಕಾರಂಗದ ಶಿಂಗೋಟೆ ಅವರನ್ನು ಗೌರವಿಸುವ ಮೂಲಕ ಮರಾಠಿ ಕರ್ನಾಟಕದ ಸಾಂಗತ್ಯವನ್ನು ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಐಕಳ ಹರೀಶ್ ಶೆಟ್ಟಿ ಅವರ ಸಾರಥ್ಯದಿಂದ ಒಟ್ಟು ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಹಾಗೂ ಪಾಲೆತ್ತಾಡಿ ಅಭಿನಂದನಾ ಸಮಿತಿ ಮುಂಬಯಿ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ನುಡಿದರು.

ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ಜೆ.ಪಿ ನಾಯಕ್ ಭವನದಲ್ಲಿ ಇಂದಿಲ್ಲಿ ಶನಿವಾರ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಚಂದ್ರಶೇಖರ ಪಾಲೆತ್ತಾಡಿ ಅಭಿನಂದನ ಕಾರ್ಯಕ್ರಮದ ಸಮಾಪನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೆಸರಾಂತ ಚಿತ್ರಕಲಾ ಕಲಾವಿದ ಜಯ್ ಸಿ.ಸಾಲ್ಯಾನ್ ರೇಖಾಚಿತ್ರವಾಗಿ ರಚಿಸಿದ `ಸ್ಮರಣ ಸಂಚಿಕೆ ಬಿಡುಗಡೆ' ಬಿಡುಗಡೆಗೊಳಿಸಿ ನಿತ್ಯಾನಂದ ಕೋಟ್ಯಾನ್ ನುಡಿದರು.

ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮಾತನಾಡಿ ಮರಾಠಿ ಭೂಮಿಯಲ್ಲಿ ಕನ್ನಡದ ಕ್ರಾಂತಿಕಾರ ಪಾಲೆತ್ತಾಡಿ ಸತಿಪತಿಗಳನ್ನು ಅಭಿನಂದಿಸುವುದೇ ಅಭಿಮಾನ. ಕನ್ನಡ ವಿಭಾಗದಿಂದ ಆದಿಗೊಂಡು ಮತ್ತೆ ಇಲ್ಲೇ ಕೊನೆಗೊಳ್ಳುತ್ತಿರುವ ಅವರ ಅಭಿನಂದನಾ ಕಾರ್ಯಕ್ರಮ ಮರಳಿ ಗೂಡಿಗೆ ಸೇರಿದ ಭಿನ್ನ ರೀತಿಯ ಕಾರ್ಯಕ್ರಮವೇ ಸರಿ. ಇದು ಒಂದು ರೀತಿಯ ಐಕ್ಯತೆಯ ಕಾರ್ಯಕ್ರಮ. ಕಿಂಡರಿಜೋಗಿ ಆಗಿ ಮೋಡಿ ಮಾಡಿದ ಕನ್ನಡಿಗ ಪಾಲೆತ್ತಾಡಿ ಅವರ ನಡಾವಳಿ, ನಾಡು ನುಡಿಯ ವಾಂಙ್ಮಯ ಸೇವೆ ಅನನ್ಯವಾದದ್ದು. ಆದುದರಿಂದ ಪಾಲೆತ್ತಾಡಿ ಅವರ 60ರ ಸಂಭ್ರಮಕ್ಕೆ ಈ ಕಾರ್ಯಕ್ರಮ ಮುನ್ನುಡಿಯಾಗಿದೆ ಎಂದರು.

ನನ್ನ ಮುಂಬಯಿ ಬದುಕಿನ ಸೇವೆಯನ್ನು ಪರಿಗಣಿಸಿ ತಾವು ಪ್ರಕಟಿಸಿದ `ನಾನು... ನನ್ನ ಸ್ವಗತ' ಪುಸ್ತಿಕೆ, `ಆಪ್ತಮಿತ್ರ' ಅಭಿನಂದನ ಗ್ರಂಥ ಬಿಡುಗಡೆ ಹಾಗೂ ಪರಿವಾರವನ್ನೊಳಗೊಂಡು ನೀಡಿದ ಅಭಿನಂದನಾ ಗೌರವಕ್ಕೆ ನಾವು ಸರ್ವರಿಗೂ ಋಣಿಯಾಗಿದ್ದೇನೆ. ನಾನು ನನ್ನ ಬದ್ಧತೆಯಲ್ಲಿ ನಡೆದುಕೊಂಡು ಬಂದವ. ನಾನು ಬಯಸದೆ ಬಂದ ಭಾಗ್ಯವೇ ಈ ಸನ್ಮಾನ. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ರೂಪು ರೇಖೆಯಲ್ಲಿ ಹರೀಶ್ ಶೆಟ್ಟಿ ಅವರ ನೇತ್ರತ್ವದಲ್ಲಿ ಈ ಸನ್ಮಾನ ಯಶಸ್ವಿಯಾಗಿ ನಡೆದಿದೆ. ನಾನು ಕೃತಿ ಬರೆಯದಿದ್ದರೂ ಈ ಸನ್ಮಾನದ ನೆಪದಲ್ಲಿ ನನ್ನ ಬಗ್ಗೆ ಕೃತಿ ಬಂದಿದೆ. ಈ ಕಾರ್ಯಕ್ರಮದ ಹಿಂದೆ ದುಡಿದ ಎಲ್ಲರಿಗೂ ನಾವು ಅಭಾರಿಯಾಗಿದ್ದೇವೆ ಎಂದÀು ಗೌರವಕ್ಕೆ ಉತ್ತರಿಸಿ ಚಂದ್ರಶೇಖರ ಪಾಲೆತ್ತಾಡಿನುಡಿದರು.

ಈ ಸಂದರ್ಭದಲ್ಲಿ ಕುಸುಮಾ ಸಿ.ಪಾಲೆತ್ತಾಡಿ, ಕು| ದೀಪಾ ಪಾಲೆತ್ತಾಡಿ, ಮಾ| ರೋಶನ್ ಪಾಲೆತ್ತಾಡಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ, ಆಪ್ತಮಿತ್ರ ಸಂಪಾದಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ, ಜಯ್ ಸಿ.ಸಾಲ್ಯಾನ್, ಅಭಿನಂದನ ಸಮಿತಿ ಕೋಶಾಧಿಕಾರಿ ಸುರೇಶ್ ಶೆಟ್ಟಿ ಯೆಯ್ಯಾಡಿ, ಜೊತೆ ಕೋಶಾಧಿಕಾರಿ ಶ್ರೀಧರ ಉಚ್ಚಿಲ್ ಮತ್ತು ನವೀನ್‍ಕೆ.ಇನ್ನ, ಬಾಬು ಕೆ.ಬೆಳ್ಚಡ ವೇದಿಕೆಯಲ್ಲಿ ಉಪಸ್ಥಿತರಿದ್ದÀರು.

ಈ ಸಂದರ್ಭದಲ್ಲಿ ಅರವಿಂದ ಹೆಬ್ಬಾರ್, ದೇವುದಾಸ್ ಶೆಟ್ಟಿ, ಧರ್ಮದರ್ಶಿ ಅಣ್ಣಿ ಸಿ.ಶೆಟ್ಟಿ, ಜಗದೀಶ್ ಶೆಟ್ಟಿ ನಂದಿಕೂರು, ಚಂದ್ರಹಾಸ ಶೆಟ್ಟಿ ದೆಪ್ಪಣಿಗುತ್ತು, ರವಿ.ರಾ ಅಂಚನ್, ಡಾ| ವಾಣಿ ನಾರಾಯಣ ಉಚ್ಚಿಲ್ಕರ್, ಎಕ್ಕಾರು ದಯಾಮಣಿಶೆಟ್ಟಿ, ಅಶೋಕ್ ಎಸ್.ಸುವರ್ಣ, ಎಸ್.ಕೆ ಸುಂದರ್, ಕೊಲ್ಯಾರು ರಾಜು ಶೆಟ್ಟಿ, ಲತಾ ಸಂತೋಷ್ ಶೆಟ್ಟಿ, ರತ್ನಾಕರ್ ಆರ್.ಶೆಟ್ಟಿ, ಮೋಹನ್ ಮಾರ್ನಾಡ್, ಉಮೇಶ್‍ಕುಮಾರ್ ಅಂಚನ್, ಮಲ್ಲಿಕಾ ನವೀನ್ ಇನ್ನ, ವಿಶಾಲ ಎಸ್.ಕುಂದರ್, ಚಿತ್ರಾಪು ಕೆ.ಎಂ ಕೋಟ್ಯಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಡಾ| ಜಿ.ಎನ್ ಉಪಾಧ್ಯ ಸ್ವಾಗತಿಸಿದರು. ಕನ್ನಡ ವಿಭಾಗದ ವಿದ್ಯಾಥಿರ್üನಿಯರು ಪ್ರಾರ್ಥನೆಯನ್ನಾಡಿದರು. ಎಸ್.ನಳಿನಾ ಪ್ರಸಾದ್ ಹಾಗೂ ಜ್ಯೋತಿ ಎನ್.ಶೆಟ್ಟಿ ಆತ್ಮಕಥನಾ ಬಗ್ಗೆ ವಿಮರ್ಶೆ ನಡೆಸಿದÀರು. ಅಭಿನಂದನ ಸಮಿತಿ ಜೊತೆ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಪೇತ್ರಿ ವಿಶ್ವನಾಥ ಶೆಟ್ಟಿ ಧನ್ಯವದಿಸಿದರು.
More News

ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಮಿಲಾಗ್ರಿಸ್ ಕಾಲೇಜ್ ಕಲ್ಯಾಣ್ಪುರ ಹಳೆ ವಿದ್ಯಾಥಿರ್sಗಳ ಮಹಾರಾಷ್ಟ್ರ ಮಟ್ಟದ ಸ್ನೇಹಮಿಲನ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಧರ್ಮಸ್ಥಳದಲ್ಲಿ 365 ಶಾಲೆಗಳಿಗೆ ಪೀಠೋಪಕರಣ ವಿತರಣೆ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ
ಡಿ.04: ಕಟೀಲು ಭ್ರಮರ-ಇಂಚರ ನಾಮದ ನುಡಿಹಬ್ಬ ಸಮಾರೋಪ

Comment Here