Wednesday 29th, March 2023
canara news

ಖ್ಯಾತ ಉದ್ಯಮಿ ಯು.ಸುರೇಂದ್ರ ಶೆಣೈ ನಿಧನ

Published On : 03 Apr 2017   |  Reported By : Bernard J Costa


ಕುಂದಾಪುರದ ಹೆಸರಾಂತ ಮನೆತನದ ಹಾರ್ಡ್‍ವೇರ್ ಉದ್ದಿಮೆಯ ಮೆಸಸ್ ಯು.ಆರ್. ಶೆಣೈ ಸಂಸ್ಥೆಯ ಪಾಲುದಾರ ಸಮಾಜ ಸೇವಕ ದಾನಿ, ಯು.ಸುರೆಂದ್ರ ಶೆಣೈ ಎಪ್ರಿಲ್ 2 ರಂದು ಧೈವಾಧಿನರಾದರು. ಅವರು 62 ವರ್ಷ ಪ್ರಾಯದವರಾಗಿದ್ದು, ಮ್ರತರು ಪತ್ನಿ, ಪುತ್ರ ಮತ್ತು ಪತ್ನಿ ಅಣ್ಣ ತಮ್ಮಂದಿರನ್ನು ಅಗಲಿದ್ದಾರೆ.

ಯು.ಸುರೇಂದ್ರ ಶೆಣೈ ತಮ್ಮ ಸರಳತೆ, ಸೇವಾ ಮನೋಭಾವದಿಂದ ಸಮಾಜದಲ್ಲಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದ ಇವರು ಮರ್ಚಂಟ್ ಅಸೋಸಿಯೆಶನ್ ನಿರ್ದೇಶಕರಾಗಿ, ಯುವಕ ಸಮಾಜದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತಿದ್ದರು.

ಕೋಟ ಆಂಜೇನೆಯ ದೇವಸ್ಥಾನ, ಭಟ್ರ ಹಾಡಿ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಪುನರ್ ನಿರ್ಮಾಣ ಕಾರ್ಯದಲ್ಲಿ ಸರ್ವ ರೀತಿಯಲ್ಲಿ ಶ್ರಮಿಸಿದ್ದರು.ಕೋಣಿಯ ಮಾನಸ ಜ್ಯೋತಿ ವಿಶೇಷ ಶಾಲೆಗೆ ಮೇಲಂತಸ್ತಿನ ಛಾವಣಿಗೆ ಕಟ್ಟಿಸಿಕೊಟ್ಟಿದ್ದರು. ಹಲವು ಶಾಲೆ ಸೇವಾಸಂಸ್ಥೆಗಳಿಗೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವ ಗುಣದವರಾಗಿದ್ದು. ಅವರ ಉದ್ದಿಮೆಯ ಹೆಚ್ಚಿನ ಗ್ರಾಹಕರ ಪರಿಚಯವುಳ್ಳವರಾಗಿ, ಗ್ರಾಹಕರಿಗೆ ಮೆಚ್ಚಿನವರಾಗಿದ್ದು ಶೆಣೈ ಅವರ ಮನೆತನಕ್ಕೆ ಇದು ತುಂಬಲಾರದ ನಶ್ಟವಾಗಿದೆ
More News

ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಸಂಸದ ಗೋಪಾಲ್ ಶೆಟ್ಟಿ ಅವರಿಗೆ ಸಂಸದ್ ರತ್ನ ಪ್ರಶಸ್ತಿ 2023 ಪ್ರದಾನ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಪತ್ರಕರ್ತ ರವೀಂದ್ರ ಶೆಟ್ಟಿ ಅವರ ನಮ್ಮ ಉಡುಪಿ ಕೃತಿ ಬಿಡುಗಡೆ
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್
ಮಂಗಳೂರು ವಿವಿ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್

Comment Here