Friday 9th, May 2025
canara news

ಎಪ್ರಿಲ್ 22 ಅರಸಿನಮಕ್ಕಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ. ಆಮಂತ್ರಣ ಪತ್ರ ಬಿಡುಗಡೆ

Published On : 05 Apr 2017   |  Reported By : media release


ಅರಸಿನಮಕ್ಕಿ: ಅರಸಿನಮಕ್ಕಿಯ ಕೇಂದ್ರ ಮೈದಾನದಲ್ಲಿ ಎಪ್ರಿಲ್ 22 ರಂದು ಆಯೋಜಿಸಿರುವ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು.

 

ಈ ಸಂಧರ್ಭ ಗ್ರಾಮಸ್ಥರೊಂದಿಗೆ ಮಾತನಾಡಿದ ಡಾ.ಹೆಗ್ಗಡೆ ಶ್ರೀನಿವಾಸ ಕಲ್ಯಾಣೋತ್ಸವವು ಒಂದು ಅತ್ಯುತ್ತಮ ಧಾರ್ಮಿಕ ಕಾರ್ಯಕ್ರಮವಾಗಿದ್ದು. ಅರಸಿನಮಕ್ಕಿಯಂತಹ ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದರು. ಕಾರ್ಯಕ್ರಮ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ಈ ಸಂಧರ್ಭ ದೈವಜ್ಞ ಶ್ರೀಧರ ಗೋರೆ, ಕಲ್ಯಾಣೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಗೌರವಾಧ್ಯಕ್ಷ ಸಚ್ಚಿದಾನಂದ ಭಟ್, ವಿವಿಧ ಸಮಿತಿಯ ಪ್ರಮುಖರಾದ ಜಯರಾಮ ನೆಲ್ಲಿತ್ತಾಯ, ಚೆನ್ನಪ್ಪ ಗೌಡ ಶಿಬಾಜೆ, ಎಂ.ಪಿ ರಾಜಗೋಪಾಲ್, ಶ್ರೀನಿವಾಸ ಮೊಡೆತ್ತಾಯ, ರಮಾನಾಥ ರೈ ಶಿಬರಾಜೆ, ಧರ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಎಪ್ರಿಲ್ 12 ರಂದು ಚಪ್ಪರ ಮುಹೂರ್ತ: ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಎಪ್ರಿಲ್ 12 ರಂದು ದೈವಜ್ಞ ಶ್ರೀಧರ ಗೋರೆ ಮಾರ್ಗದರ್ಶನದಲ್ಲಿ ಚಪ್ಪರ ಮುಹೂರ್ತ, ಗಣಹೋಮ ಹಾಗೂ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here