Friday 12th, July 2024
canara news

ಎಪ್ರಿಲ್ 7ರಿಂದ `ಚಾಪ್ಟರ್' ಕರಾವಳಿಯಾದ್ಯಂತ ತೆರೆಗೆ

Published On : 05 Apr 2017   |  Reported By : Rons Bantwal


ಎಲ್.ವಿ.ಪ್ರೋಡಕ್ಷನ್ ಲಾಂಛನದಲ್ಲಿ ತಯಾರಾದ ಮೋಹನ್ ಭಟ್ಕಳ್ ನಿರ್ದೇಶನದ ಚಾಪ್ಟರ್ ತುಳು ಸಿನಿಮಾ ಎಪ್ರಿಲ್ 7ರಿಂದ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.

ಮಂಗಳೂರಿನಲ್ಲಿ ಜ್ಯೋತಿ, ಬಿಗ್‍ಸಿನೆಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಉಡುಪಿಯಲ್ಲಿ ಡಯನಾ, ಮಣಿಪಾಲದಲ್ಲಿ ಐನಾಕ್ಸ್, ಸುರತ್ಕಲ್‍ನಲ್ಲಿ ನಟರಾಜ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ ಚಿತ್ರಮಂದಿರದಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಮೋಹನ್ ಭಟ್ಕಳ್ ತಿಳಿಸಿದ್ದಾರೆ.

 

ಕರಾವಳಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಆಗುತ್ತಿದೆ, ಇದೇ ರೀತಿ ಕನ್ನಡದ ಸಿನಿಮಾಗಳ ಜೊತೆ ಕರಾವಳಿ ತುಳು ಭಾಷೆಯ, ತುಳು ಸಿನಿಮಾಗಳು ಅಭಿವೃದ್ಧಿ ಆಗಬೇಕು ಎಂದರು. ಜನರ ಪ್ರೋತ್ಸಾಹ ಚಾಪ್ಟರ್ ಸಿನಿಮಾಕ್ಕೆ ಅಗತ್ಯವಿದೆ, ತುಳುನಾಡಿನ ಜನತೆ ಈ ತುಳು ಸಿನಿಮಾವನ್ನು ಯಶಸ್ವಿ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ. ಚಾಪ್ಟರ್ ಸಿನಿಮಾದಲ್ಲಿ ತುಳುನಾಡಿನ ಕಲೆ, ಸಂಪ್ರಾದಾಯ, ಆರಾಧನೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಚಾಪ್ಟರ್ ಸಿನಿಮಾದ ನಾಯಕ ಅಸ್ತಿಕ್ ಶೆಟ್ಟಿ ಕರಾವಳಿಯ ಜನರ ಪ್ರೋತ್ಸಾಹ ಈ ಮೊದಲು ಕೂಡ ಸಿಕ್ಕಿದೆ, ಇದೇ ರೀತಿ ಚಾಪ್ಟರ್ ಸಿನಿಮಾವನ್ನು ತುಳುನಾಡಿನ ಜನರು ಯಶಸ್ವಿ ಮಾಡಿ ಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಚಾಪ್ಟರ್ ಸಿನಿಮಾದ ಮೂಲಕ ಮೊದಲ ಭಾರಿಗೆ ನಿರ್ದೇಶಕರಾಗುತ್ತಿರುವ ಮೋಹನ್ ಭಟ್ಕಳ್ ಅವರು ಈ ಹಿಂದೆ ಕನ್ನಡದ ಹಿಟ್ ಸಿನಿಮಾಗಳಾದ ಗಜ, ರಾಮ್, ಬೃಂದಾವನ, ಹುಡುಗರು, ಪವರ್, ಕರಿಚಿರತೆ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿದ್ದರು, ಇವರು ಕನ್ನಡ ಸಿನಿಮಾವನ್ನು ಬಿಟ್ಟು, ಇದೀಗ ತುಳುನಾಡಿನ ತುಳು ಭಾಷೆಯ ಮೇಲೆ ಪ್ರೀತಿ ಇಟ್ಟು ತುಳು ಸಿನಿಮಾವನ್ನು ಬೆಳೆಸುವ ಇವರ ಪ್ರಯತ್ನವನ್ನು ತುಳುನಾಡಿನ ಜನರು ಪ್ರೋತ್ಸಾಹಿಸಬೇಕು ಎಂದವರು ತಿಳಿಸಿದ್ದಾರೆ.

ಸುರೇಂದ್ರನಾಥ್ “ಚಾಪ್ಟರ್”ಗೆ ಸಂಗೀತ ನೀಡಿದ್ದಾರೆ. ಉಮೇಶ್ ಮೀಜಾರ್, ಲೋಕು ಕುಡ್ಲ, ಕಿಶೋರ್ ಮೂಡಬಿದ್ರೆ ಸಾಹಿತ್ಯ ಒದಗಿಸಿದ್ದಾರೆ. ಅರವಿಂದ್ ಬೋಳಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ತಿಮ್ಮಪ್ಪ ಕುಲಾಲ್ ಪ್ರಮುಖ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ . ಚಿತ್ರಕ್ಕೆ ಮಣಿ ಎಜೆ ಕಾರ್ತಿಕೇಯನ್, ಕಿಶೋರ್ ಮೂಡಬಿದ್ರೆ ಮತ್ತು ಉಮೇಶ್ ಮಿಜಾರ್ ಅವರು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ, ವೈ.ಎಸ್.ಶ್ರೀಧರ್ ಅವರ ಸಂಕಲನವಿದೆ.

ಸಿನಿಮಾದಲ್ಲಿ ಅಸ್ತಿಕ್ ಶೆಟ್ಟಿ, ಐಶ್ವರ್ಯ ಹೆಗ್ಡೆ, ಸಂಜನಾ ನಾಯ್ಡು, ಅರವಿಂದ್ ಬೋಳಾರ್, ತಿಮ್ಮಪ್ಪ ಕುಲಾಲ್ ರೋಹಿತ್ ಅಲಿಯಾಸ್ ಸುನಿಲ್, ಗೋಪಿನಾಥ್ ಭಟ್, ಉಮೇಶ್ ಮಿಜಾರ್, ರೂಪ ವರ್ಕಾಡಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ರಂಜನ್ ಬೋಳಾರ್, ಸುರೇಶ್ ಕುಲಾಲ್, ರೋಶನ್ ಶೆಟ್ಟಿ ಹಾಗು ಇನ್ನಿತರ ಕಲಾವಿದರು ಇದ್ದಾರೆ.

 
More News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ
 ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಬೆಳುವಾಯಿ ಮರಿಯಮ್ ನಿಕೇ ತನ್ ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ

Comment Here