Friday 26th, April 2024
canara news

ಎ.16: ರವಿ ರಾ.ಅಂಚನ್‍ರ `ಜನಸಿರಿ'-`ಮನಸಿರಿ' ಎರಡು ಕೃತಿಗಳ ಲೋಕಾರ್ಪಣೆ

Published On : 06 Apr 2017   |  Reported By : Rons Bantwal


ಮುಂಬಯಿ, ಎ. 06: ವೀರ ಕೇಸರಿ ಕಲಾವೃಂದ ಮತ್ತು ಸಿರಿವರ ಪ್ರಕಾಶನ ಬೆಂಗಳೂರು ಹಾಗೂ ಶೈಲಜ ಅಂಚನ್ ಫೌಂಡೇಶನ್ ಮುಂಬಯಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಡಿನ ಹೆಸರಾಂತ ಸಾಹಿತಿ, ಅಂಕಣಕಾರ ರವಿ ರಾ.ಅಂಚನ್ ಅವರ `ಜನಸಿರಿ' ಕನ್ನಡ ಕಾವ್ಯ ಕೃತಿ ಹಾಗೂ `ಮನಸಿರಿ' ತುಳು ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮವು ಇದೇ ಎ.16ನೇ ಆದಿತ್ಯವಾರ ಸಂಜೆ 4.00 ಗಂಟೆಗೆ ಕೇಶವ್ ಗೋರೆ ಹಾಲ್, ಆರೇ ರೋಡ್, ಅಂಬಾಬಾಯಿ ದೇಗುಲ ಸನಿಹ, ಗೋರೆಗಾಂವ್ ಪಶ್ಚಿಮ, ಮುಬಯಿ ಇಲ್ಲಿ ಲೋಕಾರ್ಪಣೆ ಗೊಳ್ಳಲಿವೆ ಎಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

 Shailaja Ravi Anchan

Meenakshi Shindhe

 Shakuntala Prabhu

Ravi Ra Anchan

 Dr. Akshari Anchan

ಶಿವಸೇನಾ ಪಕ್ಷದ ನಾಯಕಿ, ಮುಂಬಯಿ ಉಪನಗರದ ಥಾಣೆ ಮಹಾನಗರ ಪಾಲಿಕೆ (ಟಿಎಂಸಿ) ಮಹಾಪೌರೆ ವಿೂನಾಕ್ಷಿ (ರಾಜೇಂದ್ರ ಶಿಂಧೆ) ಪೂಜಾರಿ ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಗೋರೆಗಾಂವ್ ಕರ್ಣಾಟಕ ಸಂಘದ ಅಧ್ಯಕ್ಷ ದೇವಲಕುಂದ ಭಾಸ್ಕರ ಶೆಟ್ಟಿ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಮೊಗವೀರ ಮಾಸಿಕದ ಸಂಪಾದಕ ಜಿ. ಕೆ ರಮೇಶ್, ಮುಂಬಯಿ ರೇಲ್ವೆ ಪ್ರವಾಸಿ ಸಂಘದ ಅಧ್ಯಕ್ಷ ಮಧು ಕೋಟ್ಯಾನ್, ಭಾರತ್ ಬ್ಯಾಂಕ್‍ನ ನಿರ್ದೇಶಕ ರೋಹಿತ್ ಎಮ್. ಸುವರ್ಣ, ಮಾಜಿ ನಿರ್ದೇಶಕ ರಂಗ ಕೆ.ಪಾಲನ್, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್‍ನ ಇದರ ಅಧ್ಯಕ್ಷ ಎ.ಕೆ ಹರೀಶ್, ವೀರ ಕೇಸರಿ ಕಲಾವೃಂದದ ನಿಕಟ ಪೂರ್ವ ಅಧ್ಯಕ್ಷ ಪಯ್ಯಾರ್ ರಮೇಶ್ ಶೆಟ್ಟಿ, ಸಮಾಜ ಸೇವಕ ಸದಾನಂದ ಕೆ.ಅಂಚನ್ ಭಾಗವಹಿಸುವರು.

ರಂಗಕರ್ಮಿ ಸಾ.ದಯಾ ಅವರು ಜನಸಿರಿ ಕೃತಿಯನ್ನು ಹಾಗೂ ಹಿರಿಯ ಲೇಖಕಿ ಲಲಿತ ಪ್ರಭು ಅಂಗಡಿ ಅವರು ಮನಸಿರಿ ಸಂಕಲನ ಪರಿಚಯಿಸಲಿದ್ದಾರೆ. ಮಹಾನಗರದಲ್ಲಿನ ಸರ್ವ ತುಳು ಕನ್ನಡ ಸಾಹಿತ್ಯಾಭಿಗಳಿಗೆ ಕೃತಿಕಾರ ರವಿ ರಾ.ಅಂಚನ್, ವೀರ ಕೇಸರಿ ಕಲಾವೃಂದ ಅಧ್ಯಕ್ಷೆ ಶಕುಂತಲಾ ಆರ್.ಪ್ರಭು, ಸಿರಿವರ ಪ್ರಕಾಶನದ ಪ್ರಕಾಶಕ ರವಿ ಸಿರಿವರ ಹಾಗೂ ಶೈಲಜ ಅಂಚನ್ ಫೌಂಡೇಶನ್‍ನ ಸಂಚಾಲಕಿ ಡಾ| ಅಕ್ಷರಿ ಆರ್.ಅಂಚನ್ ಈ ಮೂಲಕ ಆದರದ ಸ್ವಾಗತ ಬಯಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here