Saturday 23rd, September 2023
canara news

ಪೊಲೀಸರಿಂದ ನಕ್ಸಲ್‌ ಶಿವಕುಮಾರ್‌ ವಿಚಾರಣೆ

Published On : 07 Apr 2017   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ 4 ವರ್ಷಗಳ ಹಿಂದೆ ನಡೆದ ಬೈಕ್‌ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಡಿಯಲ್ಲಿರುವ ನಕ್ಸಲ್‌ ನಾಯಕ ಶಿವಕುಮಾರ್‌ನನ್ನು ಬುಧವಾರ ಕುತ್ಲೂರಿಗೆ ಕರೆದೊಯ್ಯಲಾಯಿತು.ನಕ್ಸಲ್‌ ರಾಜ್ಯ ನಾಯಕ ರಮೇಶ್‌ ಯಾನೆ ಸಮೀರ್‌ ಯಾನೆ ರಫಿ ಯಾನೆ ಮಾಧವ ಯಾನೆ ಶಿವಕುಮಾರ್‌ ಬಿ.ಎಸ್‌. (52)ನನ್ನು ಕುತ್ಲೂರು ರಾಮಚಂದ್ರ ಭಟ್ಟರ ಮನೆಗೆ ಕರೆದೊಯ್ಯಲಾಯಿತು.

2013ರಲ್ಲಿ ನಾರಾವಿ ಸಮೀಪದ ಕುತ್ಲೂರಿನಲ್ಲಿ ಬೈಕ್‌ ಹಾಗೂ ಆಮ್ನಿಗೆ ಬೆಂಕಿ ಹಚ್ಚಿದ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಲಾಗುತ್ತಿದೆ. ಪೊಲೀಸ್‌ ವಾಹನದಿಂದ ಕೆಳಗಿಳಿಯಲು ಒಲ್ಲದ ಶಿವಕುಮಾರನನ್ನು ಪೊಲೀಸರು ತನಿಖೆಗಾಗಿ ಇಳಿಯುವಂತೆ ಸೂಚಿಸಿದರು. ಅನಂತರ ವಿಚಾರಣೆ ವೇಳೆ ಕೂಡ ತಾನು ಈ ಕೃತ್ಯದಲ್ಲಿ ನೇರ ಭಾಗಿಯಲ್ಲ, ತಮ್ಮ ಸಂಘಟನೆಯ ಬೇರೆ ಸದಸ್ಯರ ಕೃತ್ಯ ಆಗಿರಬಹುದು ಎಂದು ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.

 




More News

ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಕಾರ್ಯಾಲಯ ಉದ್ಘಾಟನೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ವಿಜಯ ಕಾಲೇಜು ಹಳೆ ವಿದ್ಯಾಥಿರ್s ಸಂಘ ಮುಂಬಯಿ ಸಲಹಾ ಸಮಿತಿ ಸಭೆ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ

Comment Here