Friday 9th, May 2025
canara news

ರಾಮರಾಜ ಕ್ಷತ್ರೀಯ ಸಂಘ ಮುಂಬಯಿ 71ನೇ ವಾರ್ಷಿಕ ಮಹಾಸಭೆ

Published On : 08 Apr 2017   |  Reported By : Ronida Mumbai


ಸಮೂದಾಯದ ಏಕತೆಯಿಂದ ಶಸಕ್ತ ಸಮಾಜ ಸಾಧ್ಯ : ಗಣಪತಿ ಶೇರೆಗಾರ್
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಎ.08: ಮಹಾನಗರದಲ್ಲಿನ ರಾಮರಾಜ ಕ್ಷತ್ರೀಯ ಸಂಘವು ತನ್ನ ವಾರ್ಷಿಕ ಮಹಾಸಭೆಯನ್ನು ಕಳೆದ ಮಂಗಳವಾರ ಸಂಜೆ ಅಂಧೇರಿ ಪೂರ್ವದ ಅಜಾದ್ ರಸ್ತೆಯಲ್ಲಿನ ಕಾಮ್ಗಾರ್ ಕಲ್ಯಾಣ್ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಗಣಪತಿ ಶೇರೆಗಾರ್ ನಡೆಸಿತು.

ಗೌ| ಪ್ರ| ಕಾರ್ಯದರ್ಶಿ ದಯಾನಂದ ಶೇರೆಗಾರ್ ಸ್ವಾಗತಿಸಿ ಗತ ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರ| ಕೋಶಾಧಿಕಾರಿ ಪ್ರಕಾಶ್ ಎಂ.ಶೇರೆಗಾರ್ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಗೆ ತಿಳಿಸಿದರು. ವಿಪುಲ ನಾಯ್ಕ್ ಫಲಾನುಭವಿ ವಿದ್ಯಾಥಿರ್üಗಳ ಪಟ್ಟಿ ವಾಚಿಸಿದರು. ಜೊತೆ ಕಾರ್ಯದರ್ಶಿ ಪೂರ್ಣಾನಂದ ಶೇರೆಗಾರ್ ಅಭಾರ ಮನ್ನಿಸಿದರು.

ಮಹಾನಗರದಲ್ಲಿನ ನಮ್ಮ ಸಮೂದಾಯದ ಜನತೆಯ ಏಕತೆ ಅವಶ್ಯವಿದ್ದು ಇಂತಹ ಮಹಾತ್ವಕಾಂಕ್ಷೆಯ ಜೊತೆಗೆ ಚೇತೋಹಾರಿ ಶಕ್ತಿಗಳಾಗಿರುವ ಯುವ ಜನತೆಯ ಸಾಂಘಿಕತೆಯನ್ನು ರೂಪಿಸುವಲ್ಲಿ ಸಂಘವು ಶ್ರಮಿಸುತ್ತಿದೆ ಎನ್ನುವ ತೃಪ್ತಿ ನಮಗಿದೆ. ನಮ್ಮವರಲ್ಲಿನ ಅಸಾಮಾರ್ಥ್ಯರ ಹಾಗೂ ಯುವಜನತೆಯ ವ್ಯಕ್ತಿತ್ವ ವಿಕಾಸನಗೊಳಿಸಲು ಶಸಕ್ತರಾಗ ಬೇಕಾಗಿದ್ದು ಸಮಾಜದ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸಮುದಾಯದ ಜನತೆಯ ಸಹಯೋಗ ಅವಶ್ಯವಾಗಿದೆ ಎಂದು ಸಭೆಯನ್ನುದ್ದೇಶಿಸಿ ಅಧ್ಯಕ್ಷ ಬಿ.ಗಣಪತಿ ಶೇರೆಗಾರ್ ನುಡಿದರು.

ಸಭೆಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಬಿ.ವಿ ಶೇರೆಗಾರ್, ಮಲ್ಲಯ್ಯ ಆರ್.ಶೇರೆಗಾರ್ ಮತ್ತು ಚಂದ್ರಶೇಖರ ಕಂಡ್ಲೂರು ಅವರ ಸೇವೆಯನ್ನು ಪರಿಗಣಿಸಿ ಪ್ರಶಂಸಿಸಿ ಫಲಪುಷ್ಪ, ಸ್ಮರಣಿಕೆಗಳನ್ನಿತ್ತು ಗೌರವಿಸಲಾಯಿತು. ನಂತರ ಅಧ್ಯಕ್ಷರನ್ನೊಳಗೊಂಡು ಉಪಸ್ಥಿತ ಪದಾಧಿಕಾರಿಗಳು ಸಮಾಜ ಬಾಂಧವ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್üವೇತನ ವಿತರಿಸಿ ಶುಭಾರೈಸಿದರು.

ಉಪಾಧ್ಯಕ್ಷ ಶಂಕರ ಮದ್ವಡಿ, ಸಂಘದ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಬಟ್ವಾಡಿ ರತ್ನಾಕರ್, ಮಹಿಳಾ ವಿಭಾಗದ ಗೌ| ಕಾರ್ಯದರ್ಶಿ ಅಂಜು ಸಿ.ಕೋಟೆಕಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಬಹುತೇಕ ಸದಸ್ಯರು ಉಪಸ್ಥಿತರಿದ್ದರು.

ಸಮಾಜದ ಮಹಿಳೆಯರು ಮತ್ತು ಮಕ್ಕಳು ವೈವಿಧ್ಯಮಯ ನೃತ್ಯಾವಳಿ ಹಾಗೂ ಮನೋರಂಜನಾ ಕಾರ್ಯಕ್ರಮ ಸಾದರ ಪಡಿಸಿದರು. ಪ್ರಭಾಕರ್ ನಾಯ್ಕ್ ಸಂಗಡಿಗರು `ಜೀವಚಕ್ರ' ಕಿರು ನಾಟಕವನ್ನು ಪ್ರದರ್ಶಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆಯು ಸಮಾಪನ ಕಂಡಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here