Friday 9th, May 2025
canara news

ಬಾಲಕಿ ಮೇಲೆ ದಿನಸಿ ಅಂಗಡಿ ಮಾಲೀಕನಿಂದ ಅತ್ಯಾಚಾರ !

Published On : 08 Apr 2017   |  Reported By : Bernard J Costa


ಕುಂದಾಪುರ: ಇನ್ನೂ ಪ್ರಪಂಚವನ್ನು ಬೆರಗು ಕಂಗಳಿಂದ ದಿಟ್ಟಿಸುವ ಎಂಟು ವರ್ಷದ ಮುಗ್ಧ ಅಪ್ರಾಪ್ತ ಬಾಲಕಿ ಮೇಲೆ ನಡುವಯಸಿನ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಅತ್ಯಂತ ಕಳವಳಕಾರಿ ಘಟನೆಯೊಂದು ತಾಲೂಕಿನ ಬಿದ್ಕಲ್‍ಕಟ್ಟೆ ಜರಗಿದೆ. ತೀವೃವಾಗಿ ಅಸ್ವಸ್ಥಗೊಂಡಿರುವ . ಬಾಲಕಿ ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ .

ಬಿದ್ಕಲ್‍ಕಟ್ಟೆ ಪೇmಯಲ್ಲಿ ದಿನಸಿ ಅಂಗಡಿ ಹೊಂದಿರುವ ರಾಮದಾಸ್ ಪ್ರಭು(53) ಎಂಬ ವಿಕೃತ ಕಾಮಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ. ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬದವರು ಮೂಲತಃ ಉತ್ತರಕನ್ನಡದವರಾಗಿದ್ದಾರೆ. ಆಕೆಯ ತಂದೆ ಬಿದ್ಕಲ್ ಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮೂಕಿ ಪತ್ನಿ ಹಾಗೂ ಬಾಲಕಿ ಮಗಳ ಜತೆ ಬಿಡಾರ ಹೂಡಿದ್ದ ಎನ್ನಲಾಗಿದೆ. ಮರುದಿನ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿ ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಕೂಡಲೇ ಬಳಿಕ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಅಲ್ಲಿ ಬಾಲಕಿಯನ್ನು ವಿಚಾರಿಸಿದಾಗ ಕೀಚಕ ರಾಮದಾಸ್ ಪ್ರಭುವಿನ ಅಸಹ್ಯ ಕಾಮುಕತನ ಹೊರ ಬಂದಿದೆ.

ಒಂದೆರಡು ದಿನಗಳ ಹಿಂದೆ ಬಾಲಕಿ ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಕಾಮುಕ ರಾಮದಾಸ್ ಬಾಲಕಿಯನ್ನು ಬೆದರಿಸಿ ಕಿರಾತಕ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ. ಬೆದರಿದ ಬಾಲಕಿ ಮನೆಯಲ್ಲೂ ಈ ವಿಚಾರ ತಿಳಿಸಿಲ್ಲ.

ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಲೆಮರೆಸಿಕೊಂಡ ಆರೋಪಿಯ ಬಂಧನ ವಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here