Friday 9th, May 2025
canara news

ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಇದರ 37ನೇ ಸ್ಥಾಪಕ ದಿನಾಚರಣೆ

Published On : 09 Apr 2017   |  Reported By : Rons Bantwal


ನಾಟಕದಿಂದ ಸಂಸ್ಕೃತಿಯ ಅನಾವರಣ ಸಾಧ್ಯ : ಹಾಂಗ್ಯೋ ಪ್ರದೀಪ್ ಪೈ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.09: ಪ್ರಸಕ್ತ ಕಾಲದಲ್ಲಿ ಅದೂ ಯಾಂತ್ರೀಕ ಜೀವನದ ಮಹಾನಗರದಲ್ಲಿ ಸಭಿಕರನ್ನು ಸೆಳೆದು ಒಗ್ಗೂಡಿಸುವುದೇ ದೊಡ್ಡ ಸಾಧನೆ. ಇಂತಹ ಶಕ್ತಿ ನಾಟಕಕ್ಕಿದೆ. ನಾಟಕದಿಂದ ನಮ್ಮ ಸಂಸ್ಕೃತಿಯ ಅನಾವರಣವಾಗುತ್ತದೆ. ಇದು ಇಂದಿಲ್ಲಿ ಕಿಕ್ಕಿರಿದು ತುಂಬಿದ ಕಲಾಭಿಮಾನಿಗಳಿಂದಲೇ ತಿಳಿಯ ಬಹುದು. ಆದರೆ ಯುವಜನತೆಗೆ ಆಕರ್ಷಿಸುವತ್ತ ರಂಗಭೂಮಿ ಸಜ್ಜಾಗಬೇಕು. ಕಾರಣ ಯುವಪೀಳಿಗೆಯಿಂದ ಮಾತ್ರ ಸಮುದಾಯ, ಸಮಾಜದ ಭವಿಷ್ಯ ಸಾಧ್ಯ. ಜಿಎಸ್‍ಬಿ ಸಮುದಾಯದ ಚಿಂತನೆ ಹಾಗೂ ಮನೋಭಾವ ತುಂಬಾ ವಿಶಾಲವಾದದ್ದು. ಸುಶಿಕ್ಷಿತರಾಗಿದ್ದರೂ ಸಾಕ್ಷರತಾ, ಜಾಗತಿಕ ವಿದ್ವತ್ತು ಗಳಿಸಿ ಭವಿಷ್ಯತ್ತಿನ ಜನಾಂಗವನ್ನು ಪ್ರೇರೆಪಿಸುವ ಅಗತ್ಯವಿದೆ. ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಸೆಂಟರ್ ಇದ್ದು ಇದಕ್ಕೆ ಭೇಟಿ ನೀಡಿ ಸಮುದಾಯದ ಪರಂಪರೆಗಳ ಅಧ್ಯಯನ ನಡೆಸಿ. ನಾನು ಕೊಂಕಣಿ ಎನ್ನುವ ಅಭಿಮಾನ ಬೆಳೆಸಿ ಮಾತೃಭಾಷೆಯನ್ನು ಉಳಿಸಿ ಬೆಳೆಸಿ ಎಂದು ಮಂಗಳೂರುನ ಹಾಂಗ್ಯೋ ಐಸ್‍ಕ್ರೀಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರದೀಪ್ ಜಿ.ಪೈ ತಿಳಿಸಿದರು.

ಬೋರಿವಿಲಿ ಪಶ್ಚಿಮದ ಪ್ರಬೋಧಣ್ಕರ್ ಠಾಕ್ರೆ ಸಭಾಗೃಹದಲ್ಲಿ ಇಂದಿಲ್ಲಿ ಶನಿವಾರ ಅಪರಾಹ್ನ ಮಹಾನಗರದಲ್ಲಿ ಹೆಸರಾಂತ ಕಲಾ ಪೆÇೀಷಕ ಸಂಸ್ಥೆ ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಸಂಸ್ಥೆಯ 37ನೇ ಸ್ಥಾಪಕ ದಿನಾಚರಣಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಪ್ರದೀಪ್ ಪೈ ಮಾತನಾಡಿದರು.

ಸಮಾರಂಭದಲ್ಲಿ ಅತಿಥಿüಗಳಾಗಿ ಮಹಾನಗರದ ಹೆಸರಾಂತ ನ್ಯಾಯವಾದಿ ಎಂ.ವಿ ಕಿಣಿ, ಎನ್‍ಕೆಜಿಎಸ್‍ಬಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಕಿಶೋರ್ ಡಿ.ಕುಲ್ಕರ್ಣಿ, ಶ್ಯಾಮರಾವ್ ವಿಠಲ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಉದಯಕುಮಾರ್ ಗುರ್ಕರ್, ನ್ಯಾಚುರಲ್ ಐಸ್‍ಕ್ರೀಮ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ರಘುನಂದನ್ ಎಸ್.ಕಾಮತ್, ಉದ್ಯಮಿಗಳಾದ ಕೆ.ಶ್ರೀನಿವಾಸ ಪ್ರಭು ಹಾಗೂ ಶೋಭಾ ಕುಲ್ಕರ್ಣಿ, ಸ್ಥಾನೀಯ ನಗರ ಸೇವಕ ಜಿತೇಂದ್ರ ಪಾಟೀಲ್ ಉಪಸ್ಥಿತರಿದ್ದು ಸಂಸ್ಥೆಯ ಸುದೀರ್ಘಾವಧಿಯ ಸೇವೆಯನ್ನು ಪ್ರಶಂಸಿ ಉಪಸ್ಥಿತ ತಂಡದ ಕಲಾವಿದರಿಗೆ ಸತ್ಕರಿಸಿದರು.

ರಘುನಂದನ್ ಕಾಮತ್ ಮಾತನಾಡಿ ನಾನು ಐಸ್‍ಕ್ರೀಮ್ ತಯಾರಿಸಲು ಮಾತ್ರ ಕಲಿತಿದ್ದೇನೆ. ಆ ಮೂಲಕ ಕಲಾ ಪೆÇೀಷಣೆಗೆ ಪೆÇ್ರೀತ್ಸಾಹಿಸುತ್ತಿದ್ದು, ಜಿಎಸ್‍ಬಿ ಸಮೂದಾಯದ ಸಂಸ್ಕೃತಿ, ತಿನಿಸು, ರೀತಿ ರಿವಾಜುಗಳ ಸ್ವಾದಯುಕ್ತ ರುಚಿಗಳನ್ನು ಐಸ್‍ಕ್ರೀಮ್ ಮೂಲಕ ಮಾರಾಟ (ಪ್ಲೇವರ್ಸ್ ಸೆಲ್ಲಿಂಗ್ಸ್) ಮಾಡುತ್ತಿದ್ದೇನೆ. ಆದುದರಿಂದ ಜಿಎಸ್‍ಬಿ ಬ್ರಾಂಡ್‍ಗಾಗಿ ಸನ್ಮಾನಿತನಾಗಿರುವುದು ಅಭಿಮಾನವೆಣಿಸುತ್ತದೆ. ಸಂಸ್ಕೃತಿಯಿಂದ ಸಂಸ್ಕಾರಯುತ ಜೀವನ ಸಾಧ್ಯ. ಸಾಂಸ್ಕೃತಿಕವಾಗಿ ಬೆಳೆದ ಗೌಡ ಸಾರಸ್ವತರು ಆಚಾರ ವಿಚಾರವನ್ನು ಎಂದಿಗೂ ಮರೆಯ ಬಾರದು ಎಂದರು.

ನಾಟಕಗಳಂತಹ ಕಾರ್ಯಕ್ರಮದಿಂದ ಒಗ್ಗೂಡುವ ಅವಕಾಶ ಲಭಿಸುತ್ತದೆ. ನಮ್ಮ ಸಂಸ್ಕೃತಿ ಪಸರುತ್ತದೆ ಆದುದರಿಂದ ರಂಗಕಲಾ ಪೆÇೀಷಣೆಗೆ ಪೆÇ್ರೀತ್ಸಹಿಸಬೇಕು ಎಂದು ನ್ಯಾ|ಎಂ.ವಿ ಕಿಣಿ ಕರೆಯಿತ್ತರು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಮುಂಬಯಿ ವಡಾಲಾ ಸಮಿತಿಯ ಕಾರ್ಯಾಧ್ಯಕ್ಷ ಗೋವಿಂದ ಎಸ್.ಭಟ್, ಜಿಎಸ್‍ಬಿ ಗಣೇಶೋತ್ಸವ ಮಂಡಲದ ಕಾರ್ಯಾಧ್ಯಕ್ಷ ಎನ್.ಎನ್ ಪಾಲ್, ನಾಗೇಶ್ ಘೋವ್ಕಾರ್, ಆರ್ಚನಾ ಭಟ್, ಸುಮಂಗಳ ಎಸ್.ಪೈ ಕೋಲಾಪುರ, ಅನುಪಮಾ ಶೆಣೈ, ವಿನಯ ಪೈ, ವಿಜಯಶ್ರೀ ಕಾಮತ್, ಪ್ರಭು, ಸೀಮಾ ಕಾಮತ್, ಶೈಲಾ ಪೈ, ವರ್ಷ ಪ್ರಭು ವಾಮನ ನಾಯಕ ಬಾಲ್ಕೂರು, ಎನ್.ಎಸ್ ಕಾಮತ್ ಖಾರ್‍ದಾಂಡಾ, ವಿನಯ ರಾವ್ ಮತ್ತಿತರರನ್ನು ಶಾಲು ಹೊದಿಸಿ ಸ್ಮರಣಿಕೆಯನ್ನಿತ್ತು ಸತ್ಕರಿಸಲಾಯಿತು.

ಹಿರಿಯ ಕಲಾವಿದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಸಾಣೂರು ಮನೋಹರ್ ಕಾಮತ್, ಉದಯ ಪಡಿಯಾರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಕು| ವರ್ಷ ಪ್ರಭು ಗಣೇಶ ಸ್ತುತಿ ನೃತ್ಯಗೈದರು. ಸಂಗಮ್‍ನ ಕಾರ್ಯಾಧ್ಯಕ್ಷ ಉಲ್ಲಾಸ್ ಡಿ.ಕಾಮತ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳಿಗೆ ಸ್ಮರಣಿಕೆ, ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಉಪ ಕಾರ್ಯಾಧ್ಯಕ್ಷ ಡಾ| ಚಂದ್ರಶೇಖರ್ ಎನ್.ಶೆಣೈ ಅತಿಥಿüಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಾಹಿಸಿ ಅಭಾರ ಮನ್ನಿಸಿದರು. ಮನೋರಂಜನೆಯ ಪ್ರಯುಕ್ತ ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಕಲಾವಿದರು 25ನೇ ಪ್ರದರ್ಶನವಾಗಿ `ಉಣ್ ಉದ್ಕ ಘೊಟ್' (ಬಿಸಿ ನೀರಿನ ಗುಟುಕು) ನಾಟಕ ಪ್ರದರ್ಶಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here