Thursday 8th, May 2025
canara news

ಸಚಿವ ಏಕನಾಥ್ ಶಿಂಧೆ ಮತ್ತು ಮೇಯರ್ ವಿೂನಾಕ್ಷಿ ಪೂಜಾರಿ ಅವರಿಗೆ ಥಾಣೆ ತುಳು ಕನ್ನಡ ಅಭಿಮಾನಿ ಬಳಗದಿಂದ ಸಾರ್ವಜನಿಕ ಸನ್ಮಾನ

Published On : 10 Apr 2017   |  Reported By : Rons Bantwal


ಮುಂಬಯಿ, ಎ.10: ಉಪನಗರ ಥಾಣೆಯ ವಿವಿಧ ತುಳು ಕನ್ನಡ ಸಂಘಟನೆಗಳ ಸಹಯೋಗದೊಂದಿಗೆ ತುಳು ಕನ್ನಡ ಅಭಿಮಾನಿ ಬಳಗ ಥಾಣೆ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಶಿವಸೇನಾ ಪಕ್ಷದ ಧುರೀಣರೂ, ಸ್ಥಾನೀಯ ಶಾಸಕ, ಮಹಾರಾಷ್ಟ್ರ ರಾಜ್ಯದ ಲೋಕೋಪಯೋಗಿ ಸಚಿವ ಏಕನಾಥ್ ಶಿಂಧೆ ಮತ್ತು ಥಾಣೆ ಮಹಾನಗರಪಾಲಿಕೆ (ಟಿಎಂಸಿ)ಯ ಮೇಯರ್ ವಿೂನಾಕ್ಷಿ ಪೂಜಾರಿ ಮತ್ತು ರಾಜೇಂದ್ರ ಶಿಂಧೆ ದಂಪತಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭಗೈದು ಸನ್ಮಾನಿಸಿತು.

ತುಳು ಕನ್ನಡ ಅಭಿಮಾನಿ ಬಳಗ ಅಧ್ಯಕ್ಷ ಮಹೇಶ್ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಸಮಾರಂಭವ ನ್ನು ಉದ್ಯಮಿ ಲಕ್ಷ್ಮಣ್ ಮಣಿಯಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಗಣೇಶ್ ಆರ್.ಪೂಜಾರಿ ಥಾಣೆ, ವಿಶೇಷ ಆಮಂತ್ರಿತರಾಗಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಗೌರವ ಅತಿಥಿsಗಳಾಗಿ ಮಾಜಿ ಶಾಸಕ ಪ್ರತಾಪ್ ಸರ್‍ನಾೈಕ್, ಸ್ಥಾನೀಯ ನಗರ ಸೇವಕರುಗಳಾದ ನರೇಶ್ ಮಣೆರಾ, ಸಿದ್ಧಾರ್ಥ್ ವೊಳೆಕರ್, ನಮ್ರತಾ ರವಿ ಘರ್ತ್, ಸಾಧನಾ ಜೋಶಿ, ಜಯಂತ್ ಎನ್.ಶೆಟ್ಟಿ, ಜಯ ಕೆ.ಶೆಟ್ಟಿ, ಮನೋಜ್ ಎಲ್.ಹೆಗ್ಡೆ, ಶಂಕರ ಶೆಟ್ಟಿ ಶಿಮಂತೂರು, ಅನಂತ ಸಾಲ್ಯಾನ್, ರೇವತಿ ಸದಾನಂದ ಶೆಟ್ಟಿ, ವಿಕ್ರಮಾನಂದ ಶೆಟ್ಟಿ, ರಮೇಶ್ ಕೋಟ್ಯಾನ್, ನಾರಾಯಣ ಸುವರ್ಣ, ಭಾರತಿ ಜೆ.ಬಂಗೇರ, ಸೀತಾರಾಮ ಶೆಟ್ಟಿ, ಭಾರತಿ ಜೆ.ಅಮೀನ್, ಪ್ರವೀಣ್ ಬಿ.ಶೆಟ್ಟಿ, ಗುಣಪಾಲ್ ಶೆಟ್ಟಿ, ಪೂರ್ಣಿಮಾ ಅಮೀನ್, ಗೋಪಾಲ್ ಎಸ್.ಚಂದನ್ ಹಾಜರಿದ್ದು ಸಚಿವ ಶಿಂಧೆ ಹಾಗೂ ಮೇಯರ್ ಶಿಂಧೆ ಅವರಿಗೆ ಸಾರ್ವಜನಿಕವಾಗಿ ಸನ್ಮಾನಿಸಿ ಶುಭಾರೈಸಿದರು.

ಥಾಣೆ ಪರಿಸರ ಶಾಂತಿ ನೆಮ್ಮದಿಯ ತಾಣವಾಗಿದೆ. ಇಲ್ಲಿ ಜಾತಿಧರ್ಮ ಪಕ್ಷದ ಚೌಕಟ್ಟು ಇಲ್ಲದೆ ಯಾವ ಭಾರತೀಯನೂ ನಿಶ್ಚಿಂತೆಯಿಂದ ವ್ಯಾಪಾರವನ್ನೂ ಮಾಡಬಹುದು. ನಾವು ಪ್ರತೀಯೋರ್ವರನ್ನು ಪ್ರೀತಿಸಿ ಸಹೋದರತ್ವದ ಜೀವನವನ್ನು ಮೈಗೂಡಿಸಿ ಬಾಳಿದಾಗ ಸಾಮರಸ್ಯದ ಬದುಕು ಸಾಧ್ಯವಾಗುವುದು. ಆದುದರಿಂದ ಥಾಣೆಯಲ್ಲಿ ಯಾವನೂ ಸುಲಲಿತವಾಗಿ ನಿಶ್ಚಿಂತೆವಿಲ್ಲದೆ ಜೀವಿಸ ಬಹುದು. ಆದರೆ ಇಲ್ಲಿ ದೇಶವಿರೋಧಿ ಚಟುವಟಿಕೆಯಾಗಲೀ, ಉದ್ಯಮಿ, ವ್ಯಾಪರಸ್ಥರಿಗೆ ತ್ರಾಸು ಕೊಡುವುದು ಶಿವಸೇನೆ ಎಂದಿಗೂ ಸಹಿಸದು ಎಂದು ಸನ್ಮಾನಕ್ಕೆ ಉತ್ತರಿಸಿ ಸಚಿವ ಏಕನಾಥ್ ನುಡಿದರು.

ಮೇಯರ್ ವಿೂನಾಕ್ಷಿ ಶಿಂಧೆ ಮಾತನಾಡಿ ಒಂದುಕಾಲದಲ್ಲಿ ಶಿವಸೇನೆ ಎಂದಾಗ ಭಯಬೀಳುವ ತುಳುಕನ್ನಡಿಗರು ಇದೀಗ ಈ ಪಕ್ಷದಿಂದ ಭಯಮುಕ್ತರಾಗಿದ್ದಾರೆ. ಆದುದರಿಂದ ಶಿವಸೇನೆಯಲ್ಲಿ ನಮ್ಮವರು ಪ್ರೀತಿವಿಶ್ವಾಸ ರೂಪಿಸಿ ಕೊಂಡಿದ್ದಾರೆ. ಶಿವಸೇನಾ ಪಕ್ಷದ ಮುತ್ಸದ್ಧಿ ಏಕನಾಥ್ ಶಿಂಧೆ ಅವರು ನನಗಿತ್ತ ಸಹಯೋಗ ನನಗೆ ಮೇಯರ್ ಸ್ಥಾನಾಲಂಕಾರ ಮತ್ತು ಇಂತಹ ಗೌರವಕ್ಕೆ ಕಾರಣವಾಗಿದೆ. ನಾವೆಲ್ಲರೂ ಒಗ್ಗಟ್ಟನ್ನು ಬಲಪಡಿಸಿ ಸಮಾಜದ ಹಿತಕ್ಕಾಗಿ ಶ್ರಮಿಸೋಣ ಎಂದರು.

ಶಿವಸೇನೆಯ ಅಭೂತಪೂರ್ವ ಸಹಕಾರ ಪ್ರೀತಿ, ಅಭಿಮಾನ ವಿೂನಾಕ್ಷಿ ಅವರ ಹ್ಯಾಟ್ರಿಕ್ ಗೆಲುವಿಗೆ ಪೂರಕವಾಗಿದೆ. ಪಕ್ಷದ ಧುರಿಣರು ಕಲ್ಪಿಸಿದ ಅವಕಾಶಕ್ಕೆ ಮುಂಬಯಿ ತುಳುಕನ್ನಡಿಗರೆಲ್ಲರೂ ಅಭಾರಿಯಾಗಿದ್ದೇವೆ. ಮುಂದೆಯೂ ವಿೂನಾಕ್ಷಿ ಅವರೊಂದಿಗೆ ಇನ್ನಷ್ಟು ತುಳುಕನ್ನಡಿಗರು ರಾಜಕೀಯವಾಗಿ ಬೆಳೆದು ಸರ್ವೋನ್ನತ ಸ್ಥಾನಮಾನಗಳನ್ನು ಅಲಂಕರಿಸುವಂತಾಗಲಿ. ಎಂದು ಅಧ್ಯಕ್ಷೀಯ ಭಾಷಣದಲ್ಲಿ ಮಹೇಶ್ ಕರ್ಕೇರ ಆಶಯ ವ್ಯಕ್ತಪಡಿಸಿದರು.

ಥಾಣೆಯ ವಿವಿಧ ತುಳು ಕನ್ನಡ ಸಂಘಟನೆಗಳ ಮುಖ್ಯಸ್ಥರೂ, ಬಳಗದ ಕೋಶಾಧಿಕಾರಿ ವಿನೋದ್ ಎ.ಅಮೀನ್, ಜೊತೆ ಕೋಶಾಧಿಕಾರಿ ಜಯರಾಮ ಪೂಜಾರಿ, ಮಹಿಳಾ ವಿಭಾಗದ ಪ್ರತಿಭಾ ಆನಂದ ಶೆಟ್ಟಿ, ಪೂರ್ಣಿಮಾ ಅಮೀನ್, ಸಲಹಾ ಸಮಿತಿ ಸದಸ್ಯರಾದ ದಯಾನಂದ ಆರ್.ಪೂಜಾರಿ, ಚಂದ್ರಹಾಸ ಎಸ್.ಶೆಟ್ಟಿ, ಅಶೋಕ್ ಎಂ.ಕೋಟ್ಯಾನ್, ಪ್ರಶಾಂತ್ ನಾಯಕ್, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಡಿ.ಸಾಲ್ಯಾನ್, ಕಾರ್ಯದರ್ಶಿ ಅಶೋಕ್ ಸಸಿಹಿತ್ಲು ಕಲ್ವಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅತಿಥಿsವರ್ಯರು ಸಂದರ್ಭೋಚಿತವಾಗಿ ಮಾತನಾಡಿ ಸನ್ಮಾನಿತರನ್ನು ಅಭಿನಂದಿಸಿದರು.

ಕನ್ನಡ ಅಭಿಮಾನಿ ಬಳಗದ ಸಂಚಾಲಕ ಶ್ರೀಧರ ಉಚ್ಚಿಲ್ ಮುಂದಾಳುತ್ವದಲ್ಲಿ ನಡೆಸಲ್ಪಟ್ಟ ಅದ್ದೂರಿ ವೈಭವೋಪೇತ ಕಾರ್ಯಕ್ರಮಕ್ಕೆ ಬಳಗದ ಕಾರ್ಯದರ್ಶಿ ಸುನೀಲ್ ಜೆ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಜೊತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ ಹಾಗೂ ರಘುವೀರ ಹೆಗ್ಡೆ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದಾಧಿಕಾರಿಗಳು ಅತಿಥಿüವರ್ಯರಿಗೆ ಸ್ಮರಣಿಕೆ, ಪುಷ್ಫಗುಪ್ಚವನ್ನಿತ್ತು ಗೌರವಿಸಿದರು.ಸುನೀಲ್ ಜೆ.ಶೆಟ್ಟಿ ವಂದಿಸಿದರು.

ಸಂಜೆ ಸ್ಥಾನೀಯ ಘೋಡ್‍ಬಂದರ್‍ನ ವಾಗ್ಬಿಲ್‍ನಾಕದಿಂದ ತುಳುನಾಡ ಕಲಾ ಜಾನಪದ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾ ಪ್ರಕಾರಗಳ ಭವ್ಯ ಮೆರವಣಿಗೆಯಲ್ಲಿ ಸನ್ಮಾನಿತರು ಹಾಗೂ ಅತಿಥಿüಗಣ್ಯರನ್ನು ವೇದಿಕೆಗೆ ಬರಮಾಡಿ ಕೊಳ್ಳಲಾಯಿತು. ಬಳಿಕ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮೀರಾರೋಡ್ ಸ್ಥಳಿಯ ಸಮಿತಿ ಯುವ ವಿಭಾಗವು ದೇಶಭಕ್ತಿ ಸಾರುವ ಸೋಲ್ಜರ್ ನೃತ್ಯರೂಪಕವನ್ನು, ಅಶೋಕ್ ಕೊಡ್ಯಡ್ಕ ಮುಂದಾಳುತ್ವದಲ್ಲಿ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ರವಿ ಹೆಗ್ಡೆ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here