Thursday 8th, May 2025
canara news

‘ತ್ರಿವರ್ಣ ಬೇಸಿಗೆ ಶಿಬಿರ’ ಉದ್ಘಾಟನೆ

Published On : 10 Apr 2017   |  Reported By : Bernard J Costa


ಸೃಜನಾತ್ಮಕ ಚಿಂತನೆಯನ್ನು ಬಲ ಪಡಿಸುವುದು ಕಲೆ.

ಸೃಜನಾತ್ಮಕ ಚಿಂತನೆಯನ್ನು ಬಲ ಪಡಿಸುವುದು ಕಲೆ.ಇದು ಪಠ್ಯಪುಸ್ತಕದ ಶಿಕ್ಷಣಕ್ಕಿಂತ ಕರಕುಶಲ ಚಟುವಟಿಕೆಯ ಶಿಕ್ಷಣ ಹೆಚ್ಚು ಮಹತ್ವದಾಯಕವಾಗಿರುತ್ತದೆ. ಈ ಸಮಾಕಾಲೀನತೆಯಲ್ಲಿ ನಾನಾ ಕಲಾಪ್ರಕಾರ ಅಥವಾ ಕಲಾಚಟುವಟಿಕೆಗಳು ಇಂತಹ ಶಿಬಿರದಿಂದ ಮಾತ್ರ ಸದುಪಯೋಗ ಪಡೆದುಕೊಳ್ಳಲು ಸಾಧ್ಯ ಎಂದು ಕುಂದಾಪುರದ ನಿವೃತ ಹಿರಿಯ ಶಿಕ್ಷಕ ಮತ್ತು ರಾಜ್ಯ ರಾಜೀವ ಗಾಂಧಿ ಪ್ರಶಸ್ತಿ ವಿಜೇತ ಶ್ರೀ ಗಂಗಾಧರ ಐತಾಳ್ ಉದ್ಘಾಟಿಸಿ, ತ್ರಿವರ್ಣ ಕಲಾ ಕೇಂದ್ರ, ಮಣಿಪಾಲದಲ್ಲಿ 10 ದಿನಗಳ ಕಲಾ ಶಿಬಿರಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಡುಪಿಯ ಆನಂದ್ ದಂತ ಮತ್ತು ವಕ್ರದಂತ ಚಿಕಿತ್ಸಾಲಯದ ವೈಧ್ಯರಾದ ಡಾ. ಪ್ರವೀಣ್ ಶೆಟ್ಟಿ ಕೊಡ್ಲಾಡಿ ಮತ್ತು ಉಡುಪಿ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಶಿಕ್ಷಕ ಶ್ರೀ ರಾಘವೇಂದ್ರ ಕೆ. ಅಮೀನ್ ತ್ರಿವರ್ಣ ಕಲಾ ಕೇಂದ್ರದ ಮುಖ್ಯಸ್ಥ ಹರೀಶ್ ಸಾಗಾ, ಶಿಕ್ಷಕಿ ಪವಿತ್ರ ಸಿ.,ನಯನಾ ವೇದಿಕೆಯಲ್ಲಿ ಉಪಸ್ಥಿತಲಿದ್ದರು.

ಸಮಾರಂಭದಲ್ಲಿ ಕಲಾವಿದ್ಯಾರ್ಥಿ ಆಸ್ತಿಕ್ ಪ್ರಾರ್ಥನೆಯನ್ನು, ಶಿಕ್ಷಕಿ ಪವಿತ್ರ ಸಿ. ಕಾರ್ಯಕ್ರಮ ನಿರೂಪಿಸಿದ್ದು, ವಂದನಾರ್ಪಣೆಯನ್ನು ಕಲಾವಿದ್ಯಾರ್ಥಿನಿ ಶ್ರೀಯಾ ಮಾಡಿದರು.

ವ್ಯಕ್ತಿತ್ವ ವಿಕಸನದ ತರಗತಿಗಳು, ವೈವಿಧ್ಯತೆಯುಳ್ಳ ಕಲಾಕೃತಿಗಳು ಕಲೆಯ ವಿವಿಧ ಪ್ರಕಾರಗಳನ್ನು ತಿಳಿಯ ಪಡಿಸುವ ಶಿಬಿರ ದಿನಾಂಕ 104.2017 ರಿಂದ 19.4.2017 ಬುಧವಾರದವರೆಗೆ ಸಮಯ ಬೆಳಿಗ್ಗೆ 10.00 ರಿಂದ ಸಂಜೆ 4.00ಗಂಟೆಯ ತನಕ ತರಭೇತಿಗೊಳಿಸಲಾಗುತ್ತಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here