Friday 19th, April 2024
canara news

ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರ ಅವರಿಗೆ `ಮಾಧ್ಯಮಶ್ರೀ' ಪ್ರಶಸ್ತಿ ಪ್ರದಾನ

Published On : 11 Apr 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಎ.11: ಕುಂಠಿನಿ ಪ್ರಕಾಶ್ ಹೆಗ್ಡೆ ಪ್ರಕಾಶನದ ಛಾಯಾಕಿರಣ ಕನ್ನಡ ಮಾಸಿಕದ 3ನೇ ವಾರ್ಷಿಕ ಸಂಭ್ರಮ ಇಂದಿಲ್ಲಿ ಭಾನುವಾರ ಸಂಜೆ ಉಪನಗರ ಕಲ್ಯಾಣ್ ಪಶ್ಚಿಮದ ಜೋಕರ್ ಪ್ಲಾಜ್ಹಾ ಕಾಂಪ್ಲೆಕ್ಸ್‍ನ ಶ್ರೀಮತಿ ಗಿರಿಜಾ ಪಯ್ಯಡೆ ಸಭಾಗೃಹದಲ್ಲಿ ಜರುಗಲಿದ್ದು ಕಾರ್ಯಕ್ರಮದಲ್ಲಿ ಕರ್ನಾಟಕ ಕರಾವಳಿ ಕಡಲತಡಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಪೆÇಲಿಪು ಮೂಲದ ಹಿರಿಯ ಪತ್ರಕರ್ತ, ಮುಂಬಯಿಯ ಪ್ರಸಾರವಾಗುತ್ತಿರುವ ಏಕೈಕ ಕನ್ನಡ ದೃಶ್ಯವಾಹಿನಿ `ಮುಂಬಯಿ ನ್ಯೂಸ್'ನ ಸುದ್ದಿ ಸಂಪಾದಕ ಹೇಮರಾಜ್ ಕರ್ಕೇರ ಅವರಿಗೆ `ಮಾಧ್ಯಮಶ್ರೀ' ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು.

ಮಹಾರಾಷ್ಟ್ರ ಸರಕಾರದ ವಿಶೇಷ ಸರಕಾರಿ ಅಭಿಯೋಜಕ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಕವಿ ಡಾ| ಸುನೀತಾ ಎಂ.ಶೆಟ್ಟಿ, ಪತ್ರಕರ್ತ ವಾಣಿಪ್ರಸಾದ್ ಎನ್.ಕರ್ಕೇರ ಉಪಸ್ಥಿತರಿದ್ದು, ಕಲ್ಯಾಣ್‍ನ ಜಸ್ಮೀನ್ ಸಮೂಹದ ಕಾರ್ಯಾಧ್ಯಕ್ಷ ಡಾ| ಸುರೇಂದ್ರ ವಿ.ಶೆಟ್ಟಿ, ಉದ್ಯಮಿಗಳಾದ ಪ್ರಭಾಕರ್ ಜೆ.ಶೆಟ್ಟಿ, ಭಾಸ್ಕರ್ ಎಸ್.ಶೆಟ್ಟಿ (ಗುರುದೇವ್), ಸತೀಶ್ ಎನ್.ಶೆಟ್ಟಿ, ಸಮಾಜ ಸೇವಕ ಇಂ| ಟಿ.ಎಸ್ ಉಪಾಧ್ಯಾಯ, ಕೆಡಿಎಂಸಿಯ ನಗರ ಸೇವಕ ದಯಾಶಂಕರ್ ಪಿ.ಶೆಟ್ಟಿ ಅವರಿಗೆ ಸ್ವರ್ಣ ಗೌರವ ನೀಡಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಛಾಯಾಕಿರಣ ಕನ್ನಡ ಮಾಸಿಕದ ಗೌರವ ಸಂಪಾದಕ ಬಿ.ಎಸ್ ಕುರ್ಕಾಲ್, ಪ್ರಧಾನ ಸಂಪಾದಕ ಕುಂಠಿನಿ ಪ್ರಕಾಶ್ ಹೆಗ್ಡೆ, ಸಹ ಸಂಪಾದಕಿ ಶಾಲಿನಿ ಅಜೆಕಾರು, ಉಪ ಸಂಪಾದಕಿ ಜ್ಯೋತಿ ಪಿ.ಕುಂಠಿನಿ ಉಪಸ್ಥಿತರಿದ್ದು ನಗರದಲ್ಲಿನ ಕವಿವರ್ಯರಿಂದ ಕವಿಗೋಷ್ಠಿ ನಡೆಸಲ್ಪಟ್ಟಿತು. ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕನ್ನಡಮ್ಮನ ಸುಂದರ ಸೆರಗೂ, ಬೆರಗೂ ಆದ ಕರ್ನಾಟಕ ಕರಾವಳಿ ಕಡಲತಡಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾಪು ಪೆÇಲಿಪು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಕರ್ಕೇರ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಕರ್ಕೇರ ದಂಪತಿಗಳ ಸುಪುತ್ರರಾಗಿ ಜನಿಸಿದ ಹೇಮ್‍ರಾಜ್ ಉಡುಪಿ ಎಂಜಿಎಂ ಕಾಲೇಜ್‍ನಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ಮಂಗಳೂರು ಪಾಲಿಟೆಕ್ನಿಕ್‍ನಲ್ಲಿ ಶಿಕ್ಷಣ ಪೂರೈಸಿ ವೃತ್ತಿ ಹರಸಿ ಮುಂಬಯಿಗೆ ವಲಸೆ ಬಂದ ಅಪ್ರತಿಮ ಪತ್ರಕರ್ತ.

ಬೆಂಗಳೂರುನ ಹಿರಿಯ ಪತ್ರಕರ್ತ, ಪೆÇೀಲಿಸ್‍ನ್ಯೂಸ್, ಕರ್ನಾಟಕ ಮಲ್ಲ ಪತ್ರಿಕೆಗಳ ಜನಕ ಎಂ.ಮಲ್ಲಿಕಾರ್ಜುನಯ್ಯ ಅವರ ಪರಿಚಯ ಮುಖೇನ ಮುಂಬಯಿಯಲ್ಲಿ ಕರ್ನಾಟಕಮಲ್ಲ ದೈನಿಕದ ಆದಿಯಲ್ಲೇ ಪ್ರಸರಣಾಧಿಕಾರಿಯಾಗಿ ನಿಷ್ಠನಾಗಿ ಸೇವೆ ಸಲ್ಲಿಸಿದವರು. ಮುಂಬಯಿಯಲ್ಲಿನ ಏಕೈಕ ಈ ಕನ್ನಡ ದೈನಿಕ ಸ್ಥಗಿತಗೊಳ್ಳುವ ಸಂಧಿಗ್ಧ ಸನ್ನಿವೇಶದಲ್ಲೂ ಕರ್ಮಭೂಮಿಯಲ್ಲಿ ಕನ್ನಡ ದೈನಿಕ ಒಂದು ಬೇಕೇ ಬೇಕೆಂಬ ಹಠದಿಂದಾಗಿ ಯಾರಿಂದಲೂ ಒಂದಷ್ಟು ಸಾಲಹಣ ಪಡೆದು ಪತ್ರಿಕೆಯನ್ನು ಮುನ್ನಡೆಸಿ, ಕನ್ನಡವನ್ನು ಉಳಿಸುವ ಕೈಂಕರ್ಯದಲ್ಲಿ ತೊಡಗಿಸಿ ಕೊಂಡ ಕನ್ನಢಾಂಭೆಯ ಸುಪುತ್ರನೀತ. ಅನುಭವಕ್ಕೆ ಬಂದ ಅಹಿತಕರ ಘಟನೆಗಳಿಂದಾಗಿ ಕಹಿ ನೆನಪುಗಳನ್ನು ಹೊತ್ತು ಆ ದೈನಿಕ ಪತ್ರಿಕೆಯಿಂದ ಹೊರ ಬಂದು, ಅನುಭವ ಮತ್ತು ಛಲದಿಂದ ಮಿತ್ರರೋರ್ವನ ಸಹಾಯದಿಂದ `ಉದಯ ದೀಪ' ಪತ್ರಿಕೆ ಆರಂಭಿಸಿದ ಪತ್ರಕರ್ತ. ಹಗಲು ರಾತ್ರಿ ಎನ್ನದೆ ಶ್ರಮಿಸಿ ಪತ್ರಿಕಾ ವೃತ್ತಿ ವಲಯದಲ್ಲಿ ತಲ್ಲೀನರಾಗಿ ಮುಂಬಯಿಯಲ್ಲಿ ಕನ್ನಡದ ವರದಿಗಳನ್ನು ಸಂಪಾದಿಸಿ ಓದುಗರ ಮನೆಮನಗಳನ್ನು ತಲುಪಿಸಲು ಹೇಮರಾಜ್ ಪಟ್ಟ ಕಷ್ಟನಷ್ಟಗಳು ಅಷ್ಟಿಷ್ಟಲ್ಲ. ವೃತ್ತಿಯಲ್ಲಿ ದೈನಂದಿನ ಸವಾಲುಗಳನ್ನು ಎದುರಿಸುತ್ತಲೇ ಸಮಾಜದ ಮುನ್ನಡೆಗೆ ಕಂಕಣಬದ್ಧರಾದ ಅಪ್ರತಿಮ ಪತ್ರಕರ್ತ ಹೇಮ್‍ರಾಜ್ ಎನ್ನುವುದರಲ್ಲಿ ಎರಡು ಮಾತುಗಳಿಲ್ಲ. ಇವರು ಕನ್ನಡಿಗರ ಬಗ್ಗೆ ಮಾಡಿದ ವರದಿಗಳು ಫಲಪ್ರದ ಎಂದು ಜನತೆ ಇಂದಿಗೂ ಪರಿಭಾವಿಸಿದ್ದಾರೆ. ಆದುದರಿಂದಲೇ ಆಗಲೂ ಈಗಲೂ ಇವರನ್ನು ಪತ್ರಿಕಾ ವಿದ್ವಾಂಸ ಎಂದೇ ತಿಳಿದವರಿದ್ದಾರೆ. ಪತ್ರಕರ್ತರ ನಡುವೆ ಭಿನ್ನವಾಗಿ ಕಾಣಿಸಿಕೊಂಡರೂ ಇವರ ಅನನ್ಯ ಸೇವೆ ಗುರುತರವಾದದ್ದು. ಶ್ರಮಜೀವಿಗರಲ್ಲಿ ನಿಷ್ಠಾವಂತ ಪತ್ರಕರ್ತ ಎಂಬ ಅಭಿದಾನಕ್ಕೆ ಹೇಮ್‍ರಾಜ್ ಪಾತ್ರರಾಗಿದ್ದಾರೆ. ಆದರೆ ಪ್ರಸಕ್ತ ಕಾಲಾವಧಿಯ ಅಂಚಿನಲ್ಲಿ ನಿಂತು ಸಂದು ಹೋದದ್ದನ್ನು ಅವಲೋಕಿಸಿದಾಗ ಪತ್ರಕರ್ತನೋರ್ವ ಮಾಡಿದ ಕೆಲಸವನ್ನೇ ಮರೆತ ನಾವುಗಳು ನಿಷ್ಠಾವಂತ ಪತ್ರಕರ್ತನನ್ನು ಮರೆದಂತಿದ್ದೇವೆ ಎಂದರೂ ತಪ್ಪಾಗಲಾರದು. ಪತ್ರಕರ್ತ ತರುಣಮಿತ್ರರು ಹೇಮ್‍ರಾಜ್ ಅವರಂತಹ ಪತ್ರಕರ್ತರನ್ನು ಗಮನಿಸುವುದು ಅತ್ಯವಶ್ಯ ಎಂದೇಳಲು ಇಚ್ಛಿಸುತ್ತೇನೆ.

ಸಮಾಜದ ಪ್ರಬಲ ಧ್ವನಿ ಮತ್ತು ಒಂದು ಬಲಾಢ್ಯ ಶಕ್ತಿಯಾಗಿರುವ ಮಾಧ್ಯಮ ಕ್ಷೇತ್ರ ಮತ್ತಷ್ಟು ಹೊಸತನಗಳಿಗೆ ತವಕಿಸುತ್ತಿವೆ. ಆದರೆ ಹೊಸತಾಗಿ ಪತ್ರಿಕೋದ್ಯಮಕ್ಕೆ ಬಂದವರಲ್ಲಿ ಪ್ರತಿಭೆಗೇನೂ ಕೊರತೆ ಇಲ್ಲವಾದರೂ, ಸದ್ಯ ಬಹುತೇಕ ಪತ್ರಕರ್ತರಲ್ಲಿ ಜರ್ನಲಿಸಂ ಅರಿವು ಮತ್ತು ಮಹತ್ವ ವ್ಯಾಪಕ ಅಧ್ಯಯನಕ್ಕೆ ಮನಸ್ಸು ತೆರೆದು ಕೊಂಡಿಲ್ಲ ಎನ್ನುವುದೇ ಆಶ್ಚರ್ಯದಾಯಕ. ಸದ್ಯ ಶ್ರಮವಿಲ್ಲದೆ ಕೆಲಸ ಮಾಡುವ ಪತ್ರಕರ್ತರ ಸಂಖ್ಯೆ ಬಹಳಷ್ಟಿರುವುದು ಲೋಕ ಕಂಡ ಸತ್ಯವಾಗಿದೆ. ಆದರೂ ಯಾವುದನ್ನೇ ಈ ಕಾಲಘಟ್ಟದಲ್ಲಿ ಪತ್ರಕರ್ತರ ನಡಿಗೆಗೆ ಅಧಿಕ ಜವಾಬ್ದಾರಿ ಇದೆ ಎನ್ನುವ ಅರಿವು ಮೂಡಿಸಿ ಕೊಂಡಿರುವ ಹೇಮ್‍ರಾಜ್‍ಗೆ ವೃತ್ತಿಜೀವನದ ಶಿಖರ ಏರಿ ಹೋಗಲು ಪತ್ರಿಕೋದ್ಯಮ ಸಾಥ್ ನೀಡಿಲ್ಲವಾದರೂ ಸೌಖ್ಯ ಮತ್ತು ಸಂತುಷ್ಟ ಬದುಕಿಗೆ ಪ್ರೇರಣೆ ಒದಗಿದೆ. ಈ ಮೂಲಕ ಪತ್ರಿಕಾ ಕ್ಷೇತದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಂತೃಪ್ತಿ ನನಗಿದೆ ಎನ್ನುತ್ತಾ ಮುಗುಳ್ನಗೆ ಬೀರುತ್ತಾರೆ ಹೇಮರಾಜ್.

ಪತ್ರಿಕಾ ವೃತ್ತಿ ಏನೂ ಸಾಮಾನ್ಯ ವೃತ್ತಿಯಂತಲ್ಲ. ಆದರೂ ಕಳೆದ ಸುಮಾರು ಮೂರುವರೆ ದಶಕಗಳಿಂದ ಯಾವುದೇ ಪ್ರಯಾಸವಿಲ್ಲದ ದಾಟಿ ಈಗಲೂ ಚೈತನ್ಯದ ಚಿಲುಮೆಯಂತಿರುವ ಹೇಮ್‍ರಾಜ್ ಸಮಾಜದಲ್ಲಿ ಅಪರೂಪದ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ. ಇವರೋರ್ವ ಪದವೀಧರ ಕನ್ನಡದ ಅಪ್ರತಿಮ ಪ್ರತಿಭಾವಂತ. ಬಹುತೇಕ ನೆಲೆಗಳಲ್ಲಿ ಇವರ ಧಾರಣಾಶಕ್ತಿ ಅದರ ಸಂಚಯನ ಅನನ್ಯವೆಂದೇ ಹೇಳಬೇಕು. ತನ್ನ ಪ್ರತೀಯೊಂದು ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿ ನಿಷ್ಠುರವೆನಿಸಿದವರು. ಆದರೆ ಹರಿಯುವ ಜಲದಂತಿರ ಬೇಕಾಗಿದ್ದ ಹೇಮರಾಜ್ ಸ್ವ್ವಾಸ್ಥ ್ಯ ಸಮಾಜದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದರೂ ಪ್ರಾಮಾಣಿಕತೆಯಿಂದಾಗಿ ನಿಂತ ನೀರಿನಂತೆ ಉಳಿದಿರಲು ಇವರ ನಿಷ್ಠೆಗೆ ಪ್ರಾಮಾಣಿಕರ ಪೆÇ್ರೀತ್ಸಹ ಸಿಗದಿರುವುದೇ ಕಾರಣವೆನೋ.

ಪತ್ರಿಕೋದ್ಯಮದ ಇತಿಮಿತಿಯೊಳಗೆ ಸಜ್ಜನಿಕೆಯಿಂದ ಕೆಲಸ ಮಾಡಿದ ವಿಭಿನ್ನ ವ್ಯಕ್ತಿತ್ವದ ಸರಳ ಸಜ್ಜನರಾದ ಹೇಮರಾಜ್ ಕಳೆದ ಸುಮಾರು ಎಂದುವರೆ ದಶಕದಿಂದ ಮುಂಬಯಿ ಮಹಾನಗರದಿಂದ ಪ್ರಸಾರವಾಗುತ್ತಿರುವ ಏಕೈಕ ಕನ್ನಡ ವಿದ್ಯುನ್ಮಾನ ದೃಶ್ಯವಾಹಿನಿ `ಮುಂಬಯಿ ನ್ಯೂಸ್'ನ ಸುದ್ದಿ ಸಂಪಾದಕರಾಗಿ ಪ್ರಾಮಾಣಿಕತೆ ಹಾಗೂ ಸಕಾರಾತ್ಮಕ ದುಡಿಮೆ ಸ್ತುತ್ಯರ್ಹ. ಸರಳ ಜೀವನ ನಡೆಸುತ್ತಿರುವ ಧೀಮಂತ ಕನ್ನಡಿಗರಾದ ಹೇಮ್‍ರಾಜ್ ಪತ್ರಿಕೋದ್ಯಮದಲ್ಲಿ ನಿಷ್ಕಾಲಂಕ, ಅನನ್ಯ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ. ಜರ್ನಲಿಸಂ ಅರಿವಿಲ್ಲದೆ ಸ್ವಯಂ ಘೋಷಿತವಾಗಿ `ಶ್ರೇಷ್ಠ ಪತ್ರಕರ್ತ'ರೆಂದು ಗುರುತಿಸಿ ಕೊಳ್ಳುವ ಪತ್ರಕರ್ತರು ಇದನ್ನು ತಿಳಿದುಕೊಳ್ಳುವ ಅವಶ್ಯವಿದೆ. ಇಂತಹ ಸೌಮ್ಯತನ, ಸರಳ ಸ್ವರೂಪದ ಪತ್ರಕರ್ತನಾಗಿ ಮುಂಬಯಿ ಸೇರಿಕೊಂಡು ಕನ್ನಡಕ್ಕೆ ದಕ್ಕಿದ ಭಾಗ್ಯವೆಂದು ಹೇಳಬೇಕು. ಖಂಡಿತವಾಗಿ ಪತ್ರಿಕೋದ್ಯಮದಲ್ಲಿ ಇವರದ್ದು ಅಚ್ಚಳಿಯದ ಹೆಜ್ಜೆಗುರುತುಗಳು. ಪತ್ರಿಕೋದ್ಯಮ, ಸಾಹಿತ್ಯ ಎಲ್ಲವೂ ಅವರ ಜೀವಧಾತು. ವಿಷಯಗಳನ್ನು ನಿಕಷಕ್ಕೆ ಒಡ್ಡುತ್ತಲೇ ಅವನ್ನು ಕನ್ನಡ ಲೋಕದ ಮುಂದೆ ಅನಾವರಣಗೊಳಿಸುವ ಪರಿ ಅವರಿಗೆ ಮಾತ್ರ ದಕ್ಕಿದ ಶಕ್ತಿ. ಇವರ ವೃತ್ತಿನಿಷ್ಠೆಯಂತೂ ಪ್ರಶ್ನಿಸುವಂತೆಯೇ ಇಲ್ಲ. ಬರವಣಿಗೆಯ ಸಾಮರ್ಥ್ಯ ವಿಶಿಷ್ಟವಾಗಿದ್ದು ವರದಿಗಾರಿಕೆಯಲ್ಲೂ ದೊಡ್ಡ ಹೆಸರು ಮಾಡಿದ್ದಾರೆ. ವೃತ್ತಿ ಪ್ರೀತಿಯ ಇವರು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅಪಾರ ಸೇವೆ, ವರದಿಗಾರಿಕೆಯ ಸುದೀರ್ಘ ಪಯಣ ಗಮನೀಯ. ಸುದೀರ್ಘ ಸಮಯ ಪತ್ರಿಕೋದ್ಯಮದಲ್ಲೇ ಜೀವನ ಕಳೆದದ್ದು ಸಾಧಾರಣ ಸಂಗತಿಯೇನೂ ಅಲ್ಲ. ಕೇವಲ ಪತ್ರಕರ್ತನಾಗಿರುವುದು ಎಷ್ಟು ಕಷ್ಟ ಎನ್ನುವುದು ಈ ವೃತ್ತಿಯಲ್ಲಿ ತೊಡಗಿಸಿ ಕೊಂಡವರಿಗಷ್ಟೇ ಅರಿವಿಗೆ ಬರುವಂಥಂದ್ದು. ಬರೇ ಪತ್ರಿಕೋದ್ಯಮದೊಂದಿಗೆ ಕನ್ನಡಿಗರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಾರ್ಥಕ ಬದುಕು ಕಂಡ ಧೀಮಂತ ಪತ್ರಕರೂ ಹೌದು. ಕಠಿಣ ಪರಿಶ್ರಮದಿಂದ ಈ ಸಾಧನೆಯ ಮೆಟ್ಟಿಲು ಏರಿರುವುದು ನಿಮ್ಮ ಶ್ರಮದಾಯಕ ಸೇವೆಗೆ ಸಂದ ಗೌರವವಾಗಿದೆ.

ನಾವು ಹಿರಿಯರನ್ನು ಗುರುಸಿದಾಗ ನಮ್ಮ ಕಿರಿಯರು ನಮ್ಮನ್ನು ಗುರುತಿಸಿ ಗೌರವಿಸುತ್ತಾರೆ. ಕನ್ನಡ ಪತ್ರಿಕಾರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿ ಈ ಪ್ರಶಸ್ತಿಗೆ ಆಯ್ಕೆಯಾದ ತಮ್ಮ ಸೇವೆ ಗಮನಾರ್ಹವಾದದ್ದು. ಮುಂಬಯಿಯ ಹಿರಿಯ ಏಕೈಕ ಪತ್ರಕರ್ತಎಂಬ ಕೀರ್ತಿಗೂ ಇಂತಹ ಪ್ರತಿಭೆಗೆ ಈಗಲಾದರೂ ಮಾನ್ಯತೆ ಗೌರವ ಸಿಗುವುದು ನಿಜಕ್ಕೂ ಹೆಮ್ಮೆಯ ವಿಷಯ. ಸುಮಾರು 30 ವರ್ಷಗಳಿಂದಲೂ ಹೇಮರಾಜ್ ನಿರಂತರವಾಗಿ ಪತ್ರಿಕೋದ್ಯಮದಲ್ಲೇ ಜೀವನ ಕಂಡುಕೊಂಡು ಈಗಲೂ ಕ್ರಿಯಾಶೀಲರಾಗಿದ್ದಾರೆ. ಪತ್ರಿಕೋದ್ಯಮ ವೃತ್ತಿ ಬದುಕಿನ ಸಾರ್ಥಕತೆ ಕಂಡ ಹೇಮರಾಜ್ ಅವರದ್ದು ಯುವ ಪೀಳಿಗೆ ಮಾದರಿ ವ್ಯಕ್ತಿತ್ವ. ಬರೇ ಪತ್ರಿಕೋದ್ಯಮದ ಚೌಕಟ್ಟಿನ ಒಳಗೆನೇ ಜೀವಮಾನ ಕಳೆದ ಬದುಕು ತೃಪ್ತಿ ತಂದಭಾವ. ಇದೀಗ `ಮಾಧ್ಯಮಶ್ರೀ' ಪ್ರಶಸ್ತಿ ಮುಡಿಗೇರಿಸಿ ಕೊಳ್ಳುವ ಹೇಮರಾಜ್ ಕರ್ಕೇರ ನಿಮ್ಮ ಪ್ರಾಮಾಣಿಕ ಮತ್ತು ಅವಿರತ ಸಾಧನೆಗೆ ನಮ್ಮದೊಂದು ಸೆಲ್ಯೂಟ್.

ಹೇಮ್‍ರಾಜ್ ಅವರ ಬಾಳ ಸಂಗಾತಿ ಸುಪ್ರೀತಾ ಹೇಮ್‍ರಾಜ್ ಸಹಯೋಗವೂ ಸ್ಮರಣೀಯ. ಈಗಲೂ ಪತ್ರಕರ್ತನಾಗಿ ಕ್ರಿಯಾಶೀಲತೆಯಿಂದ ಕೆಲಸ ಮಾಡಿ ಎಲ್ಲರಲ್ಲೂ ಮೆಚ್ಚುಗೆ ಗಳಿಸಿದ ಇವರಿಗೆ ಶುಭಕಾಮನೆಗಳು. ಪತ್ನಿ ಸುಪ್ರೀತಾ ಮತ್ತು ಏಕಪುತ್ರ ಪ್ರಥಮ್‍ರಾಜ್ ಅವರೊಂದಿಗೆ ಸುಖಸಂಸಾರ ನಡೆಸುತ್ತಿರುವ ಹೇಮರಾಜ್ ಪರಿವಾರಕ್ಕೆ ದೀರ್ಘಾಯುರೋಗ್ಯ ಭಾಗ್ಯ ಪ್ರಾಪ್ತಿಯಾಗಲಿ. ವರಿಷ್ಠ ಪತ್ರಕರ್ತ ಹೇಮ್‍ರಾಜ್‍ರ ಅನನ್ಯ ಸೇವೆ ಸದಾ ಗುರುತರವಾಗಿ ಮೆರೆಯಲಿ ಮತ್ತು ಉದಯೋನ್ಮುಖ ಪತ್ರಕರ್ತರಿಗೆ ವರವಾಗಲಿ ಎಂದೇ ಹಾರೈಕೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here