Thursday 8th, May 2025
canara news

ತುಂಬಿ ತುಳುಕುತ್ತಿದೆ ಮಂಗಳೂರು ಜೈಲು, ಖೈದಿಗಳಿಗಿಲ್ಲ ಜಾಗ

Published On : 13 Apr 2017   |  Reported By : Canaranews Network


ಮಂಗಳೂರು: ನಾನಾ ಕಾರಣಗಳಿಂದ ಸುದ್ದಿಯಲ್ಲಿದ್ದ ಮಂಗಳೂರು ಜೈಲು ಇದೀಗ ಖೈದಿಗಳಿಗೆ ಜಾಗವಿಲ್ಲದೆ ಸುದ್ದಿಯಾಗಿದೆ. 210 ಮಂದಿ ಖೈದಿಗಳನ್ನು ಇರಿಸಬಹುದಾದ ಮಂಗಳೂರು ಕೇಂದ್ರ ಕಾರಾಗೃಹದಲ್ಲೀಗ ಸಾಮರ್ಥ್ಯಕ್ಕೂ ಮಿಕ್ಕಿ ಖೈದಿಗಳನ್ನು ಕುರಿಗಳಂತೆ ತುಂಬಿಸುವ ಮೂಲಕ ಇಡೀ ಜೈಲು ಹೌಸ್ ಫುಲ್ ಆಗಿದೆ. ಸದ್ಯ 424 ಮಂದಿ ಖೈದಿಗಳು ಜೈಲಿನಲ್ಲಿರುವ ಕಾರಣ ಭದ್ರತೆಯ ವಿಚಾರದಲ್ಲಿಯೂ ಆತಂಕ ಎದುರಾಗಿದೆ.

ಇನ್ನು ಇದರಿಂದಾಗಿ ಖೈದಿಗಳ ಚಲನ ವಲನಗಳ ಮೇಲೆ ವೈಯಕ್ತಿಕವಾಗಿ ನಿಗಾ ಇರಿಸಲಾಗದಂತಹ ಒತ್ತಡದ ಸ್ಥಿತಿಯನ್ನು ಇಲ್ಲಿನ ಸಿಬ್ಬಂದಿ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಗಂಭೀರ ಸ್ವರೂಪದ ಅಪರಾಧ ಎಸಗಿದವರು ಮತ್ತು ಕೋಮು ಸಂಬಂಧಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಖೈದಿಗಳ ಸಂಖ್ಯೆ ಇಲ್ಲಿ ಹೆಚ್ಚಿರುವುದು ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ.ಸೂಕ್ಷ್ಮ ಕಾರಾಗೃಹ ರಾಜ್ಯದ ಅತ್ಯಂತ ಸೂಕ್ಷ್ಮ ಕಾರಾಗೃಹ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಮಂಗಳೂರು ಜಿಲ್ಲಾ ಕಾರಾಗೃಹದ ನಿರ್ವಹಣೆ ಕಾರಾಗೃಹ ಇಲಾಖೆಯ ಪಾಲಿಗೆ ಸವಾಲಾಗಿ ಪರಿಣಮಿಸಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here