Thursday 8th, May 2025
canara news

ಉಗ್ರ ಕೃತ್ಯ: ಮೂವರಿಗೆ ಕಠಿಣ ಜೀವಾವಧಿ ಸಜೆ

Published On : 13 Apr 2017   |  Reported By : Canaranews Network


ಮಂಗಳೂರು: ಉಗ್ರ ಕೃತ್ಯದ ಮೂವರು ಅಪರಾಧಿಗಳಾದ ಪಾಂಡೇಶ್ವರ ಸುಭಾಸ್ನಗರದ ಸೈಯದ್ ಮೊಹಮದ್ ನೌಶಾದ್ (25), ಹಳೆಯಂಗಡಿಯ ಅಹ್ಮದ್ ಬಾವಾ ಅಬೂಬಕರ್ (33) ಮತ್ತು ಪಡುಬಿದ್ರಿ ಉಚ್ಚಿಲದ ಫಕೀರ್ ಅಹ್ಮದ್ ಬಾವಾ (46) ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕಠಿನ ಜೀವಾವಧಿ ಶಿಕ್ಷೆ ವಿಧಿಸಿ ಬುಧವಾರ ತೀರ್ಪು ನೀಡಿದೆ.ಅಕ್ರಮ ಚಟುವಟಿಕೆ ಕಾಯ್ದೆ, ಸ್ಫೋಟಕ ವಸ್ತು ಕಾಯ್ದೆ, ಸ್ಫೋಟಕ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯನ್ವಯ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್.ಎಚ್. ಪುಷ್ಪಾಂಜಲಿ ದೇವಿ ಅವರು ತೀರ್ಪು ನೀಡಿದರು.


ಶಿಕ್ಷೆಯ ಪ್ರಮಾಣ ಪ್ರಕಟ:
ಎಲ್ಲ ಮೂವರು ಅಪರಾಧಿಗಳಿಗೆ ಅಕ್ರಮ ಚಟುವಟಿಕೆ ಕಾಯ್ದೆಯ ಕಲಂ 16(1) ಬಿ ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಮತ್ತು ದಂಡ ತೆರಲು ತಪ್ಪಿದರೆ ಹೆಚುÌರಿಯಾಗಿ 1 ವರ್ಷ ಕಠಿನ ಶಿಕ್ಷೆ, ಕಲಂ 17 ಮತ್ತು 18ರನ್ವಯ 5 ವರ್ಷ ಕಠಿನ ಶಿಕ್ಷೆ ಮತ್ತು ತಲಾ 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 3 ತಿಂಗಳ ಕಠಿನ ಸಜೆ, ಸ್ಫೋಟಕ ವಸ್ತು ಕಾಯ್ದೆಯ ಕಲಂ 5 ಬಿ ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಕಠಿನ ಸಜೆ, ಸ್ಫೋಟಕ ಕಾಯ್ದೆ 9 ಬಿಬಿ ಅನ್ವಯ 2 ವರ್ಷ ಕಠಿನ ಸಜೆ ಮತ್ತು 3,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 3 ತಿಂಗಳ ಕಠಿನ ಶಿಕ್ಷೆ, ಐಪಿಸಿ ಕಲಂ 120 (ಕ್ರಿಮಿನಲ್ ಒಳ ಸಂಚು) ಅನ್ವಯ ಕಠಿನ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 1 ವರ್ಷ ಕಠಿನ ಸಜೆ, ಶಸ್ತ್ರಾಸ್ತ್ರ ಕಾಯ್ದೆ 25 (ಎ) (ಎ) ಅನ್ವಯ ಕಠಿನ ಜೀವಾವಧಿ ಸಜೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 1 ವರ್ಷ ಕಠಿನ ಸಜೆಯನ್ನು ವಿಧಿಸಲಾಗಿದೆ.ಇದಲ್ಲದೆ 1ನೇ ಆರೋಪಿ ಸೈಯದ್ ಮೊಹಮದ್ ನೌಶಾದ್ಗೆ ಐಪಿಸಿ ಕಲಂ 420ರ ಅನ್ವಯ 7 ವರ್ಷ ಕಠಿನ ಸಜೆ ಮತ್ತು 5,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಮತ್ತೆ 6 ತಿಂಗಳ ಕಠಿನ ಸಜೆ, ಐಪಿಸಿ ಕಲಂ 468 ಮತ್ತು ಕಲಂ 471ರ ಅನ್ವಯ 3 ವರ್ಷ ಕಠಿನ ಶಿಕ್ಷೆ ಮತ್ತು ತಲಾ 3,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಕಠಿನ ಶಿಕ್ಷೆ ಅನುಭವಿಸಬೇಕಾಗಿದೆ. ಹಾಗೆಯೇ 6ನೇ ಆರೋಪಿ ಫಕೀರ್ ಅಹ್ಮದ್ ಬಾವಾ ಸ್ಫೋಟಕ ವಸ್ತು ಕಾಯ್ದೆಯ ಕಲಂ 6ರನ್ವಯ ಕಠಿನ ಜೀವಾವಧಿ ಸಜೆ ಮತ್ತು 10,000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 1 ವರ್ಷ ಕಠಿನ ಶಿಕ್ಷೆಯನ್ನು ಅನುಭವಿಸಬೇಕು.ಈ ಮೂವರು ತಪ್ಪಿತಸ್ಥರಾಗಿದ್ದು, ಅಪರಾಗಳೆಂದು ಎ. 10ರಂದು ನ್ಯಾಯಾಲಯ ತೀರ್ಮಾನಿಸಿತ್ತು ಹಾಗೂ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲು ಬುಧವಾರವನ್ನು ನಿಗದಿ ಪಡಿಸಿತ್ತು. ಅದರಂತೆ ಬುಧವಾರ ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಕಲಾಪಗಳು ಆರಂಭಗೊಂಡಿದ್ದು, 11.50ರ ವೇಳೆಗೆ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here