Thursday 8th, May 2025
canara news

ಆನ್ ಲೈನ್ ದೋಖಾ

Published On : 14 Apr 2017


ಮಂಗಳೂರು: ಆನ್ಲೈನ್ ಮಾರ್ಕೆಟ್ ವ್ಯವಸ್ಥೆ ಯಲ್ಲಿ ನಡೆಯುತ್ತಿರುವ ಕೆಲವೊಂದು ಮೋಸ ಮತ್ತು ವಂಚನೆ ಬಗ್ಗೆ ಮಾಧ್ಯಮಗಳಲ್ಲಿ ಅಲ್ಲೊಂದು ಇಲ್ಲೊಂದು ವರದಿಗಳು ಬರುತ್ತಿರುವಾಗಲೇ ಮಂಗಳೂರಿನಲ್ಲಿ ಗುರುವಾರ ಇಂಥದ್ದೊಂದು ಮೊಸ ಬಯಲಾಗಿದೆ.ಆನ್ಲೈನ್ನಲ್ಲಿ ಕೆಮರಾ ಬುಕ್ ಮಾಡಿದರೆ ಬಾಕ್ಸ್ನಲ್ಲಿ ಬಂದದ್ದು ಗಣಪತಿ ವಿಗ್ರಹ. ಜತೆಗೆ ಫ್ಯಾಕ್ಸ್ ಯಂತ್ರದ ರೋಲ್, ಬ್ರೇಕ್ ಆಯಿಲ್ ಇತ್ಯಾದಿ ವಸ್ತುಗಳು.ಪಿವಿಎಸ್ ಜಂಕ್ಷನ್ ಬಳಿಯ ಎಂ.ಜಿ. ರೋಡ್ನ ಔಷಧ ಅಂಗಡಿ ಯೊಂದರ ಮಾಲಕ ಶ್ರೀಪತಿ ಅವರು ತನ್ನ ಪುತ್ರನಿಗಾಗಿ ಫ್ಲಿಪ್ ಕಾರ್ಟ್ನಲ್ಲಿ ನಿಕಾನ್ ಡಿ 5-200 ಡಿಎಸ್ಎಸ್ಆರ್ ಕೆಮರಾಕ್ಕೆ ಆರ್ಡರ್ ಮಾಡಿದ್ದರು.

ಇದರ ಬೆಲೆ 35,595 ರೂ. ವಸ್ತು ಕೈಗೆ ಸಿಗುವಾಗ ನಗದು (ಕ್ಯಾಶ್ ಆನ್ ಡೆಲಿವರಿ) ಪಾವತಿಸಬೇಕಿತ್ತು. ಬೆಳಗ್ಗೆ 10 ಗಂಟೆ ವೇಳೆಗೆ ಬುಕ್ ಮಾಡಿದ ವಸ್ತು ಶ್ರೀಪತಿ ಅವರಿಗೆ ಡೆಲಿವರಿ ಆಗಿದ್ದು, ಅವರು ಪಾರ್ಸೆಲ್ ತಂದ ವ್ಯಕ್ತಿಗೆ 35,595 ರೂ. ನಗದು ಪಾವತಿಸಿದ್ದರು. ಬಾಕ್ಸ್ನ್ನು ಆತನ ಸಮ್ಮುಖ ದಲ್ಲಿಯೇ ತೆರೆದು ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು. ಕೆಮರಾದ ಬಾಕ್ಸ್ ನಲ್ಲಿ ಕೆಮರಾ ಬದಲು ಗಣಪತಿ ವಿಗ್ರಹ, ಫ್ಯಾಕ್ಸ್ ಮೆಶಿನ್ನ ರೋಲ್, ಹಳೆಯ ಕ್ಯಾನ್ನಲ್ಲಿ ತುಂಬಿಸಿದ ಬ್ರೇಕ್ ಆಯಿಲ್ ಕಂಡು ಬಂತು. ಜತೆಗೆ ಇದರಲ್ಲಿ ಕೆಮರಾ ಇದೆ ಎಂದು ನಂಬಿಸಲು 16 ಜಿಬಿ ಎಸ್ಡಿ ಕಾರ್ಡ್, ಮೆಮೊರಿ ಕಾರ್ಡ್, ಕೆಮರಾ ಪೌಚ್ನ್ನು ಇರಿಸಲಾಗಿತ್ತು. ಕೆಮರಾ ಹೊರತುಪಡಿಸಿ ಉಳಿದ ಎಲ್ಲವೂ ಅದರಲ್ಲಿತ್ತು.

ತನಗೆ ಫ್ಲಿಪ್ಕಾರ್ಟ್ ಸಂಸ್ಥೆ ಅಥವಾ ಡೆಲಿವರಿ ವ್ಯವಸ್ಥೆ ಮಾಡುವವರಿಂದ ಮೋಸ ಆಗಿದೆ ಎಂದು ಶ್ರೀಪತಿ ಅವರಿಗೆ ಮನವರಿಕೆಯಾಗಿದ್ದು, ಅವರು ಪಾರ್ಸೆಲ್ ಡೆಲಿವರಿ ಮಾಡಿದ ಕೊರಿಯರ್ ಸಂಸ್ಥೆಯ ಪ್ರತಿನಿಧಿಯನ್ನು ತರಾಟೆಗೆ ತೆಗೆದುಕೊಂಡು ಕೊಟ್ಟ ಹಣ ವಾಪಸ್ ಪಡೆದು ಕೊರಿಯರ್ ಪಾರ್ಸೆಲನ್ನು ಹಿಂದಿರುಗಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here