Thursday 25th, April 2024
canara news

ಇಂದು ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮುಂಬಯಿ ಘಟಕದ ವಿಶೇಷ ಸಭೆ

Published On : 14 Apr 2017   |  Reported By : Rons Bantwal


ಮುಂಬಯಿ, ಎ.13: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಇದರ ಮುಂಬಯಿ ಘಟಕದ ವಿಶೇಷ ಸಭೆಯು ಇಂದು (ಎ.14) ಶುಕ್ರವಾರ ಸಂಜೆ 6.00 ಗಂಟೆಗೆ ಕುರ್ಲಾ ಪೂರ್ವದ ಬಂಟರ ಭÀವನದ ಅನೇಕ್ಸ್ ಸಭಾಗೃಹದಲ್ಲಿ ಜರಗಲಿದೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಇದರ ಸ್ಥಾಪಕಾಧ್ಯ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಪಟ್ಲ ಸತೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಇದರ ಮುಂಬಯಿ ಘಟಕದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಲಾಗಿದೆ.

ಪಟ್ಲ ಫೌಂಡೇಷನ್‍ನ ಸ್ಥಾಪನೆ :
ಕರಾವಳಿಯ ಗಂಡು ಕಲೆ ಎಂದೇ ಪ್ರಸಿದ್ಧಿಯನ್ನು ಪಡೆದ ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಸಂಸ್ಥೆಯು ಕಳೆದ 15 ತಿಂಗಳುಗಳಲ್ಲಿ ಸುಮಾರು 50 ಲಕ್ಷ ರೂ. ಗಳಿಗೂ ಹೆಚ್ಚಿನ ಮೊತ್ತದ ನಿರೀಕ್ಷೆಗೂ ಮೀರಿದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿ ಕಲಾಭಿಮಾನಿಗಳ, ಕಲಾಪೆÇೀಷಕರ ಪ್ರಶಂಸೆಗೆ ಪಾತ್ರವಾಗಿದೆ. ಮಾತ್ರವಲ್ಲದೆ ಅಶಕ್ತ ಕಲಾವಿದರ ಕುಟುಂಬಗಳಲ್ಲಿ ಭದ್ರತೆಯ ಭರವಸೆಯನ್ನು ಕೂಡ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಟ್ರಸ್ಟಿನ ಬೆನ್ನೆಲುಬಾಗಿ ಸಹಕರಿಸುತ್ತಿರುವ ಕಲಾಪೆÇೀಷಕ ಬಂ`Àುಗಳು, ಯಕ್ಷಕಲಾಭಿಮಾನಿಗಳು, ದಾನಿಗಳಿದ್ದಾರೆ ಎಂಬುವುದನ್ನು ಮರೆಯುವಂತಿಲ್ಲ.

ಕಲಾವಿದರ ಆಶಾಕಿರಣ :
ಟ್ರಸ್ಟ್ ಇಲ್ಲಿಯವರೆಗೆ 35 ಮಂದಿ ಅಶಕ್ತ ಕಲಾವಿದರುಗಳಿಗೆ ತಲಾ 50 ಸಾವಿರ ರೂ. ಗೌರವಧÀನವನ್ನು ವಿತರಿಸಿದೆ. ಪ್ರಾದೇಶಿಕ ಘಟಕಗಳ ಸುಮಾರು 30 ಮಂದಿ ಅಶಕ್ತ ಕಲಾವಿದರುಗಳಿಗೆ ಗೌರವ ಧನ ವಿತರಣೆ ಮಾಡಲಾಗಿದೆ. ಸುಮಾರು 200 ಮಂದಿ ಕಲಾವಿದರಿಗೆ ಅಪಘಾತ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ಚಿಕಿತ್ಸಾ ವೆಚ್ಚ 2 ಲಕ್ಷ ರೂ. ಹಾಗೂ ಆಕಸ್ಮಿಕ ಜೀವಹಾನಿಯಾದಲ್ಲಿ ಕುಟುಂಬಕ್ಕೆ 8 ಲಕ್ಷ ರೂ. ಜೀವವಿಮೆಯನ್ನು ಮಾಡಿದೆ. 6 ಮಂದಿ ಅಶಕ್ತ ಕಲಾವಿದರಿಗೆ ತಲಾ 25 ಸಾವಿರ ರೂ. ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯು ನೀಡಿದೆ.

ಅಪಘಾತ ಹಾಗೂ ಅನಾರೋಗ್ಯದಿಂದ ವಿಧಿವಶರಾದ 5 ಮಂದಿ ಕಲಾವಿದರ ಕುಟುಂಬಗಳಿಗೆ ತಲಾ 50 ಸಾವಿರ ರೂ. ಪರಿಹಾರ ನಿಧಿಯನ್ನು ವಿತರಿಸಿದೆ. ಅಶಕ್ತ ಕಲಾವಿದರಿಗೆ ಗೃಹ ನಿರ್ಮಾಣಕ್ಕಾಗಿ ಸಹಾಯಧÀನ ವಿತರಣೆ, ಗರಿಷ್ಟ ಅಂಕ ಗಳಿಸಿದ ಕಲಾವಿದರ ಮಕ್ಕಳಿಗೆ ಬಂಗಾರದ ಪದಕ, ಅಶಕ್ತ ಕಲಾವಿದರ ಮಕ್ಕಳಿಗೆ ವಿದ್ಯಾಥಿರ್ü ವೇತನ, ಪ್ರತಿಭಾ ಪುರಸ್ಕಾರ, ಖ್ಯಾತ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ ಅವರಿಗೆ ರೂಪಾಯಿ 1 ಲಕ್ಷ ನಗದಿನೊಂದಿಗೆ 2016ನೇ ಸಾಲಿನ ಪಟ್ಲ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ಕಲಾವಿದರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಶಿಬಿರ, ಉಚಿತ ಔಷಧಿ ವಿತರಣೆ, ರಕ್ತದಾನ ಶಿಬಿರ, ಪ್ರಸಿದ್ಧ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಅಂಬುರುಹ ಎಂಬ 30 ಪ್ರಸಂಗಗಳ ಕುಶ-ಲವ 2 ಸಂಪುಟಗಳ ಎರಡು ಸಾವಿರ ಪ್ರತಿಗಳನ್ನು ಪ್ರಕಟಿಸಿದ ಶ್ರೇಯಸ್ಸು ಪಟ್ಲ ಫೌಂಡೇಷನ್‍ಗಿದೆ.

ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಪ್ರಸ್ತುತ ದೇಶ-ವಿದೇಶಗಳಲ್ಲಿ ಘಟಕಗಳನ್ನು ಹೊಂದಿದೆ. ದುಬೈ, ಮಸ್ಕತ್, ಮುಂಬಯಿ, ಮಂಗಳೂರು, ಬೆಂಗಳೂರು, ಕಾಸರಗೋಡು, ಮೂಡಬಿದ್ರೆ, ಕಾರ್ಕಳ, ಬೆಳ್ತಂಗಡಿ, ಎಕ್ಕಾರು ಕಟೀಲು, ಪುತ್ತೂರು, ಬಂಟ್ವಾಳ, ಸುಳ್ಯ, ಸರಪಾಡಿ, ಪೆÇಳಲಿ, ವಾಮಂಜೂರು, ವಿಟ್ಲ, ಕಳಸ ಬಾಳೆಹೊಳೆ, ಉಜಿರೆ, ಕುಂಬ್ಳೆ, ಮಹಿಳಾ ಘಟಕ ಮಂಗಳೂರು, ಹವ್ಯಾಸಿ ಪ್ರಧಾನ ಸಮಿತಿ ಮೊದಲಾದ ಪ್ರಾದೇಶಿಕ ಉಪಸಮಿತಿಗಳನ್ನು ಹೊಂದಿ ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.

ಮುಂದಿನ ಯೋಜನೆಗಳು :
ಟ್ರಸ್ಟ್‍ನ ವಿಷಯದಲ್ಲಿ ಕಲಾವಿದರಿಗಾಗಿ ಬೃಹತ್ ಯೋಜನೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದೆ. ನಿವೇಶನ ರಹಿತ 100 ಮಂದಿ ಕಲಾವಿದರಿಗೆ ಉಚಿತ 100 ಮನೆಗಳ ನಿರ್ಮಾಣ ಪಟ್ಲ ಯಕ್ಷಾಶ್ರಯ ಯೋಜನೆ, ಕನಿಷ್ಠ 15 ವರ್ಷ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದ 60 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯ ಕಲಾವಿದರಿಗೆ ಮಾಸಿಕ 1 ಸಾವಿರ ರೂ. ಗಳ ಮಾಸಾಶನ, ಅಶಕ್ತ ಹವ್ಯಾಸಿ ಕಲಾವಿದರಿಗೆ ಕೂಡಾ ಆಥಿರ್üಕ ನೆರವು ನೀಡುವ ಯೋಜನೆಗಳನ್ನು ಹೊಂದಿದೆ.

ಈ ಎಲ್ಲಾ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಆಯೋಜಿಸಲಾಗಿದೆ. ಸಭೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಯಕ್ಷಧ್ರುವ ಪಟ್ಲ ಫೌಂಡೇಷನ್ ಕೇಂದ್ರ ಸಲಹಾ ಮಂಡಳಿಯ ಉಪಾಧ್ಯಕ್ಷರು ಹಾಗೂ ಮುಂಬಯಿ ಸಮಿತಿಯ ಪ್ರಮುಖರಾದ ಐಕಳ ಗಣೇಶ್ ಶೆಟ್ಟಿ (9833077950) ಮತ್ತು ಅಶೋಕ್ ಶೆಟ್ಟಿ ಪೆರ್ಮುದೆ (9820156163) ಅವರನ್ನು ಸಂಪರ್ಕಿಸಬಹುದು. ನಗರದ ಕಲಾಪೆÇೀಷಕರು, ಕಲಾಭಿಮಾನಿಗಳು, ದಾನಿಗಳು ಸಭೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಯಕ್ಷ`À್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮುಂಬಯಿ ಘಟಕದ ಪ್ರಕಟನೆ ತಿಳಿಸಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here