Thursday 8th, May 2025
canara news

ಬಾಂದ್ರಾ ಪಶ್ಚಿಮದಲ್ಲಿ ನವೀನ್ ಜೆ.ಭಂಡಾರಿ ನಿರ್ದೇಶಕತ್ವದ `ಫಿನಿಶಿಂಗ್ ಟಚ್' ಸೇವಾರಂಭ

Published On : 15 Apr 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.14: ಕೇಶ ವಿನ್ಯಾಸ ಹಾಗೂ ಅತಿಗಾಮಿ ಸಾಂಪ್ರದಾಯಿಕ ಕೇಶ ಪದ್ಧತಿಯಂತೆ ಶಸ್ತ್ರ ಚಿಕಿತ್ಸೆವಿಲ್ಲದೆ ಕೂದಲುಗಳ ಅಳವಡಿಕೆಯಲ್ಲಿ ಸ್ವಂತಿಕೆಯ ಪ್ರತಿಷ್ಠೆಯನ್ನು ರೂಪಿಸಿದ `ಫಿನಿಶಿಂಗ್ ಟಚ್' ಸಂಸ್ಥೆಯ ಮಹಾನಗರ ಮುಂಬಯಿಯೊಳಗಿನ 3ನೇ ಶಾಖೆಯು ಇಂದಿಲ್ಲಿ ಶುಕ್ರವಾರ ಬಿಸು ಹಬ್ಬದ ಶುಭಾವಸರದಲ್ಲಿ ಬಾಂದ್ರಾ ಪಶ್ಚಿಮದ ಎಸ್.ವಿ ರೋಡ್‍ನ ಜೈನ್ ಚೇಂಬರ್ಸ್‍ನ ಮೊದಲ ಮಹಡಿಯಲ್ಲಿ ಶುಭಾರಂಭ ಗೊಂಡಿತು.

ಭಂಡಾರಿ ಮಹಾ ಮಂಡಲದ ಸಂಸ್ಥಾಪಕಧ್ಯಕ್ಷ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಇದರ ಆಡಳಿತ ಮೊಕ್ತೇಸರ ಹಾಗೂ ಕಚ್ಚೂರು ಶ್ರೀ ನಾಗೇಶ್ವರ ಸೇವಾ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ರಿಬ್ಬನ್ ಕತ್ತರಿಸಿ ನಂತರ ದೀಪಪ್ರಜ್ವಲಿಸಿ ಶಾಖೆಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಭಂಡಾರಿ ಮಹಾ ಮಂಡಲದ ಉಪಾಧ್ಯಕ್ಷೆ ಹಾಗೂ ಬೆಸ್ಟ್ ಫೈನಾನ್ಸ್ ಕಾಪೆರ್Çೀರೇಶನ್ ಸಂಸ್ಥೆಯ ಆಡಳಿತ ಪಾಲುದಾರೆ ಅಮಿತಾ ಗಿರೀಶ್ ಭಂಡಾರಿ ಮತ್ತು ಭಂಡಾರಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಉಪಸ್ಥಿತರಿದ್ದು ಶುಭಾರೈಸಿದರು. ಜನಾರ್ದನ ಭಟ್ ಮಲಾಡ್ ತನ್ನ ಪೌರೋಹಿತ್ಯದಲ್ಲಿ ಗಣೇಶ ಹವನ, ಗಣಹೋಮ ಇತ್ಯಾದಿ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಫಿನಿಶಿಂಗ್ ಟಚ್ ಸಂಸ್ಥೆಯ ಸಂಸ್ಥಾಪಕ ಆಡಳಿತ ನಿರ್ದೇಶಕ ನವೀನ್ ಜೆ.ಭಂಡಾರಿ ಬಸ್ರೂರು ಅವರು ಸ್ವಾಗತಿಸಿ ಪ್ರಸ್ತಾವನೆಗೈದು ನನ್ನ ಸಾಧನೆಗೆ ಕಾರಣಕರ್ತರಾಗಿ ತನ್ನ ಕುಲಕಸುಬು ಕ್ಷೌರಿಕ ವೃತ್ತಿಗೆ ಪ್ರೇರಕರಾದ ಮಾತಾಪಿತರಾದ ಜಗನ್ನಾಥ್ ಭಂಡಾರಿ ಮತ್ತು ಶಾಂತಾ ಭಂಡಾರಿ, ಮಾವಂದಿರಾದ ಸುರೇಶ್ ಭಂಡಾರಿ ಅಶ್ವಥಪುರ (ಮೂಡಬಿದ್ರೆ) ಹಾಗೂ ಗೋವಿಂದ ಭಂಡಾರಿ ಸುರತ್ಕಲ್ ಅವರನ್ನು ಮನಸಾರೆ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಶಾಂತಾ ಜೆ.ಭಂಡಾರಿ, ವೀಣಾ ಭಂಡಾರಿ, ಕು| ವೃದ್ಧಿ ಭಂಡಾರಿ, ಮಾ| ವಂಶ್ ಭಂಡಾರಿ, ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹೇಮರಾಜ್ ಎನ್.ಕರ್ಕೇರ, ಉಮೇಶ್‍ಕುಮಾರ್ ಅಂಚನ್, ಜಯ ಸಿ.ಪೂಜಾರಿ, ಚಿತ್ರನಟ ಸೌರಭ್ ಸುರೇಶ್ ಭಂಡಾರಿ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭೇಚ್ಛ ಕೋರಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here