Thursday 8th, May 2025
canara news

ಮೇಲ್ದರ್ಜೆ ಬೇಡಿಕೆಯ ನಿರೀಕ್ಷೆಯಲ್ಲಿ ಮಂಗಳೂರಿನ ಜಿಲ್ಲಾ ಆಸ್ಪತ್ರೆ

Published On : 15 Apr 2017   |  Reported By : Canaranews Network


ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲ ಸುಮಾರು 6 ಜಿಲ್ಲೆಗಳ ಬಡ ರೋಗಿಗಳ ಪಾಲಿಗೆ ಆಶಾಕಿರಣವಾದ ಲೇಡಿಗೋಶನ್ ಆಸ್ಪತ್ರೆಯನ್ನು 500 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಪೂರಕವಾಗಿ ಇತರ ಸೌಲಭ್ಯಗಳು ನಿರ್ಮಾಣವಾಗುತ್ತಿದ್ದು, ಸರಕಾರ ಒಪ್ಪಿಗೆ ನೀಡಬೇಕಿದೆ. ಕಟ್ಟಡ ಸಾಮರ್ಥ್ಯ ಹೆಚ್ಚಳ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ 500 ಹಾಸಿಗೆ ಸಾಮರ್ಥ್ಯಕ್ಕೇರಿಸಿ ಒಪ್ಪಿಗೆ ನೀಡಿದರೆ ನೂರಾರು ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿ ಪ್ರಸ್ತುತ 272 ಹಾಸಿಗೆಗಳಿವೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಂದ ವಾರ್ಷಿಕ 50 ಸಾವಿರಕ್ಕಿಂತಲೂ ಅಧಿಕ ಹೊರ ರೋಗಿಗಳು, ಸುಮಾರು 15 ಸಾವಿರ ಒಳರೋಗಿಗಳು ಚಿಕಿತ್ಸೆ ಪಡೆಯುತ್ತಾರೆ.

ಹೊಸ ಕಟ್ಟಡ 3 ತಿಂಗಳಲ್ಲಿ ಕಾರ್ಯಾರಂಭ ನಿರೀಕ್ಷೆ

ಒಎನ್ಜಿಸಿ- ಎಂಆರ್ಪಿಎಲ್ ನೆರವಿ ನೊಂದಿಗೆ 21.70 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕಟ್ಟಡ 3 ತಿಂಗಳೊಳಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ. 1.30 ಲಕ್ಷ ಚದರ ಅಡಿ ವಿಸ್ತೀರ್ಣದ 5 ಮಹಡಿಗಳ ಈ ಕಟ್ಟಡದಲ್ಲಿ 226 ಹಾಸಿಗೆಗಳು, ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸೌಲಭ್ಯ ಹಾಗೂ ಸಲಕರಣೆಗಳ ಅಳವಡಿಕೆಗೆ ರಾಜ್ಯ ಸರಕಾರದಿಂದ ಈಗಾಗಲೇ 10 ಕೋ.ರೂ. ಬಿಡುಗಡೆಯಾಗಿದೆ. ಇದು ಉದ್ಘಾಟನೆಯಾದ ಬಳಿಕ ಈಗ ಇರುವ ಹಳೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ವಿಭಾಗಗಳು ಇಲ್ಲಿಗೆ ವರ್ಗಾವಣೆಯಾಗಲಿವೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here