Friday 19th, April 2024
canara news

76 ಕೋ.ರೂ. ಮೊತ್ತದ ತೆರಿಗೆ ಕಳ್ಳತನ ಪತ್ತೆ; 50 ಕೋ.ರೂ. ತೆರಿಗೆ ವಸೂಲಿ

Published On : 15 Apr 2017   |  Reported By : Canaranews Network


ಮಂಗಳೂರು: ಡೈರೆಕ್ಟರೆಟ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಸ್ ಇಂಟೆಲಿಜೆನ್ಸ್ (ಡಿಜಿಸಿಇಐ) ಮಂಗಳೂರು ಘಟಕ 2016-17ನೇ ಸಾಲಿನಲ್ಲಿ 76 ಕೋಟಿ ರೂ. ಮೊತ್ತದ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆ ಕಳ್ಳತನ ಪತ್ತೆ ಹಚ್ಚಿದ್ದು, ಈ ಪೈಕಿ 50 ಕೋ. ರೂ. ವಸೂಲಿ ಮಾಡಿದೆ.ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ ಈ ವರ್ಷ ಶೇ 300ರಷ್ಟು ಹೆಚ್ಚು ಸಾಧನೆಯಾಗಿದೆ.ಪತ್ತೆಯಾದ ತೆರಿಗೆ ಕಳ್ಳತನದಲ್ಲಿ ವಸೂಲಾದ ತೆರಿಗೆ ಮೊತ್ತ ಶೇ. 65ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ತೆರಿಗೆ ಪಾವತಿಸದೆ ತಪ್ಪಿಸಿಕೊಳ್ಳಲು ಹಲವು ದಾರಿ ಕಂಡು ಕೊಂಡವರು ತಮ್ಮ ಕೃತ್ಯವನ್ನು ಅಧಿಕಾರಿಗಳು ಪತ್ತೆ ಹಚ್ಚಿದ ಕೂಡಲೇ ಅದನ್ನು ಸಂಪೂರ್ಣವಾಗಿ ಮರು ಪಾವತಿಸಿದ್ದಾರೆ.

ಮಂಗಳೂರು ಘಟಕ 2016-17ರಲ್ಲಿ ಒಟ್ಟು 14 ಪ್ರಕರಣಗಳಲ್ಲಿ 26.23 ಕೋ. ರೂ. ಕೇಂದ್ರೀಯ ಅಬ್ಕಾರಿ ಸುಂಕ ಪಾವತಿಸದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಈ ಪೈಕಿ 6.47 ಕೋ. ರೂ. ವಸೂಲಾಗಿದೆ. ಸೇವಾ ತೆರಿಗೆ ಪಾವತಿ ಮಾಡದ 71 ಪ್ರಕರಣಗಳನ್ನು ಪತ್ತೆ ಮಾಡಿದೆ. ಒಟ್ಟು ಮೊತ್ತ 50.63 ಕೋ. ರೂ. ಆಗಿದ್ದು, ಅದರಲ್ಲಿ 43.57 ಕೋ. ರೂ. ವಸೂಲು ಮಾಡಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here