Friday 19th, April 2024
canara news

ಸತೀಶ್ ಶೆಟ್ಟಿ ಪಟ್ಲ ಅವರನ್ನು ಸನ್ಮಾನಿಸಿದ ಬಂಟರ ಸಂಘ ಮುಂಬಯಿ

Published On : 16 Apr 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಎ.16: ಕಳೆದ ಶುಕ್ರವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಸಂಘದ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಂಭ್ರಮಿಸಿದ ಬಿಸು ಪರ್ಬ ಮತ್ತು ವಾರ್ಷಿಕೋತ್ಸವ ಸಂಭ್ರಮದಲ್ಲಿ ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆ ಹಾಗೂ ಬಂಟರ ಸಂಘದ ಸಮಿತಿ ಸದಸ್ಯರು ಪ್ರದರ್ಶಿಸಿದ `ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ' ಯಕ್ಷಗಾನಕ್ಕೆ ಭಾಗವತಿಕೆಗೈದ ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ, ಶ್ರೀ ಕ್ಷೇತ್ರ ಕಟೀಲು ಮೇಳದ ಪ್ರಸಿದ್ಧ ಭಾಗವತ, ಯಕ್ಷ ಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ, ಅಶೋಕ್ ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನೆರವೇರಿದ ತ್ರಿವಳಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‍ನ ಗೌರವ ಜೊತೆ ಕಾರ್ಯದರ್ಶಿ ಡಾ| ಪಿ.ವಿ ಶೆಟ್ಟಿ ಹಾಗೂ ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಎ.ಸಿ ಭಂಡಾರಿ ಉಪಸ್ಥಿತರಿದ್ದು ದೀಪ ಬೆಳಗಿಸಿ ಬಿಸು ಪರ್ಬಕ್ಕೆ ವಿಧಿವತ್ತಾಗಿ ಚಾಲನೆಯನ್ನೀಡಿ ಸಾಂಪ್ರದಾಯಿಕವಾಗಿ ಸಮಾರಂಭ ಉದ್ಘಾಟಿಸಿದರು.

ಸಮಾರಂಭದಲ್ಲಿ ಬಂಟ್ಸ್ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಐ.ಆರ್ ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್‍ಕುಮಾರ್ ಶೆಟ್ಟಿ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಯುವ ವಿಭಾಗಧ್ಯಕ್ಷ ವಿವೇಕ್ ವಿ.ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದು ಸಂಘವು ಕೊಡಮಾಡುವ `ಕಣಂಜಾರು ಆನಂದ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾ ಪ್ರಶಸ್ತಿ'ಯನ್ನು ಅವಿರತ ಐದು ದಶಕಗಳಲ್ಲಿ ಯಕ್ಷಗಾನ ಕಲೆಯಲ್ಲಿ ತೊಡಗಿಸಿ ಕ್ರಾಂತಿಯ ಅಲೆ ಸೃಷ್ಠಿಸಿ ಅಗ್ರಪಂಥಿüಯಲ್ಲಿರಿಸಿದ ಹಿರಿಯ ಕಲಾವಿದ, ಚಿಕ್ಕಯ್ಯ ಶೆಟ್ಟಿ ಹಾಗೂ `ಶ್ರೀಮತಿ ಪ್ರೇಮಾ ನಾರಾಯಣ ರೈ ಪ್ರಶಸ್ತಿ'ಯನ್ನು ಪೂರ್ಣಿಮಾ ಯತೀಶ್ ರೈ ಅವರಿಗೆ `ಶ್ರೇಷ್ಠ ನ್ಯಾಯವಿಮರ್ಶಕ ಪ್ರಶಸ್ತಿ'ಯನ್ನು `ಬಂಟರವಾಣಿ' ಮಾಸಿಕದ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಅವರಿಗೆ (ಪತ್ನಿ ಹರಿಣಾಕ್ಷಿ ಅಶೋಕ್ ಅವರನ್ನೊಳಗೊಂಡು) ಅತಿಥಿüಗಳು ಪ್ರದಾನಿಸಿ ಅಭಿನಂದಿಸಿದರು.

ಪ್ರಶಸಿ ಪ್ರದಾನದಲ್ಲಿ ಪ್ರಶಸ್ತಿ ಪ್ರಾಯೋಜಕರುಗಳಾದ ಸುಧಾಕರ್ ಎಸ್.ಹೆಗ್ಡೆ, ರಂಜನಿ ಎಸ್.ಹೆಗ್ಡೆ, ಕೆ.ಕೆ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಯಂತಿ ಶೆಟ್ಟಿ,ಡಾ| ಸುನೀತಾ ಎಂ.ಶೆಟ್ಟಿ, ಜ್ಯೋತಿ ಆರ್.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು ಪುರಸ್ಕೃತರಿಗೆ ಶುಭಾರೈಸಿದರು. ಪದ್ಮನಾಭ ಎಸ್.ಪಯ್ಯಡೆ ಪ್ರಾಯೋಜಿತ ನಂತರ ಅನ್ನದಾತ ಪ್ರಸಿದ್ಧಿಯ ರಾಘು ಪಿ.ಶೆಟ್ಟಿ ಅವರ `ತುಳುನಾಡಿನ ಕಟ್ಟು ಕಟ್ಟಳೆಗಳು' 6ನೇ ಆವೃತ್ತಿಯನ್ನು ಡಾ| ಪಿ.ವಿ ಶೆಟ್ಟಿ ಬಿಡುಗಡೆ ಗೊಳಿಸಿದರು.

ಡಾ| ಪಿ.ವಿ ಶೆಟ್ಟಿ ಮಾತನಾಡಿ ಬಿಸು ಪರ್ಬ ಬಂಟತನದ ಸಂಸ್ಕೃತಿ ಬಿಂಬಿಸುತ್ತಿದೆ. ಆದುದರಿಂದಲೇ ಬಂಟರ ಪಾಲಿನ ಮಹತ್ವದ ಹಬ್ಬ ಇದಾಗಿದೆ. ಮಹಾನಗರದ ಪಶ್ಚಿಮ ನಗರದಲ್ಲಿ ಕ್ರಿಕೆಟ್ ರಂಗವನ್ನು ಆಧುನಿಕತೆಯಲ್ಲಿ ಮುನ್ನಡೆಸಲು ಶ್ರಮಿಸಿದ್ದೇನೆ. ಅದರ ಫಲವೇ ಕ್ರಿಕೇಟ್‍ರಂಗದಲ್ಲಿ ನಾನು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು. ಈ ಹಿಂದೆ ಬಂಟಸಮುದಾಯದ ಸಹಯೋಗ, ನನಗೆ ಒದಗಿಸಿದ ನಾಯಕತ್ವವೂ ಪೂರಕವಾಗಿದೆ ಎಂದರು.

ಹೊಸಯುಗದ ಆರಂಭವೇ ಬಿಸುಪರ್ಬ. ನಮ್ಮ ಸಂಸ್ಕೃತಿಯ ಪ್ರತೀಕವಾದ ಈ ಹಬ್ಬವನ್ನು ಬಂಟರ ಸಂಘದಲ್ಲಿ ವಿಜೃಂಭನೆಯಲ್ಲಿ ಆಚರಿಸಲು ಯುವ ಧುರೀಣ ರವೀಂದ್ರ ಭಂಡಾರಿ ಅವರಲ್ಲಿನ ಸಂಸ್ಕೃತಿ ಅರಿವು ಕಾರಣವಾಗಿದೆ.
ಅದು ಇಂದು ಸಾಂಸ್ಕೃತಿಕವಾಗಿ ಅನಾವರಣವಾಗಿ ಬಂಟ ಸಂಸ್ಕೃತಿ ಬಿಂಬಿತಗೊಂಡಿದೆ. ಇಲ್ಲಿನ ಪ್ರತೀಯೋರ್ವ ಪದಾಧಿಕಾರಿ ತಮ್ಮ ಜವಾಬ್ದಾರಿಗಳನ್ನು ನಿಷ್ಠಾವಂತರಾಗಿ ನಿಭಾಯಿಸಿದ ಕಾರಣ ಇಷ್ತೊಂದು ಅದ್ದೂರಿ ಸಂಭ್ರಮಕ್ಕೆ ಸಾಧ್ಯವಾಗಿದೆ. ಬಂಟರಲ್ಲಿ ನಾಯಕತ್ವ, ಪರರನ್ನು ಪ್ರೀತಿಸುವ ಸದ್ಗುಣಗಳೇ ಬಂಟ ಸಮೂದಾಯದ ತೀವ್ರಗತಿಯ ಬೆಳವಣಿಗೆ ಕಾರಣ ಆದುದರಿಂದ ವಾರ್ಷಿಕವಾಗಿ ಸಂಘದ ಕೆಲವೊಂದು ಸಕ್ರೀಯ ಪದಾಧಿಕಾರಿ, ಸದಸ್ಯರನ್ನು ಗೌರವಿಸಿ ಪೆÇ್ರೀತ್ಸಾಹಿಸುವ ಅಗತ್ಯವಿದೆ. ಇಂತಹ ಕಾರ್ಯಕರ್ತರಿಂದಲೇ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಐಕಳ ಹರೀಶ್ ತಿಳಿಸಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಸಾಧಕರಾಗಿ ಮೆರೆಯುತ್ತಿರುವುದು ಅಭಿನಂದನೀಯ. ಯಕ್ಷಗಾನ ಎಂದರೆ ನನ್ನ ಪ್ರಾಣವಾಗಿದೆ. ಈ ಕಲೆಯನ್ನು ನನಸಾಗಿಸುವಲ್ಲಿ ನನ್ನ ಅಣ್ಣನ ಹಾಗೂ ಬಂಟ ಸಮುದಾಯದ ಪಾತ್ರ ಮಹತ್ತರವಾದುದು. ಯಕ್ಷಗಾನ, ರಂಗಭೂಮಿಯಲ್ಲಿನ ಸಾಧನೆ ಸ್ತ್ರೀವರ್ಗಕ್ಕೆ ಕಷ್ಟಕರ. ಆದರೂ ಇಲ್ಲಿನ ಅಭಿನಯ ಸಂಸ್ಕಾರ ಬೆಳಿಸುವ ಕಲೆಯಾಗಿರುವುದರಿಂದ ಮಹಿಳೆಯರು ರಂಗಭೂಮಿ, ಯಕ್ಷಗಾನದಲ್ಲಿ ಹೆಚ್ಚು ಅನುಭವ ಹೊಂದುವ ಅಗತ್ಯವಿದೆ ಎಂದು ಗೌರವಕ್ಕೆ ಉತ್ತರಿಸಿ ಪೂರ್ಣಿಮಾ ರೈ ನುಡಿದರು.

ಮಾತುಗಾರನಿಗೆ ಕುಳಿತು ಸನ್ಮಾನ ಪಡೆಯುವುದು ತುಂಬಾ ಕಷ್ಟಕರ ಆದರೂ ತಮ್ಮೆಲ್ಲರ ಪ್ರೇಮವನ್ನು ವಿನಯಪೂರ್ವಕವಾಗಿ ಈ ಗೌರವ ಸ್ವೀಕರಿಸುತ್ತೇನೆ. ತನಗೊದಗಿದ ಅವಕಾಶಗಳನ್ನು ಸದುಪಯೋಗಿಸಿದ ಫಲ ಈ ಪುರಸ್ಕಾರ ಎಂದೆಣಿಸಿದ್ದೇನೆ ಎಂದು ಅಶೋಕ್ ಪಕ್ಕಳ ಸನ್ಮಾನಕ್ಕೆ ಉತ್ತರಿಸಿದರು.

ಹೊಸ ಸಂತತ್ಸರದ ಹಾದಿಯಲ್ಲಿ ನಾವೆಲ್ಲರೂ ಏಕತೆಯೊಂದ ಜೊತೆಯಾಗಿ ಬದುಕು ಬಾಳೋಣ. ನಮ್ಮ ಸಾಮರಸ್ಯದ ಜೀವನ ಭವಿಷ್ಯತ್ತಿನ ಪೀಳಿಗೆಗೆ ಆದರನಿಯ ವಾಗಿಸೋಣ ಎಂದು ಅಧ್ಯಕ್ಷೀಯ ನುಡಿಗಳನ್ನಾಡಿ ಕರೆಯಿತ್ತರು.

ಆದಿಯಲ್ಲಿ ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ-ಪ್ರಸಾದ ವಿತರಿಸಿ ಹರಸಿದರು. ಸಾಂಸ್ಕೃತಿಕ ಮತ್ತು ಸಾಹಿತ್ಯ ಸಮಿತಿ ಕಾರ್ಯಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರಶಾಂತಿ ಡಿ.ಶೆಟ್ಟಿ ಪ್ರಾರ್ಥನೆಯನ್ನಾಡಿದರು. ದಯಾಸಾಗರ್ ಚೌಟ್ ಪುರಸ್ಕೃತರನ್ನು ಪರಿಚಯಿಸಿದರು. ಅಶೋಕ್ ಪಕ್ಕಳ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜಯ ಎ.ಶೆಟ್ಟಿ ವಂದನಾರ್ಪಣೆಗೈದರು.

W್ರವಳಿ ಸಂಭ್ರಮದಲ್ಲಿ ಬಂತರ ಸಂಗದ ಪದಾಧಿಆರಿಗಳು, ಉಪವಿಭಾಗ ಹಾಗೂ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಹಾಜರಿದ್ದು ಶ್ರೀ ಮಹಾವಿಷ್ಣು ಕೃಪಾ ಬಂಟ ಯಕ್ಷಗಾನ ಕಲಾ ವೇದಿಕೆ ಹಾಗೂ ಬಂಟರ ಸಂಘದ ಸಮಿತಿ ಸದಸ್ಯರು ಸತೀಶ್ ಶೆಟ್ಟಿ ಪಟ್ಲ ಅವರ ಭಾಗತಿಕೆಯಲ್ಲಿ `ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಪ್ರದರ್ಶಿಸಿದರು. ಸಂಘದ ಒಂಭತ್ತು ಪ್ರಾದೇಶಿಕ ಸಮಿತಿಗಳ ಸದಸ್ಯರು ವೈವಿಧ್ಯಮಯ ನೃತ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು.

 

 

 

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here