Saturday 2nd, December 2023
canara news

ಹಾಲಿವುಡ್ ಸಿನೇಮಾಕ್ಕೆ ಮುಂಬಯಿ ಕಲಾವಿದರಿಂದ ಮೊತ್ತಮೊದಲು ಕಂಠದಾನಗೈದ ಅರುಷಾ ಎನ್.ಶೆಟ್ಟಿ ಮತ್ತು ಜಯಶೀಲ ಸುವರ್ಣ

Published On : 16 Apr 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಎ.16: ಹಾಲಿವುಡ್ ಸಿನೇಮಾಕ್ಕೆ ಮುಂಬಯಿ ಕಲಾವಿದರಿಂದ ಮೊತ್ತಮೊದಲ ಕಂಠದಾನಗೈದ ಹಿರಿಮೆ ಮುಂಬಯಿಯಲ್ಲಿನ ಹೆಸರಾಂತ ಕಲಾವಿದರೂ, ಅಪ್ರತಿಮ ಪ್ರತಿಭೆಗಳಾದ ಜಯಶೀಲ ಸುವರ್ಣ ಮತ್ತು ಹಿರಿಯ ರಂಗನಟಿ ಅರುಷಾ ಎನ್.ಶೆಟ್ಟಿ ಅವರಿಗೆ ಸಲ್ಲುತ್ತದೆ.

Arusha N.Shetty B

Jaisheel Suvarna

ಕನ್ನಡಿಗರಿಗೆ ಒಂದು ಸಂತೋಷದ ಸುದ್ದಿ ಎಂದರೆ... ಹಾಲಿವುಡ್ ಸಿನೇಮಾ `ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8'ನ್ನು ಈಗ ನೀವು ಕನ್ನಡದಲ್ಲಿ ವೀಕ್ಷಿಸಬಹುದು. ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8 ಕನ್ನಡದಲ್ಲಿ `ವೇಗ ಮತ್ತು ಉದ್ವೇಗ 8' ಎಂದು ಡಬ್ಬಿಂಗ್ ಗೊಳಿಸಿ ಇಂದಿಲ್ಲಿ ಶುಕ್ರವಾರ (ಎ.14) ಬೆಂಗಳೂರುನಲ್ಲಿ ಬಿಡುಗಡೆಯಾಗಿದೆ.

ಮುಂಬಯಿಯಲ್ಲಿ ಪ್ರಥಮ ಬಾರಿಗೆ ಒಂದು ಹಾಲಿವುಡ್ ಸಿನೇಮಾ ಕನ್ನಡದಲ್ಲಿ ಭಾಷಾಂತರ ಗೊಂಡಿದೆ. ಈ ಸಿನೇಮಾವನ್ನು ಕನ್ನಡಕ್ಕೆ ಭಾಷಾಂತರಿಸಲು ಡಬ್ಬಿಂಗ್ ನಿರ್ದೇಶನ ನೀಡಿದವರು ಮುಂಬಯಿಯ ಹೆಸರಾಂತ ಬರಹಗಾರರು ಹಾಗೂ ಪ್ರಸಿದ್ದ ನುರಿತ ಕಂಠದಾನ ಕಲಾವಿದ ಜಯಶೀಲ ಸುವರ್ಣ ಮತ್ತು ಅರುಷಾ ಎನ್.ಶೆಟ್ಟಿ.

ಬೇರೆ ಭಾಷೆಗಳಿಂದ ಕನ್ನಡಕ್ಕೆ ಡಬ್ ಆಗುವುದರಿಂದ ಕನ್ನಡದ ಬಗ್ಗೆ ಇತರ ಭಾಷೆಯ ಚಲನಚಿತ್ರದವರಿಗೆ ಅರಿವು ಹೆಚ್ಚಾಗುತ್ತದೆ. ಡಬ್ಬಿಂಗ್ ನಿಂದಾಗಿ ನಮಗೆ ಅನ್ಯ ಸಂಸ್ಕೃತಿ ಒಳಿತು ಕೆಡಕುಗಳನ್ನು ನಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶವಿರುತ್ತದೆ. ಈಗ ಡಬ್ಬಿಂಗ್ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿ ಇರುತ್ತದೆ. ಹಾಲಿವುಡ್ ಮತ್ತು ಇತರ ದೊಡ್ಡ ಸಂಸ್ಥೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ವೀಕ್ಷಕರಿಗೆ ಇನ್ನೊಂದು ಆಯ್ಕೆ ಸಿಗುತ್ತದೆ. ವೀಕ್ಷಕರು ಇಂತಹ ಒಳ್ಳೆಯ ಚಿತ್ರಗಳನ್ನು ವೀಕ್ಷಿಸಿ ಪೆÇ್ರೀತ್ಸಾಹಿಸಿದರೆ ಇದು ಕನ್ನಡ ಚಿತ್ರರಂಗದಲ್ಲಿ ಒಂದು ಉತ್ತಮ ಪರಿವರ್ತನೆ ತರಬಹುದು. ಎಂದು ಜಯಶೀಲ ಸುವರ್ಣ ಮತ್ತು ಅರುಷಾ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

 

 




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here