Thursday 8th, May 2025
canara news

2017ನೇ ವಾರ್ಷಿಕ ಕ್ರೀಡೋತ್ಸವ ನಡೆಸಿದ ಗಾಣಿಗ ಸಮಾಜ ಮುಂಬಯಿ

Published On : 16 Apr 2017   |  Reported By : Rons Bantwal


ಕ್ರೀಡೆ ಯೋಗ್ಯತೆ ಅಳೆಯುವ ಮಾಪನವಲ್ಲ: ಕುತ್ಪಾಡಿ ರಾಮಚಂದ್ರ ಗಾಣಿಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.16: ಕ್ರೀಡೆ ಯೋಗ್ಯತೆ ಅಳೆಯುವ ಮಾಪನವಲ್ಲ. ಆರೋಗ್ಯವನ್ನಾಗಿಸುವ ಕಲೆಯಾಗಿದೆ. ಈ ಕ್ರೀಡಾಕೂಟ ಸಮಾಜ ಬಾಂಧವರ ಪ್ರೀತಿ ತೋರುವ ಔದಾರ್ಯವೇ ಹೊರತು ಸ್ಪರ್ಧೆಯಲ್ಲ. ಹೆಚ್ಚುವರಿ ಪರಿಚಯ ಮಾಡಿಕೊಳ್ಳಲು ಅನುಕೂಲಕರ. ಸಂಬಂಧಗಳ ಅರಿವು ಪಡೆಯುವ ಉಪಾಯವೂ ಇದಗಿದೆ. ಜ್ಞಾನ ಎಲ್ಲವುದಕ್ಕಿಂತ ಶ್ರೇಷ್ಠವಾದದ್ದು ಅಂತೆಯೇ ಇಲ್ಲಿ ಪರಸ್ಪರ ಮಾತುಕತೆಯಿಂದ ಸ್ವಸಮುದಾಯದ ಸಂಸ್ಕೃತಿ, ಸಂಬಂಧಗಳ ಜ್ಞಾನೋದಯ ಸಾಧ್ಯವಾಗುದುವು. ಏಕತಾ ಬದುಕು ವ್ಯರ್ಥವಾಗದಂತೆ ಸಾಂಘಿಕ ಜೀವನದ ಅರ್ಥ ಕಲ್ಪಿಸುವಲ್ಲಿ ಇಂತಹ ಅವಕಾಶಗಳು ಪೂರಕವಾಗಿದೆ ಎಂದು ಗಾಣಿಗ ಸಮಾಜ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ ತಿಳಿಸಿದರು.

ಬೃಹನ್ಮುಂಬಯಿಯಲ್ಲಿನ ಗಾಣಿಗ ಸಮಾಜ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಮಾಟುಂಗಾ ಪೂರ್ವದ ಕಿಂಗ್ಸ್ ಸರ್ಕಲ್ ಅಲ್ಲಿನ ಜಿಎಸ್‍ಬಿ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಏಕದಿನದ ವಾರ್ಷಿಕ ಕ್ರೀಡಾಕೂಟ 2017ರ ಅಧ್ಯಕ್ಷತೆ ವಹಿಸಿ ರಾಮಚಂದ್ರ ಗಾಣಿಗ ತಿಳಿಸಿದರು.

ಗಾಣಿಗ ಸಮಾಜ ಮುಂಬಯಿ ಸಂಸ್ಥೆಯ ಹಿರಿಯ ಸದಸ್ಯ ಅಣ್ಣಪ್ಪಯ್ಯ ಕೊಳಂಬೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದ್ದು, ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿüಯಾಗಿ ಬೆಂಗಳೂರುನ ಹಿರಿಯ ಉದ್ಯಮಿ ಬಿ.ಎನ್ ರಾಮಕೃಷ್ಣ ಹಾಗೂ ಗೌರವ ಅತಿಥಿüಗಳಾಗಿ ಗೌರವ ಅತಿಥಿüಗಳಾಗಿ ಸಂಪರ್ಕ ಸುಧಾ ಪತ್ರಿಕೆಯ ಸಂಪಾದಕ ಪ್ರಕಾಶಕÀ ಯು.ಬಾಲಚಂದ್ರ ಕಟಪಾಡಿ, ಸದಾನಂದ ಕಲ್ಯಾಣ್ಪುರ್ ಉಪಸ್ಥಿತರಿದ್ದು ಉದ್ಯಮಿ ರತ್ನಾಕರ್ ಎ.ಶೆಟ್ಟಿ ಥಾಣೆ ಬ್ಯಾಟಿಂಗ್ ಮಾಡಿ ಕ್ರಿಕೇಟ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಅಣ್ಣಪ್ಪಯ್ಯ ಕೊಳಂಬೆ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಬಾಲಚಂದ್ರ ಕಟಪಾಡಿ ಮಾತನಾಡಿ ನಮ್ಮದು ಚಿಕ್ಕದಾದ ಹಿಂದುಳಿದ ಸಮುದಾಯ ಅನ್ನುವ ಮನೋಭಾವಕ್ಕಿಂ ತ ಒಗ್ಗಟ್ಟಿನ ಮೂಲಕ ಮುಂದುವರಿದ ಸಮಾಜ ಅನ್ನುವ ಭಾವನೆ ನಮ್ಮಲ್ಲಿರಲಿ. ಇದು ಕ್ರೀಡಾಕೂಟ ಮಾತ್ರವಲ್ಲ ಸಮಾಜದ ಒಗ್ಗೂಡುವಿಕೆಯ ಅವಕಾಶವಾಗಿದೆ. ಇಲ್ಲಿ ಸ್ಪರ್ಧೆಕ್ಕಿಂತ ಭಾಗವಹಿಸುವಿಕೆ ಮುಖ್ಯವಾದುದು. ಸಮುದಾಯದ ಒಗ್ಗೂಡುವಿಕೆ ಸಂಬಂಧಗಳನ್ನು ಬಲಪಡಿಸಲು ಸಹಕಾರಿಯಾಗಿವೆ. ಆದುದರಿಂದ ಕನಿಷ್ಠ ವರ್ಷಕ್ಕೆರಡು ಬಾರಿಯಾದರೂ ಸ್ವಸಮುದಾಯದ ಕಾರ್ಯಕ್ರಮಗಳಲ್ಲಿ ತೊಡಗಿಸಿ ನಮ್ಮ ಅಸ್ಮಿತೆಯನ್ನು ಬಲಪಡಿಸಬೇಕು ಎಂದು ಕರೆಯಿತ್ತÀರು.

ಆಯೋಜಿಸಲಾಗಿದ್ದ ಕೇರಂ, ಲೆಮನ್ ಎಂಡ್ ಸ್ಪೂನ್, ಮ್ಯೂಸಿಕಲ್ ಚೇಯರ್, ಚಿತ್ರ ಬಿಡಿಸುವ ಸ್ಪರ್ಧೆ, ಬಾಲ್ ಇನ್ ಬಕೇಟ್, ಓಟ ಸ್ಪರ್ಧೆ, ಶಾಟ್‍ಫುಟ್, ತ್ರೋಬಾಲ್, ಕ್ರಿಕೇಟ್ ಪಂದ್ಯಾಟ ಸ್ಪರ್ಧೆಗಳಲ್ಲಿ ನೂರಾರು ಸಮಾಜ ಭಾಂದವರು, ಯುವಕ ಯುವತಿಯರು, ಮಕ್ಕಳು ಭಾಗವಹಿಸಿ ತಮ್ಮಲ್ಲಿನ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಾದಲ್ಲಿ ಗೌರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಉಪಾಧ್ಯಕ್ಷರುಗಳಾದ ಭಾಸ್ಕರ ಎಂ.ಗಾಣಿಗ, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಜೊತೆ ಕಾರ್ಯದರ್ಶಿ ಬಿ.ಜಗದೀಶ್ ಗಾಣಿಗ, ಗೌ| ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಆಶಾ ಹರೀಶ್ ತೋನ್ಸೆ, ಆರತಿ ಸತೀಶ್ ಗಾಣಿಗ, ವೀಣಾ ದಿನೇಶ್ ಗಾಣಿಗ, ಪೂರ್ಣಿಮಾ ಕಲ್ಯಾಣ್ಫುರ್, ವೀಣಾ ರಾವ್ ಚೆಂಬೂರು, ನಿತೀಶ್ ಬಿ.ರಾವ್, ಗೋಪಾಲಕೃಷ್ಣ ಗೋವಿಂದ ಗಾಣಿಗ, ಜಯಂತ್ ಗಾಣಿಗ, ರಾಜೇಶ್ ಕುತ್ಪಾಡಿ, ರಘು ಗಾಣಿಗ ಚಕಲಾ, ಶುಭಾ ಗಣೇಶ್ ಕುತ್ಪಾಡಿ ಸೇರಿದಂತೆ ಇತರೇ ಪದಾಧಿಕಾರಿಗಳು, ಸದಸ್ಯರನೇಕರು ಮತ್ತಿತರರು ಹಾಜರಿದ್ದರು.

ಯುವ ವಿಭಾಗದ ಕಾರ್ಯಾಧ್ಯಕ್ಷ ಗಣೀಶ್ ಆರ್.ಕುತ್ಪಾಡಿ ಸ್ವಾಗತಿಸಿದರು. ರಾಮಚಂದ್ರ ಗಾಣಿಗ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಮಾಜಿ ಕಾರ್ಯದರ್ಶಿ ಬಿ.ವಿ ರಾವ್ ಪ್ರಾರ್ಥನೆಗೈದು ಕಾರ್ಯಕ್ರಮ ನಿರೂಪಿಸಿ ಸ್ಪರ್ಧಾಳುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಚಂದ್ರಶೇಖರ್ ಆರ್.ಗಾಣಿಗ ಧನ್ಯವದಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here