Thursday 8th, May 2025
canara news

ಜಗಳದ ಮಧ್ಯೆ ತಂದೆಯನ್ನೇ ಕೊಂದ ಮಗ

Published On : 16 Apr 2017   |  Reported By : Canaranews Network


ಮಂಗಳೂರು: ಮಗನೊಬ್ಬ ತಂದೆಯನ್ನೇ ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಂಗಾನ ಎಂಬಲ್ಲಿ 82 ವರ್ಷದ ಪೌಲ್ ಗೋವಿಯಸ್ ಎಂಬುವವರನ್ನ 45 ವರ್ಷದ ಪುತ್ರ ಸ್ಟ್ಯಾಂಡಿ ಗೋವಿಯಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಪೌಲ್ ಮಗನ ಜೊತೆ ವಾಸವಾಗಿದ್ದರು. ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ.

ಈ ವೇಳೆ ಕೋಪದ ಭರದಲ್ಲಿ ಗೋವಿಯಸ್ ತನ್ನ ತಂದೆ ಪೌಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಎದೆ, ಹೊಟ್ಟೆ, ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಪೌಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಎರಡು ವರ್ಷಗಳ ಹಿಂದಷ್ಟೇ ಪೌಲ್ ಪತ್ನಿ ಲಿಲ್ಲಿ ಗೋಯಸ್ ಸಾವನ್ನಪ್ಪಿದ್ದರು.

ಲಿಲ್ಲಿ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಸಂಬಂಧಿಕರು ಇದೊಂದು ಕೊಲೆ ಎಂದು ಆಪಾದಿಸಿದ್ದರು. ಆದರೆ ಇನ್ನೂ ಪೌಲ್ ಪತ್ನಿ ಸಾವಿನ ರಹಸ್ಯ ಬಯಲಾಗಿಲ್ಲ. ಇದೀಗ ಪೌಲ್ ಮಗನಿಂದಲೇ ಕೊಲೆಯಾಗಿದ್ದಾರೆ. ಅಪ್ಪ-ಮಗನ ಮಧ್ಯೆ ಆಸ್ತಿ ವಿಚಾರದಲ್ಲಿ ಜಗಳವುಂಟಾಗಿತ್ತು. ಇದುವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here