Saturday 2nd, December 2023
canara news

ಬಿಲ್ಲವರ ಭವನದಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು ಆರೋಗ್ಯ ವ್ಯವಸ್ಥೆ ತರಬೇತಿ

Published On : 17 Apr 2017   |  Reported By : Rons Bantwal


ಆರೋಗ್ಯ ಕಾಳಜಿಯಿಂದ ಸ್ವಸ್ಥತೆಯ ಹತೋಟಿ:ಡಾ| ಸತೀಶ್‍ಶಂಕರ್ ಕಾಮತ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.17: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು ಹೆಲ್ತ್ ಮ್ಯಾನೇಜ್‍ಮೆಂಟ್ ಟ್ರೆನಿಂಗ್ ಕಾರ್ಯಕ್ರಮ ನೆರವೇರಿಸಿತು.

ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಶಿಬಿರದಲ್ಲಿ ಹೆಸರಾಂತ ವೈದ್ಯಾಧಿಕಾರಿ ಡಾ| ಸತೀಶ್‍ಶಂಕರ್ ಕಾಮತ್ ಸಚ್ಚರಿಪೇಟೆ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು. ಮುಖ್ಯ ಅತಿಥಿsಯಾಗಿ ದಂತ ವೈದ್ಯ ಡಾ| ಸತೀಶ್ ಎಂ.ಸನಿಲ್, ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ ವೇದಿಕೆಯಲ್ಲಿ ಆಸೀನರಾಗಿದ್ದರು.

ಆಧುನಿಕ ಜನತೆಯಲ್ಲಿ ಆತ್ಮವಿಶ್ವಾಸದ ಕೊರತೆಯಿಂದಾಗಿ ಆರೋಗ್ಯ ಕೆಡಿಸುತ್ತಿದೆ. ಧಾವಂತದ ಬದುಕಿನಲ್ಲಿ ಆರೋಗ್ಯ ಸಂಪಾದನೆ ಅಸಾಧ್ಯವಾಗಿದ್ದು ಆರೋಗ್ಯ ಕಾಳಜಿಯಿಂದ ಮಾತ್ರ ಸ್ವಸ್ಥತೆಯ ಹತೋಟಿಯಲ್ಲಿಡಲು ಸಾಧ್ಯ. ಔಷಧಕ್ಕಿಂತಲೂ ಆರೋಗ್ಯ ಕಾಳಜಿಯಿಂದಲೇ ಸ್ವಸ್ಥತೆ ಹತೋಟಿಯಲ್ಲಿ ಇರಿಸಲು ಸಾಧ್ಯ. ಸೌಖ್ಯ ಚಿಂತನೆಗೆ ಇಂತಹ ಆರೋಗ್ಯ ಶಿಬಿರಗಳ ಅನುಭವಗಳು ಅವಶ್ಯವಾಗಿದೆ ಎಂದು ಡಾ| ಸತೀಶ್‍ಶಂಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ ಕಾರ್ನಾಡ್, ಗೋಪಾಲ್ ಕಲ್ಯಾಣ್ಪುರ್, ಮೋರ್ಲಾ ರತ್ನಾಕರ್ ಶೆಟ್ಟಿ, ರವಿರಾಜ್ ಕೆ.ಕಲ್ಯಾಣ್ಪುರ್, ಗೌ| ಜೊತೆ ಕಾರ್ಯದರ್ಶಿಗಳಾದ ಧನಂಜಯ ಎಸ್.ಕೋಟ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ಸದಾಶಿವ ಎ.ಕರ್ಕೇರ, ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಹರೀಶ್ ಜಿ.ಪೂಜಾರಿ, ಶೇಖರ್ ಸಾಲ್ಯಾನ್ ಸಾಂತಕ್ರೂಜ್, ರವೀಂದ್ರ ಎ.ಅವಿೂನ್, ಬೇಬಿ ಎಸ್.ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಸಕ್ತ ಜನತೆಗೆ ಅತ್ಯವಶ್ಯವಾಗಿರುವ ಇಂತಹ ಮಾಹಿತಿಕಾರ್ಯಗಾರದಲ್ಲಿ ಪಾಲ್ಗೊಳ್ಳದವರು ಆರೋಗ್ಯಭಾಗ್ಯವ ನ್ನೇ ಕಳಕೊಂಡರೇ ಎನ್ನುವುದು ಪಾಲ್ಗೊಂಡಿದ್ದ ಬೆರಳೆಣಿಕೆಯ ಸಭಿಕರಲ್ಲಿ ಪ್ರಶ್ನೆಯಾಗಿ ಮೂಡಿತು.

ಗುರು ನಾರಾಯಣ ರಾತ್ರಿ ಶಾಲಾ ವಿದ್ಯಾಥಿರ್üಗಳು ಪ್ರಾರ್ಥನೆಯನ್ನಾಡಿದರು. ವಿಶ್ವನಾಥ್ ತೋನ್ಸೆ ಅತಿಥಿüಗಳನ್ನು ಪರಿಚಯಿಸಿದರು. ಭಾಸ್ಕರ ವಿ.ಬಂಗೇರ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ
ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ (ಉತ್ಹಾನ ದ್ವಾದಶಿ ) ಆಚರಣೆ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ
ಸಾಹಿತಿ, ನಿವೃತ್ತ ಶಿಕ್ಷಕಿ ಮೇರಿ ಬಿ.ಪಿಂಟೋ ನಿಧನ

Comment Here