ಶಿಬಿರ ನಡೆಸಿದ ಸಂಪನ್ಮೂಲ ವೈದ್ಯಾಧಿಕಾರಿಗಳಿಗೆ ಸನ್ಮಾನ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ, ಎ.17: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು ಆರೋಗ್ಯ ಕಾರ್ಯನಿರ್ವಹಣಾ ಶಿಬಿರ ಕಾರ್ಯಕ್ರಮ ನೆರವೇರಿಸಿದ್ದು, ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಶಿಬಿರದಲ್ಲಿ ಹೆಸರಾಂತ ವೈದ್ಯಾಧಿಕಾರಿ ಡಾ| ಸತೀಶ್‍ಶಂಕರ್ ಕಾಮತ್ ಸಚ್ಚರಿಪೇಟೆ ದೀಪ ಪ್ರಜ್ವಲಿಸಿ ಚಾಲನೆಯನ್ನೀಡಿದರು.
ಹೆಸರಾಂತ ತಜ್ಞ ಡಾ| ಕರುಣಾಕರ ಎನ್.ಬಂಗೇರಾ, ದಂತ ವೈದ್ಯ ಡಾ| ಸತೀಶ್ ಎಂ.ಸನಿಲ್ ಉಪಸ್ಥಿತರಿದ್ದು ಶಿಬಿರ ನಡೆಸಿದರು. ಈ ಸಂದರ್ಭದಲ್ಲಿ ಅತಿಥಿüಗಳಾಗಿ ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಹಾಗೂ ವೈದ್ಯಾಧಿಕಾರಿ ಡಾ| ವಿಶ್ವನಾಥ ಡಿ.ಅವಿೂನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ರಾಜ ವಿ.ಸಾಲ್ಯಾನ್, ಭಾಸ್ಕರ ವಿ.ಬಂಗೇರ, ಶಂಕರ ಡಿ.ಪೂಜಾರಿ ಮತ್ತು ಡಾ| ಯು.ಧನಂಜಯ ಕುಮಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ.ಕೋಟ್ಯಾನ್ ಉಪಸ್ಥಿತರಿದ್ದು ಸಂಪನ್ಮೂಲವ್ಯಕ್ತಿಗಳಾಗಿದ್ದು ಶಿಬಿರ ನಡೆಸಿದ ಡಾ| ಸತೀಶ್‍ಶಂಕರ್ ಕಾಮತ್, ಡಾ| ಕರುಣಾಕರ ಎನ್.ಬಂಗೇರಾ, ಡಾ| ಸತೀಶ್ ಎಂ.ಸನಿಲ್, ಡಾ| ವಿಶ್ವನಾಥ ಡಿ.ಅವಿೂನ್ (ಪತ್ನಿ ಸುಮಲತಾ ಅವರನ್ನೊಳಗೊಂಡು) ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಡಾ| ವಿಶ್ವನಾಥ ಕಾರ್ನಾಡ್, ಗೋಪಾಲ್ ಕಲ್ಯಾಣ್ಪುರ್, ಮೋರ್ಲಾ ರತ್ನಾಕರ್ ಶೆಟ್ಟಿ, ರವಿರಾಜ್ ಕೆ.ಕಲ್ಯಾಣ್ಪುರ್, ಗೌ| ಜೊತೆ ಕಾರ್ಯದರ್ಶಿಗಳಾದ ಧನಂಜಯ ಎಸ್.ಕೋಟ್ಯಾನ್, ಪ್ರೇಮನಾಥ ಪಿ.ಕೋಟ್ಯಾನ್, ಗೌ| ಜೊತೆ ಕೋಶಾಧಿಕಾರಿಗಳಾದ ಸದಾಶಿವ ಎ.ಕರ್ಕೇರ, ರಾಜೇಶ್ ಜೆ.ಬಂಗೇರ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಹರೀಶ್ ಜಿ.ಪೂಜಾರಿ, ಕೆ.ಶಂಕರ್ ಸುವರ್ಣ ಖಾರ್, ಶೇಖರ್ ಸಾಲ್ಯಾನ್ ಸಾಂತಕ್ರೂಜ್, ರವೀಂದ್ರ ಎ.ಅವಿೂನ್, ಬೇಬಿ ಎಸ್.ಕುಕ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಗುರು ನಾರಾಯಣ ರಾತ್ರಿ ಶಾಲಾ ವಿದ್ಯಾಥಿರ್üಗಳು ಪ್ರಾರ್ಥನೆಯನ್ನಾಡಿದರು. ವಿದ್ಯಾ ಉಪ ಸಮಿತಿ ಕಾರ್ಯದರ್ಶಿ ವಿಶ್ವನಾಥ್ ತೋನ್ಸೆ ಅತಿಥಿüಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.