Friday 8th, December 2023
canara news

ಎಲ್ಲಾ ಸ್ಥಾನಗಳಿಗೂ ಸ್ಪರ್ಧೆ: ಎಚ್ ಡಿಕೆ

Published On : 18 Apr 2017   |  Reported By : Canaranews Network


ಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ೨೨೪ ಸ್ಥಾನಗಳಲ್ಲೂ ಪಕ್ಷ ಸ್ಪರ್ಧಿಸಲಿದೆ ಹಾಗೂ ಯಾವುದೇ ಪಕ್ಷದ ಜೊತೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಸ್ ಗೆ ಬಹುಮತ ಲಭಿಸುವ ಭರವಸೆ ಇದೆ. ಉತ್ತರ ಕರ್ನಾಟಕದ ಪ್ರವಾಸ ವೇಳೆ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಂದೊಮ್ಮೆ ಬಹುಮತ ಲಭಿಸದಿದ್ದರೆ ಸರ್ಕಾರ ರಚನೆ ಕುರಿತಂತೆ ಜೆಡಿಎಸ್ ಯಾರ ಜತೆಯೂ ಮೈತ್ರಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿ ಅನುಭವವಾಗಿದೆ. ಸ್ಪಷ್ಟ ಬಹುಮತ ಲಭಿಸದಿದ್ದರೆ ಮತ್ತೆ ಚುನಾವಣೆ ಎದುರಿಸುತ್ತೇವೆ ಎಂದರು.




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here