Saturday 2nd, August 2025
canara news

ಸದಾನಂದ ಗೌಡರಿಂದ ರಾಷ್ಟ್ರಪತಿಗಳಿಗೆ ಕಂಬಳ ಮಸೂದೆ ಸಲ್ಲಿಕೆ

Published On : 19 Apr 2017   |  Reported By : Canaranews Network


ಮಂಗಳೂರು: ಕೇಂದ್ರ ಅಂಕಿ ಅಂಶ ಹಾಗೂ ಯೋಜನಾ ಅನುಷ್ಠಾನ ಇಲಾಖೆ ಸಚಿವ ಡಿ ವಿ ಸದಾನಂದ ಗೌಡ ಅವರು ಮಂಗಳವಾರ ಕಂಬಳ ಮಸೂದೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲಿಸಿದ್ದಾರೆ. ಕಂಬಳ ಕ್ರೀಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಂಡಿಸಿರುವ ಮಸೂದೆಯನ್ನು ಕೆಲವೊಂದು ನ್ಯೂನ್ಯತೆಗಳನ್ನು ಕೇಂದ್ರ ಗೃಹ ಇಲಾಖೆ ಸರಿಪಡಿಸಿದ್ದು ಇದಕ್ಕೆ ಅಂಕಿತ ಹಾಕುವ ನಿಟ್ಟಿನಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಡಿವಿಎಸ್, 'ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸಲಾದ ಕಂಬಳ ಕುರಿತ ಮಸೂದೆಯಲ್ಲಿ ನಿಯಮ ಪಾಲನೆ ಯಾರು ಮಾಡುತ್ತಾರೆಂದು ಉಲ್ಲೇಖಿಸಿಲ್ಲ.ಆದರೆ, ಜಲ್ಲಿಕಟ್ಟುವಿನಲ್ಲಿ ರಾಜ್ಯವೇ ನಿಯಮ ಪಾಲನೆ ಮಾಡುವ ಬಗ್ಗೆ ಲಿಖಿತವಾಗಿ ಉಲ್ಲೇಖಿಸಿರುವುದರಿಂದ ಜಲ್ಲಿಕಟ್ಟಿಗೆ ಜಯ ಸಿಕ್ಕಿದೆ. ಹೀಗಾಗಿ ಕಂಬಳಕ್ಕೆ ಕೂಡಾ ರಾಷ್ಟ್ರಪತಿ ಶೀಘ್ರವೇ ಸಹಿ ಹಾಕುವ ವಿಶ್ವಾಸವಿದೆ' ಎಂದರು




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here